For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಆಯ್ತು, ಅನನ್ಯಾ ಪಾಂಡೆ ಕಡೆ ವಾಲಿದ ವಿಜಯ್ ದೇವರಕೊಂಡ!

  |

  ಸಿನಿಮಾರಂಗದಲ್ಲಿ ದಿನಕ್ಕೊಂದು ಲವ್ ಸ್ಟೋರಿ, ಬ್ರೇಕಪ್ ಸ್ಟೋರಿ ಸುದ್ದಿ ಆಗುತ್ತಲೇ ಇರುತ್ತದೆ. ಇದು ಬಾಲಿವುಡ್‌ನಲ್ಲಿ ಸರ್ವೇ ಸಾಮಾನ್ಯ. ಯಾರು ಯಾರೊಂದಿಗೆ ಪ್ರೀತಿಯಲ್ಲಿ ಬೀಳ್ತಾರೋ, ಯಾರು ಯಾವಾಗ ಬ್ರೇಕಪ್ ಮಾಡಿಕೊಳ್ಳುತ್ತಾರೋ ಎನ್ನುವುದೇ ಗೊತ್ತಾಗುವುದಿಲ್ಲ. ವಿಚಾರ ಬಹಿರಂಗ ಆದಾಗಲೇ ಅಚ್ಚರಿ ಆಗೋದು.

  ಈಗ ಈ ವಿಚಾರದಲ್ಲಿ ಸುದ್ದಿ ಆಗ್ತಾ ಇರೋದು ಮತ್ಯಾರು ಅಲ್ಲ, ನಟ ವಿಜಯ್ ದೇವರಕೊಂಡ. ಹೌದು ವಿಜಯ್ ದೇವರಕೊಂಡ ಇತ್ತೀಚೆಗೆ ತಮ್ಮ ಮುಂದಿನ ಸಿನಿಮಾ 'ಲೈಗರ್' ವಿಚಾರವಾಗಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಇದರ ಜೊತೆಗೆ ಈ ಚಿತ್ರದ ನಾಯಕಿ ಅನನ್ಯಾ ಪಾಂಡೆ ಜೊತೆಗೂ ಸುದ್ದಿ ಆಗುತ್ತಿದ್ದಾರೆ.

  ಹೌದು ಸದ್ಯಕ್ಕೆ ಬಾಲಿವುಡ್‌ನ ಹಾಟ್ ಕಪಲ್ ಎನಿಸಿಕೊಂಡಿದ್ದಾರೆ ನಟ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ. ಅರೆ ಒಂದೇ ಸಿನಿಮಾ ಮಾಡಿ ಈ ಜೋಡಿ ಪ್ರೀತಿಯಲ್ಲಿ ಬಿದ್ದರೇ ಎಂದು ಅಚ್ಚರಿ ಆಗಬಹುದು. ಆದರೆ ಇವರ ಬಗ್ಗೆ ಬಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿಯೇ ಬೇರೆ.

  ವಿಜಯ್ ದೇವಕೊಂಡ, ಅನನ್ಯಾ ಪಾಂಡೆ!

  ವಿಜಯ್ ದೇವಕೊಂಡ, ಅನನ್ಯಾ ಪಾಂಡೆ!

  ಸದ್ಯಕ್ಕೆ ಬಾಲಿವುಡ್‌ನಲ್ಲಿ ಹೆಚ್ಚಾಗಿ ಹರಿದಾಡುತ್ತಿರುವ ಹಾಟ್ ನ್ಯೂಸ್ ಎಂದರೆ ಅದು ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಹೊಸ ಲವ್ ಗಾಸಿಪ್. ಈ ಜೋಡಿ ಇದೀಗ ಬಾಲಿವುಡ್‌ನ ಹಾಟ್ ಕಪಲ್ ಅಂತಲೇ ಕರೆಸಿಕೊಳ್ಳುತ್ತಿದೆ. 'ಲೈಗರ್' ಸಿನೆಮಾದಲ್ಲಿ ಒಟ್ಟಿಗೆ ನಟಿಸಿರುವ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ವೈಯಕ್ತಿಕ ಬದುಕಿನಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರಂತೆ. ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಈ ಜೋಡಿ ಮತ್ತಷ್ಟು ಪರಸ್ಪರ ಹತ್ತಿರವಾಗಿದೆ ಎನ್ನುವುದರ ಜೊತೆಗೆ ಈ ಜೋಡಿಯ ಹೊಸ ಲವ್ ಗಾಸಿಪ್ ಕೂಡ ಶುರುವಾಗಿಬಿಟ್ಟಿದೆ.

  ವಿಜಯ್, ಅನನ್ಯಾ ಡೇಟಿಂಗ್!

  ವಿಜಯ್, ಅನನ್ಯಾ ಡೇಟಿಂಗ್!

