Geetha Govindam: ರಶ್ಮಿಕಾ ಬದುಕಲ್ಲಿ ಸಂತೋಷ, ದುಃಖ ಎರಡೂ ತಂದ 'ಗೀತಾಗೋವಿಂದಂ' ಸೀಕ್ವೆಲ್?
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಗೀತಾಗೋವಿಂದಂ' ಸಿನಿಮಾ 5 ವರ್ಷಗಳ ಹಿಂದೆ ಸಂಚಲನ ಸೃಷ್ಟಿಸಿತ್ತು. ಪರಶುರಾಮ್ ನಿರ್ದೇಶನದ ಈ ರೊಮ್ಯಾಂಟಿಕ್ ಕಾಮೆಡಿ ಎಂಟರ್‌ಟೈನರ್ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. ಈ ಸಿನಿಮಾ ವಿಜಯ್- ರಶ್ಮಿಕಾ ಇಬ್ಬರ ಸಿನಿಕರಿಯರ್‌ಗೂ ದೊಡ್ಡ ಟರ್ನಿಂಗ್ ಪಾಯಿಂಟ್ ಆಗಿತ್ತು.
ಸದ್ಯ 'ಗೀತಾಗೋವಿಂದಂ' ಸೀಕ್ವೆಲ್ ಬಗ್ಗೆ ಟಾಲಿವುಡ್‌ನಲ್ಲಿ ಬಿಸಿಬಿಸಿ ಚರ್ಚೆ ಆಗುತ್ತಿದೆ. ಮತ್ತೊಮ್ಮೆ ವಿಜಯ್- ರಶ್ಮಿಕಾ ಒಟ್ಟಿಗೆ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬರ್ತಿದೆ. 5 ವರ್ಷಗಳ ಹಿಂದೆ ಕೇವಲ ಐದಾರು ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ವಿಜಯ್- ರಶ್ಮಿಕಾ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಇದೇ ಸಿನಿಮಾ ಇಬ್ಬರನ್ನು ಆತ್ಮೀಯ ಸ್ನೇಹಿತರನ್ನಾಗಿಸಿತ್ತು.

ವಿಜಯ್ ಗೋವಿಂದ್ ಎನ್ನುವ ಎಂಜಿನಿಯರಿಂಗ್ ಕಾಲೇಜ್ ಲೆಕ್ಚರ್. ತನ್ನ ಭಾವಿ ಹೆಂಡತಿಯ ಆತನಿಗೆ ಏನೇನೋ ಕಲ್ಪನೆಗಳಿರುತ್ತವೆ. ಅಂತಹ ಸಮಯದಲ್ಲಿ ಗೀತಾಳನ್ನು ನೋಡ್ತಾನೆ. ಇವಳೇ ಗೋವಿಂದ್ ತನ್ನ ಕಲ್ಪನೆಯ ಹುಡುಗಿ ಎಂದು ಫಿಕ್ಸ್ ಆಗುತ್ತಾನೆ. ಹೇಗಾದರೂ ಅವಳಿಗೆ ತನ್ನ ಪ್ರೀತಿ ಹೇಳಬೇಕೆಂದುಕೊಳ್ತಾನೆ. ಆದರೆ ಒಂದು ಅನಿರೀಕ್ಷಿತ ಘಟನೆ ಸಂಭವಿಸಿ ಗೀತಾಗೆ ಗೋವಿಂದ್ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ. ಆತನನ್ನು ದ್ವೇಷಿಸಲು ಆರಂಭಿಸುತ್ತಾಳೆ. ಆದರೆ ಆತನ ಜೊತೆಗೆ ಪ್ರಯಾಣಿಸಬೇಕಾಗಿ ಬರುತ್ತದೆ. ಈ ಪ್ರಯಾಣದಲ್ಲಿ ಏನಾಗುತ್ತೆ? ಅಷ್ಟಕ್ಕೂ ಗೀತಾ, ಗೋವಿಂದ್ ಜೊತೆ ಯಾಕೆ ಪ್ರಯಾಣಿಸುವಂತಾಯ್ತು? ಆ ಅನಿರೀಕ್ಷಿತ ಘಟನೆ ಏನು? ಕೊನೆಗೆ ಏನಾಗುತ್ತದೆ? ಅನ್ನೋದೇ ಸಿನಿಮಾ ಕತೆ.
