ಎಲ್ರೂ ನೋಡ್ರಪ್ಪಾ...ವಿದೇಶಿ ಗರ್ಲ್ ಫ್ರೆಂಡ್ ಜೊತೆ ವಿಜಯ ದೇವರಕೊಂಡ.!

'ಅರ್ಜುನ್ ರೆಡ್ಡಿ' ಚಿತ್ರದ ಮೂಲಕ ಓವರ್ ನೈಟ್ ಸೂಪರ್ ಸ್ಟಾರ್ ನಟ ಆದ ವಿಜಯ ದೇವರಕೊಂಡ, ಇತ್ತೀಚಿಗಷ್ಟೆ 'ಗೀತಾಗೋವಿಂದಂ' ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸಿದ್ದರು. ಈ ಸಿನಿಮಾನೂ ಸೂಪರ್ ಹಿಟ್ ಆಯ್ತು.

'ಗೀತಾ ಗೋವಿಂದಂ' ಚಿತ್ರದಲ್ಲಿ ವಿಜಯ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಅವರನ್ನ ನೋಡಿ ಎಲ್ಲರೂ ಮೆಚ್ಚಿಕೊಂಡು ಈ ಜೋಡಿಯನ್ನ ಆಫ್ ಸ್ಕ್ರೀನ್ ನಲ್ಲೂ ಒಂದಾದ್ರೆ ಎಷ್ಟು ಚೆಂದ ಎಂದು ಹಾಡಿಹೊಗಳಿದವರೇ ಹೆಚ್ಚು. ಬಹುಶಃ ಅದು ಆಗಲ್ಲ ಎಂದು ಗೊತ್ತಿದ್ದರೂ ಹೀಗೊಂದು ಕಾಮೆಂಟ್ ಮಾಡ್ತಿದ್ದರು.

ಈ ಮಧ್ಯೆ ವಿಜಯ ದೇವರಕೊಂಡ ಅವರಿಗೆ ಓರ್ವ ಗರ್ಲ್ ಫ್ರೆಂಡ್ ಇದ್ದಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ, ಅದು ಯಾರು, ಎಲ್ಲಿದ್ದಾರೆ, ಹೇಗಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಈ ವಿಷ್ಯವನ್ನ ಖುದ್ದು ವಿಜಯ ದೇವರಕೊಂಡ ಅವರು ಹೇಳಿಕೊಂಡಿದ್ದರಂತೆ. ಆದ್ರೀಗ, ವಿದೇಶಿ ಹುಡುಗಿಯೊಬ್ಬರ ಜೊತೆ ದೇವರಕೊಂಡ ಅವರ ತುಂಬಾ ಆತ್ಮೀಯವಾಗಿ ಕಾಣಿಸಿಕೊಂಡಿರುವ ಕೆಲವು ಫೋಟೋಗಳು ವೈರಲ್ ಆಗಿದೆ. ಬಹುಶಃ ಇವರೇ ದೇವರಕೊಂಡ ಗೆಳತಿ ಇರಬಹುದು.! ಮುಂದೆ ನೋಡಿ.....

ಫಾರೀನ್ ಗೆಳತಿ, ಯಾರು ಈಕೆ.?

ಫಾರೀನ್ ಗೆಳತಿ, ಯಾರು ಈಕೆ.?

ತೆಲುಗು ನಟ ವಿಜಯದೇವರಕೊಂಡ ಅವರು ಓರ್ವ ವಿದೇಶಿ ಹುಡುಗಿಯ ಜೊತೆ ಆತ್ಮೀಯವಾಗಿ ಕಾಣಿಸಿಕೊಂಡಿರುವ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಜಯ್ ಗೆ ಓರ್ವ ಗರ್ಲ್ ಫ್ರೆಂಡ್ ಇದ್ದಾರೆ ಎನ್ನಲಾಗಿತ್ತು. ಆದ್ರೆ, ಆಕೆ ಯಾರು ಎಂದು ಖಚಿತ ಮಾಹಿತಿ ಸಿಕ್ಕಿರಲಿಲ್ಲ. ಇದೀಗ, ಈ ಫೋಟೋಗಳನ್ನ ನೋಡಿ ಬಹುಶಃ ಈಕೆಯೇ ಆ ಹುಡುಗಿ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಅರ್ಜುನ್ ರೆಡ್ಡಿಗೂ ಮೊದಲು...

