For Quick Alerts
  ALLOW NOTIFICATIONS  
  For Daily Alerts

  ಖ್ಯಾತ ನಿರ್ದೇಶಕನ ಚಿತ್ರದಲ್ಲಿ ವಿಜಯ್ ಮತ್ತು ಜೂ ಎನ್ ಟಿ ಆರ್? ಮಲ್ಟಿ ಸ್ಟಾರರ್ ಚಿತ್ರಕ್ಕೆ ಭರ್ಜರಿ ತಯಾರಿ

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟರಲ್ಲಿ ತೆಲುಗು ಸ್ಟಾರ್ ಜೂ.ಎನ್.ಟಿ.ಆರ್ ಮತ್ತು ತಮಿಳು ಸ್ಟಾರ್ ನಟ ದಳಪತಿ ವಿಜಯ್ ಕೂಡ ಇಬ್ಬರು. ಇಬ್ಬರ ಬಗ್ಗೆ ಒಂದು ಬ್ರೇಕಿಂಗ್ ಸುದ್ದಿ ಹರಿದಾಡುತ್ತಿದೆ. ಜೂ.ಎನ್ ಟಿ ಆರ್ ಮತ್ತು ವಿಜಯ್ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

  ಅಂದಹಾಗೆ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸುತ್ತಾರೆ ಮಾತು ಕಳೆದ ಎರಡು ವರ್ಷಗಳಿಂದ ಕೇಳಿಬರುತ್ತಿದೆ. ಆದರೀಗ ಈ ಮಾತು ನಿಜವಾಗುವ ಸಮಯ ಹತ್ತಿರ ಬಂದಿದೆ. ಚಿತ್ರಕ್ಕೆ ತಮಿಳಿನ ಸೂಪರ್ ಹಿಟ್ ನಿರ್ದೇಶಕ ಆಟ್ಲೀ ಆಕ್ಷನ್ ಕಟ್ ಹೇಳುತ್ತಿದ್ದಾರಂತೆ. ಈಗಾಗಲೇ ಇಬ್ಬರು ಸ್ಟಾರ್ ನಟರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ಜೂ ಎನ್‌ಟಿಆರ್ ರಾಜಕೀಯ ಎಂಟ್ರಿ ಬಗ್ಗೆ ಅನುಮಾನ ಮೂಡಿಸಿದ RRR ಹೊಸ ಪೋಸ್ಟರ್?ಜೂ ಎನ್‌ಟಿಆರ್ ರಾಜಕೀಯ ಎಂಟ್ರಿ ಬಗ್ಗೆ ಅನುಮಾನ ಮೂಡಿಸಿದ RRR ಹೊಸ ಪೋಸ್ಟರ್?

  ದೊಡ್ಡ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು, ಸದ್ಯದಲ್ಲೇ ಅಧಿಕೃತ ಮಾಹಿತಿ ಬಹಿರಂಗವಾಗಲಿದೆ. ಬಿಗ್ ನಟರು, ದೊಡ್ಡ ಬಜೆಟ್ ಅಂದ್ಮೇಲೆ ಈ ಕಾಲಕ್ಕೆ ಪ್ಯಾನ್ ಇಂಡಿಯಾ ಪ್ಲಾನ್ ಮಾಡದೆ ಇರಲು ಸಾಧ್ಯವಿಲ್ಲ. ಹಾಗಾಗಿ ದಕ್ಷಿಣ ಭಾರತದ ಎಲ್ಲಾ ಭಾಷೆಯ ಜೊತೆಗೆ ಹಿಂದಿಯಲ್ಲೂ ತೆರೆಗೆ ಬರುವ ಸಾಧ್ಯತೆ ಇದೆ. ಮಲ್ಟಿ ಸ್ಟಾರರ್ ಸಿನಿಮಾ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಮೆಚ್ಚುವಂತ ಕತೆ ಮಾಡಿ ಸಮಾನವಾದ ಪಾತ್ರ ಹಂಚಿಕೆ ಮಾಡುವುದು ಸವಾಲಿನ ಕೆಲಸ.

  ಹಾಗಾಗಿ ವಿಜಯ್ ಮತ್ತು ಜೂ.ಎನ್ ಟಿ ಆರ್ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಆದಷ್ಟು ಬೇಗ ಸಿನಿಮಾ ಸೆಟ್ಟೇರಲಿ ಎನ್ನುವುದು ಅಭಿಮಾನಿಗಳ ಆಶಯ. ಅಂದಹಾಗೆ ವಿಜಯ್ ಸದ್ಯ ಇನ್ನು ಹೆಸರಿಡದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಜೂ.ಎನ್ ಟಿ ಆರ್, ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬರ ಬಳಿ ಇರುವ ಸಿನಿಮಾಗಳು ಮುಗಿದ ಬಳಿಕ ಮಲ್ಟಿ ಸ್ಟಾರರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

  English summary
  Actor Vijay and Jr ntr team up with director Atlee for Multi starrer movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X