ಮೆಗಾಸ್ಟಾರ್ ಚಿರಂಜೀವಿ ಸಿನಿಮಾದಲ್ಲಿ ವಿಜಯ್ ದೇವರಕೊಂಡ?
ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ನಿರ್ದೇಶನದ ಮೊದಲ ಸಿನಿಮಾ ಲೂಸಿಫರ್ ಮಲಯಾಳಂ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದೆ. ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದ ಲೂಸಿಫರ್ ಚಿತ್ರದಲ್ಲಿ ಖ್ಯಾತ ನಟ ಮೋಹನ್ ಲಾಲ್ ನಾಯಕನಾಗಿ ಕಾಣಿಸಿಕೊಂಡಿದ್ದರು.
Recommended Video
ಇದೆ ಸಿನಿಮಾ ತೆಲುಗಿನಲ್ಲಿ ರಿಮೇಕ್ ಆಗುತ್ತಿರುವ ವಿಚಾರ ಈಗಾಗಲೆ ಕೇಳಿದ್ದೀರಿ. ಮೋಹನ್ ಲಾಲ್ ಪಾತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಚಿತ್ರದ ಇನ್ನೂಂದು ಪ್ರಮುಖ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಮಲಯಾಳಂನಲ್ಲಿ ಪೃಥ್ವಿರಾಜ್ ನಟಿಸಿದ್ದ ಪಾತ್ರಕ್ಕೆ ತೆಲುಗಿನಲ್ಲಿ ಸಾಕಷ್ಟು ನಟರ ಹೆಸರು ಕೇಳಿಬರುತ್ತಿದೆ. ರಾಮ್ ಚರಣ್, ಮಹೇಶ್ ಬಾಬು, ಅಲ್ಲು ಅರ್ಜುನ್ ಹೀಗೆ ಅನೇಕರನ್ನು ಸುತ್ತಾಕಿಕೊಂಡು ಈಗ ನಟ ವಿಜಯ್ ದೇವರಕೊಂಡ ಬಳಿ ಬಂದಿದೆ.
ಹೌದು, ಲೂಸಿಫರ್ ಸಿನಿಮಾದ ತೆಲುಗು ರಿಮೇಕ್ ನಲ್ಲಿ ಚಿರಂಜೀವಿ ಜೊತೆ ವಿಜಯ್ ದೇವರಕೊಂಡ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಜೋರಾಗಿ ಕೇಳಿಬರುತ್ತಿವೆ. ಈಗಾಗಲೆ ವಿಜಯ್ ಬಳಿ ಮಾತುಕತೆ ನಡೆಸಲಾಗಿದೆಯಂತೆ. ಆದರೆ ವಿಜಯ್ ಕಡೆಯಿಂದ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎನ್ನುತ್ತಿವೆ ಮೂಲಗಳು.

ವಿಜಯ್ ಈಗಾಗಲೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಚಿರಂಜೀವಿ ಸಿನಿಮಾದಲ್ಲಿ ಪೋಷಕನಟನಾಗಿ ಬಣ್ಣಹಚ್ಚುತ್ತಾರಾ ಎನ್ನುವ ಅನುಮಾನವು ಕಾಡುತ್ತಿದೆ. ಆದರೆ ಚಿರಂಜೀವಿಗಾಗಿ ವಿಜಯ್ ದೇವರಕೊಂಡ ಸಿನಿಮಾ ಒಪ್ಪಿಕೊಂಡರು ಅಚ್ಚರಿ ಏನಿಲ್ಲ. ಒಂದು ವೇಳೆ ವಿಜಯ್ ದೇವರಕೊಂಡ ಗ್ರೀನ್ ಸಿಗ್ನಲ್ ನೀಡಿದ್ರೆ ಮೊದಲ ಬಾರಿಗೆ ಮೆಗಾಸ್ಟಾರ್ ಜೊತೆ ತೆರೆಹಂಚಿಕೊಂಡ ಹಾಗಾಗುತ್ತೆ.
ಇನ್ನೂ ಮೆಗಾಸ್ಟಾರ್ ಸಹೋದರಿ ಪಾತ್ರದಲ್ಲಿ ಸುಹಾಸಿನಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಇದೆ ಪಾತ್ರಕ್ಕೆ ನಟಿ ರೋಜಾ ಹೆಸರು ಕೇಳಿಬರುತ್ತಿದೆ. ಆದರೆ ಸಹೋದರಿ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎನ್ನುವುದು ಇನ್ನೂ ಅಧಿಕೃತವಾಗಿಲ್ಲ. ಚಿತ್ರಕ್ಕೆ ಸಾಹೋ ಖ್ಯಾತಿಯ ನಿರ್ದೇಶಕ ಸುಜಿತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.


Click it and Unblock the Notifications