ಅರ್ಜುನ್ ರೆಡ್ಡಿಗೂ ಮೊದಲು...

ಅಂದ್ಹಾಗೆ, ಈ ಫೋಟೋಗಳು ಈಗಿನದು ಅಲ್ಲ ಎನ್ನಲಾಗುತ್ತಿದೆ. 'ಅರ್ಜುನ್ ರೆಡ್ಡಿ' ಸಿನಿಮಾ ಬರುವ ಮುಂಚಿನದ್ದು ಈ ಫೋಟೋಗಳು. ಈಗ ವೈರಲ್ ಆಗುತ್ತಿದೆ ಅಷ್ಟೇ ಎನ್ನುತ್ತಿದ್ದಾರೆ ವಿಜಯ ದೇವರಕೊಂಡ ಆಪ್ತರು. ಆದ್ರೆ, ತೆಲುಗು ಮಾಯನಗರಿಯಲ್ಲಿ ಈ ಫೋಟೋಗಳು ಟ್ರೆಂಡಿಂಗ್ ನಲ್ಲಿದೆ. ಆದ್ರೆ, ಆ ಫೋಟೋದಲ್ಲಿರುವ ಹುಡುಗಿಯ ಬಗ್ಗೆ ಯಾವ ಮಾಹಿತಿಯೂ ಇಲ್ಲ.

ಲವ್ ಬ್ರೇಕ್ ಅಪ್ ಆಗಿದೆಯಂತೆ

ಲವ್ ಬ್ರೇಕ್ ಅಪ್ ಆಗಿದೆಯಂತೆ

ಮತ್ತೊಂದು ಮೂಲಗಳ ಪ್ರಕಾರ ವಿಜಯ ದೇವರಕೊಂಡ ಅವರಿಗೆ ಗೆಳತಿ ಇದ್ದದ್ದು ನಿಜ. ಪ್ರೀತಿ ಮಾಡುತ್ತಿದ್ದುದ್ದು ನಿಜ. ಆದ್ರೆ, ಈಗ ಆ ಸಂಬಂಧವಿಲ್ಲವಂತೆ. ಆ ಪ್ರೀತಿ ಬ್ರೇಕ್ ಅಪ್ ಆಗಿದ್ದು, ಈಗ ಕೇವಲ ಸಿನಿಮಾಗಳ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದಾರಂತೆ.

ಜಗನ್ ಪಾತ್ರದಲ್ಲಿ ದೇವರಕೊಂಡ

ಜಗನ್ ಪಾತ್ರದಲ್ಲಿ ದೇವರಕೊಂಡ

ಸದ್ಯ ವಿಜಯದೇವರಕೊಂಡ ತೆಲುಗು ಮತ್ತು ತಮಿಳು ಭಾಷೆಯಲ್ಲಿ ನೋಟ ಎಂಬ ಸಿನಿಮಾ ಮಾಡ್ತಿದ್ದಾರೆ. ಅದಾದ ಬಳಿಕ ಡಿಯರ್ ಕಾಮ್ರೆಡ್ ಸಿನಿಮಾ ಮಾಡಲಿದ್ದಾರೆ, ಈ ಮಧ್ಯೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ್ ರೆಡ್ಡಿ ಅವರ ಬಯೋಪಿಕ್ ಸಿನಿಮಾದಲ್ಲಿ ಜಗನ್ ಪಾತ್ರವನ್ನ ದೇವರಕೊಂಡು ಮಾಡಲಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
Telugu actor Vijay Devarakonda's intimacy photos with anonymous girl Viral in the media. Reports suggest that Photos are related to a Photo shoot before Arjun Reddy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X