ವಿಜಯ್ ದೇವರಕೊಂಡಗೆ 48 ಕೋಟಿ ಆಫರ್ ಬಂದಿದ್ದು ನಿಜಾನ?
'ಅರ್ಜುನ್ ರೆಡ್ಡಿ' ಸಿನಿಮಾ ಸೂಪರ್ ಹಿಟ್ ಆದ ಬಳಿಕ ತೆಲುಗು ನಟ ವಿಜಯ್ ದೇವರಕೊಂಡ ನ್ಯಾಷನಲ್ ಸ್ಟಾರ್ ಆಗಿಬಿಟ್ಟರು. ಬಾಲಿವುಡ್ ಗೆ ಬರುವಂತೆ ಕೆಲವರು ನಿರ್ಮಾಪಕ ಬೇಡಿಕೆ ಇಟ್ಟರು. ಆದರೆ, ದೇವರಕೊಂಡ ಯಾರಿಗೂ ಕಾಲ್ ಶೀಟ್ ಕೊಟ್ಟಿಲ್ಲ.
ಇದೀಗ, ವಿಜಯ್ ದೇವರಕೊಂಡ ಹಿಂದಿ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಟಾಲಿವುಡ್ ಮಾಯನಗರಿಯಲ್ಲಿ ಬಾರಿ ಸದ್ದು ಮಾಡ್ತಿದೆ.
ಖ್ಯಾತ ನಿರ್ಮಾಪಕ ಕರಣ್ ಜೋಹರ್ ನಿರ್ಮಿಸಲಿರುವ ಚಿತ್ರಕ್ಕಾಗಿ ದೇವರಕೊಂಡ ಅವರನ್ನ ಕರೆತರುವ ಚಿಂತನೆಯಾಗಿದ್ದು, ಇದಕ್ಕಾಗಿ ಭರ್ಜರಿ ಮೊತ್ತ ಪಡೆಯಲಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ 'ಗೀತಾ ಗೋವಿಂದಂ' ನಟನಿಗೆ 48 ಕೋಟಿ ಸಂಭಾವನೆಯ ಆಫರ್ ಬಂದಿದೆ ಎಂಬ ಸುದ್ದಿ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿದೆ. ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲು ಯಶ್ ರಾಜ್ ಫಿಲಂಸ್ ಸಂಸ್ಥೆ 48 ಕೋಟಿ ನೀಡುವುದಾಗಿ ಹೇಳಿದ್ದರಂತೆ.
ಮೂಲಗಳು ಪ್ರಕಾರ 48 ಕೋಟಿ ಆಫರ್ ನಿಜ ಅಲ್ಲ ಎನ್ನಲಾಗಿದೆ. ಸದ್ಯಕ್ಕೆ ತೆಲುಗು ಚಿತ್ರವೊಂದಕ್ಕೆ ವಿಜಯ್ ದೇವರಕೊಂಡ 8-10 ಕೋಟಿ ಚಾರ್ಜ್ ಮಾಡ್ತಾರಂತೆ. ಡಿಯರ್ ಕಾಮ್ರೇಡ್ ಅಂತಹ ಬಹುಭಾಷೆಯ ಚಿತ್ರಕ್ಕೆ 10-15 ಕೋಟಿಯವರೆಗೂ ಸಂಭಾವನೆ ಪಡೆಯುತ್ತಾರಂತೆ. ಹಾಗಾಗಿ, 48 ಕೋಟಿ ಆಫರ್ ಎಷ್ಟು ನಿಜಾನೋ ಗೊತ್ತಾಗುತ್ತಿಲ್ಲ. ಆದರೆ, ಈ ಮೊತ್ತ ಎಲ್ಲರಿಗೂ ಅಚ್ಚರಿ ತಂದಿದೆ.
ಸದ್ಯ, 'ವರ್ಲ್ಡ್ ಫೇಮಸ್ ಲವರ್' ಚಿತ್ರದಲ್ಲಿ ನಟಿಸುತ್ತಿರುವ ದೇವರಕೊಂಡ, ಪೂರಿ ಜಗನ್ನಾಥ್ ನಿರ್ದೇಶನದ 'ಫೈಟರ್' ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಕರಣ್ ಜೋಹರ್ ಅರ್ಪಿಸುತ್ತಿದ್ದಾರೆ. ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ನಾಯಕಿಯಾಗಿ ನಟಿಸುವ ಸಾಧ್ಯತೆ ಇದೆ.


Click it and Unblock the Notifications