ಸಿಂಪಲ್ ಕಥೆ ಆದರೂ ವಿಜಯ್-ರಶ್ಮಿಕಾ ನಟನೆ ಪ್ಲಸ್ ಆಗಿತ್ತು. 'ಇಂಕೇಂ ಇಂಕೇಂ ಇಂಕೇಂ ಕಾವಾಲೆ' ಹಾಡು ಹಿಡಿಸಿದ ಗುಂಗು ಅಷ್ಟಿಷ್ಟಲ್ಲ. ಗೋಪಿ ಸುಂದರ್ ಮ್ಯೂಸಿಕ್ ಅದಕ್ಕೆ ಸಾಥ್ ಕೊಟ್ಟಿತ್ತು. ಸದ್ಯ 'ಗೀತಾಗೋವಿಂದಂ' ಸಿನಿಮಾ ಸೀಕ್ವೆಲ್ ಬರುತ್ತದೆ ಎನ್ನಲಾಗ್ತಿದೆ. ಸದ್ಯ ವಿಜಯ್ ಹಾಗೂ ರಶ್ಮಿಕಾ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಪರಶುರಾಮ್ ಹೊಸ ಕತೆ ಮಾಡ್ತಿದ್ದು ಇಬ್ಬರು ಡೇಟ್ಸ್ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ.
'ಗೀತಾಗೋವಿಂದಂ' ಕತೆ ಮುಗೀತು. ಆ ಸಿನಿಮಾ ಸೀಕ್ವೆಲ್ ಬರುತ್ತದೆ ಎನ್ನುವುದು ಸುಳ್ಳು. ಇದೆಲ್ಲಾ ಕೇವಲ ವದಂತಿ ಎನ್ನುವ ಮಾತುಗಳು ಕೇಳಿಬರ್ತಿದೆ. ಪರಶುರಾಮ್ ನಿರ್ದೇಶನದಲ್ಲಿ ವಿಜಯ್- ರಶ್ಮಿಕಾ ನಟಿಸುವ ಸಾಧ್ಯತೆಯಿದೆ. ಆದರೆ ಅದು 'ಗೀತಾಗೋವಿಂದಂ' ಮುಂದುವರೆದ ಭಾಗ ಅಲ್ಲ. ಬೇರೆಯದ್ದೇ ಕತೆ ಎನ್ನುವ ಚರ್ಚೆ ನಡೀತಿದೆ. ವಿಜಯ್- ರಶ್ಮಿಕಾ ಇಬ್ಬರು ಈಗಾಗಲೇ 2 ಸಿನಿಮಾಗಳಲ್ಲಿ ನಟಿಸಿದ್ದಾರೆ. ಹ್ಯಾಟ್ರಿಕ್ ಸಿನಿಮಾ ಮಾಡಿದರೆ ಅಭಿಮಾನಿಗಳಿಗೆ ಇಷ್ಟವಾಗುವುದು ಗ್ಯಾರೆಂಟಿ.
'ಗೀತಾಗೋವಿಂದಂ' ರಶ್ಮಿಕಾ ಸಿನಿಕರಿಯರ್‌ಗೆ ದೊಡ್ಡ ಬ್ರೇಕ್ ಕೊಡ್ತು. ಈ ಸಿನಿಮಾ ಬಳಿಕ ಟಾಲಿವುಡ್‌ನಲ್ಲಿ ಫುಲ್ ಬ್ಯುಸಿಯಾದರು. ಮುಂದೆ ಬಾಲಿವುಡ್ ಅವಕಾಶಗಳು ಅರಸಿ ಬಂದವು. ಆದರೆ ಇದೇ ಚಿತ್ರದ ಒಂದು ಸನ್ನಿವೇಶ ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿಗೆ ಎಂಗೇಜ್‌ಮೆಂಟ್ ಮುರಿದು ಬೀಳಲು ಕಾರಣವಾಯಿತು ಎನ್ನುವ ವಾದವೂ ಇದೆ. ಒಟ್ನಲ್ಲಿ ರಶ್ಮಿಕಾ ಎಂದೂ ಮರೆಯದ ಸಿನಿಮಾ 'ಗೀತಾಗೋವಿಂದಂ'.
ಸದ್ಯ ರಶ್ಮಿಕಾ ಮಂದಣ್ಣ 'ಪುಷ್ಪ-2' ಚಿತ್ರದಲ್ಲಿ ನಟಿಸ್ತಿದ್ದಾರೆ. 'ರೈನ್‌ಬೋ' ಎನ್ನುವ ಮಹಿಳಾ ಪ್ರಧಾನ ಸಿನಿಮಾ ಕೂಡ ಆಕೆಯ ಕೈಯಲ್ಲಿದೆ. ಬಾಲಿವುಡ್‌ನಲ್ಲಿ 'ಅನಿಮಲ್' ಸಿನಿಮಾ ಬಿಡುಗಡೆಗೆ ಸಿದ್ಧವಾಗ್ತಿದೆ. ಧನುಷ್ ನಟನೆಯ ಮುಂದಿನ ಚಿತ್ರಕ್ಕೂ ರಶ್ಮಿಕಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.


Click it and Unblock the Notifications