  ಅನನ್ಯಾ ಪಾಂಡೆ ಕಡೆಗೆ ವಿಜಯ್ ದೇವರಕೊಂಡ ಮನಸ್ಸು ವಾಲಿದೆ ಎನ್ನಲಾಗುತ್ತಿದೆ. ಮೇಲ್ನೋಟಕ್ಕೆ ಆಪ್ತವಾಗಿ ಕಾಣುವ ಈ ಜೋಡಿ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಚರ್ಚೆಗಳು ಹುಟ್ಟಿಕೊಂಡಿವೆ. ಅನನ್ಯಾ ಪಾಂಡೆ ಮತ್ತು ವಿಜಯ್ ದೇವರಕೊಂಡ ಇತ್ತೀಚೆಗೆ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಸಿನಿಮಾ. ಲೈಗರ್ ಚಿತ್ರದ ಪ್ರಚಾರಕ್ಕಾಗಿ ಈ ಜೋಡಿ ಪದೇ-ಪದೇ ಒಟ್ಟಾಗಿ ಕ್ಯಾಮೆರಾ ಕಣ್ಣಿಗೆ ಬೀಳುತ್ತದೆ. ಆದರೆ ಕೇವಲ ಸಿನಿಮಾಗಾಗಿ ಮಾತ್ರ ಇವರು ಒಟ್ಟೊಟ್ಟಿಗೆ ಓಡಾಡುತ್ತಿಲ್ಲ ಬದಲಾಗಿ ಡೇಟಿಂಗ್‌ನಲ್ಲಿದ್ದಾರೆ ಎನ್ನುವ ವರದಿಗಳು ಬಂದಿವೆ. ಆದರೆ ಇದು ಎಷ್ಟು ನಿಜ ಎನ್ನುವುದು ಚಿತ್ರದ ರಿಲೀಸ್ ಬಳಿಕವೇ ಗೊತ್ತಾಗಲಿದೆ. ಮುಂದೆಯೂ ಇವರ ಆಪ್ತತೆ ಹೀಗೆ ಮುಂದುವರೆಯಲಿದೆಯಾ ಎನ್ನುವುದನ್ನು ನೋಡಬೇಕಿದೆ.

  ರಶ್ಮಿಕಾಳಿಂದ ದೂರದ ವಿಜಯ್!

  ರಶ್ಮಿಕಾಳಿಂದ ದೂರದ ವಿಜಯ್!

  ಇನ್ನು ಇದಕ್ಕೂ ಮುನ್ನ ವಿಜಯ್ ದೇವರಕೊಂಡ ಹೆಸರು ಕೇಳಿ ಬಂದಿದ್ದು ನಟಿ ರಶ್ಮಿಕಾ ಮಂದಣ್ಣ ಜೊತೆಗೆ. ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಇಬ್ಬರು ಪ್ರೀತಿಯಲ್ಲಿ ಇದ್ದಾರೆ ಎನ್ನುವುದು ಹಲವು ದಿನಗಳಿಂದ ಕೇಳಿಬರುತ್ತಿರುವ ಸುದ್ದಿ. ಆದರೆ ಇದು ಗಾಸಿಪ್ ರೂಪದಲ್ಲಿಯೇ ಉಳಿದುಬಿಟ್ಟಿದೆ ಹೊರತು ನಿಜ ಎನ್ನುವ ಯಾವುದೇ ಸುಳಿವು ಕೂಡ ಈ ಜೋಡಿಗಳಿಂದ ಸಿಕ್ಕಿಲ್ಲ. ಆದರೆ ಇತ್ತೀಚಿಗೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಇಬ್ಬರೂ ದೂರಾಗಿದ್ದಾರೆ ಎನ್ನುವ ಸುದ್ದಿ ಕೂಡ ಬಂದಿದೆ. ಇದಕ್ಕೆ ತಕ್ಕಂತೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ರಿಲೇಷನ್‌ಶಿಪ್ ಬಗ್ಗೆ ಎದುರಾದ ಪ್ರಶ್ನೆಗಳಿಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಉತ್ತರ ಕೊಟ್ಟಿದ್ದಾರೆ. ಹಾಗಾಗಿ ಈ ಜೋಡಿ ಇದೀಗ ದೂರಾಗಿದೆ ಎನ್ನುವುದು ಬಹುತೇಕ ಖಚಿತವಾಗಿದೆ.

  ಇಶಾನ್-ಅನನ್ಯಾ ಬ್ರೇಕಪ್!

  ಇಶಾನ್-ಅನನ್ಯಾ ಬ್ರೇಕಪ್!

  ಇನ್ನು ನಟಿ ಅನನ್ಯಾ ಪಾಂಡೆ ಕೂಡ ತನ್ನ ಮಾಜಿ ಪ್ರಿಯಕರನಿಂದ ದೂರು ಆಗಿದ್ದಾರೆ. ಶಾಹಿದ್ ಕಪೂರ್ ಸಹೋದರ ಇಶಾನ್ ಕಟ್ಟರ್ ಜೊತೆಗೆ ಅನನ್ಯಾ ಪಾಂಡೆ ಲವ್‌ನಲ್ಲಿ ಇದ್ದರು. ಆದರೆ ಇತ್ತೀಚೆಗಷ್ಟೇ ಈ ಜೋಡಿ ಬ್ರೇಕ್ ಅಪ್ ಮಾಡಿಕೊಂಡು ದೂರಾಗಿದೆ. ವಿಜಯ್ ದೇವರಕೊಂಡ ಜೊತೆಗೆ ಲೈಗರ್ ಸಿನಿಮಾ ಶುರು ಮಾಡಿದ ಬಳಿಕ ಅನನ್ಯಾ ಪಾಂಡೆ, ಇಶಾನ್ ಕಟ್ಟರ್ ಇಂದ ದೂರಾಗಿದ್ದಾರೆ. ಈ ಎಲ್ಲಾ ಘಟನೆಗಳು ಕೂಡ ಸದ್ಯ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ರಿಲೇಶನ್‌ಶಿಪ್ ಕಡೆಗೆ ಬೆರಳು ಮಾಡಿ ತೋರಿಸುತ್ತಿದೆ. ಆದರೆ ಇದು ಯಾವಾಗ ಬಹಿರಂಗವಾಗಲಿದೆಯೋ ನೋಡಬೇಕು.

  Recommended Video

  Gaalipata 2 | Yograj Bhat | 'ಗಾಳಿಪಟ 2' ನೋಡಲು ಟಿಪ್‌ಟಾಪ್ ಆಗಿ ಬಂದ ಭಟ್ರು | Filmibeat Kannada
  English summary
  Vijay Deverakonda Ananya Panday Are In Love, New Couple Of Bollywood, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X