ಮತ್ತೆ ವಿಜಯ್ ದೇವರಕೊಂಡಗೆ ಜೊತೆ ರಶ್ಮಿಕಾ! ಆ ಹಿಟ್ ಸಿನಿಮಾದ ಸೀಕ್ವೆಲ್, ಮತ್ತೊಮ್ಮೆ ಲಿಪ್‌ಲಾಕ್!?

By ಫಿಲ್ಮಿಬೀಟ್ ಡೆಸ್ಕ್

ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮೊದಲ ಬಾರಿ ಒಟ್ಟಿಗೆ ನಟಿಸಿ ಐದು ವರ್ಷಗಳಾಗಿದ್ದು, ಇವರಿಬ್ಬರ ಪ್ರೀತಿ ಬಗ್ಗೆ ಆಗಿನಿಂದಲೂ ಗುಸು-ಗುಸು ಹರಿದಾಡುತ್ತಲೇ ಇದೆ.

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮೊದಲ ಬಾರಿಗೆ 'ಗೀತಾ ಗೋವಿಂದಂ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಆ ಸಿನಿಮಾದಲ್ಲಿ ಈ ಇಬ್ಬರ ಲಿಪ್‌ ಲಾಕ್ ದೃಶ್ಯವಂತೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

ಆ ಬಳಿಕ ಇವರಿಬ್ಬರ ಜೋಡಿಗೆ ಇರುವ ಜನಪ್ರಿಯತೆ ಕಂಡು ಇಬ್ಬರನ್ನೂ ಒಟ್ಟಿಗೆ ಸೇರಿಸಿ 'ಡಿಯರ್ ಕಾಮ್ರೆಡ್' ಎಂಬ ಸಿನಿಮಾ ತೆಗೆಯಲಾಗಿತು. ಸಿನಿಮಾ ಬಗ್ಗೆ ಒಳ್ಳೆಯ ಕಮೆಂಟ್ಸ್ ಬಂದರೂ ಸಹ ಸಿನಿಮಾ ಹಿಟ್ ಆಗಲಿಲ್ಲ. ಆದರೆ ಅದರಲ್ಲಿಯೂ ಈ ಜೋಡಿಯ ಲಿಪ್‌ ಲಾಕ್ ಸಖತ್ ವೈರಲ್ ಆಗಿತ್ತು. ಇದೀಗ ಮತ್ತೊಮ್ಮೆ ಈ ಜೋಡಿಗೆ ಒಟ್ಟಿಗೆ ನಟಿಸಲು ತಯಾರಾಗಿದೆ.

Vijay Deverakonda And Rashmika Mandanna Acting Together Again

ಹೌದು, ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮತ್ತೆ ಒಟ್ಟಿಗೆ ತೆರೆಯ ಮೇಲೆ ಬರಲು ಸಜ್ಜಾಗಿದ್ದು, ಈ ಹಿಂದೆ ಇವರೇ ನಟಿಸಿದ್ದ ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್‌ನಲ್ಲಿ ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ರಶ್ಮಿಕಾ-ವಿಜಯ್ ಮೊದಲ ಬಾರಿ ಒಟ್ಟಿಗೆ ನಟಿಸಿದ್ದ 'ಗೀತಾ ಗೋವಿಂದಂ' ಸಿನಿಮಾದ ಮುಂದಿನ ಭಾಗ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದ್ದು, ರಶ್ಮಿಕಾ-ವಿಜಯ್ ಅವರುಗಳೇ ಈ ಸಿನಿಮಾದಲ್ಲಿ ನಾಯಕ-ನಾಯಕಿಯಾಗಿರಲಿದ್ದಾರಂತೆ.

ಮೊದಲ ಸಿನಿಮಾದಲ್ಲಿ ಇವರಿಬ್ಬರ ಲಿಪ್‌ ಲಾಕ್ ಬಹಳ ವೈರಲ್ ಆಗಿತ್ತು. ಹಾಗಾಗಿ ಸೀಕ್ವೆಲ್‌ನಲ್ಲೂ ಅದೇ ರೀತಿ ಸ್ಟೀಮಿ ಲಿಪ್‌ ಲಾಕ್‌ ಅನ್ನು ನಿರೀಕ್ಷಿಸಲಿದ್ದಾರೆ ಅಭಿಮಾನಿಗಳು ಜೊತೆಗೆ ಇನ್ನಷ್ಟು ರೊಮ್ಯಾಂಟಿಕ್ ದೃಶ್ಯಗಳು ಸಹ ಸಿನಿಮಾದಲ್ಲಿದ್ದರೂ ಅಚ್ಚರಿ ಪಡಬೇಕಿಲ್ಲ.

ಇನ್ನು ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಬಹಳ ಆತ್ಮೀಯರಾಗಿದ್ದಾರೆ. ಇತ್ತೀಚೆಗಷ್ಟೆ ಇವರಿಬ್ಬರು ವಿದೇಶಕ್ಕೆ ಪ್ರವಾಸ ಸಹ ಹೋಗಿದ್ದರು. ರಶ್ಮಿಕಾ ಮಾಡಿದ್ದ ಲೈವ್ ವಿಡಿಯೋದಲ್ಲಿ ವಿಜಯ್ ದೇವರಕೊಂಡ ಧ್ವನಿಯನ್ನು ಅಭಿಮಾನಿಗಳು ಗುರುತಿಸಿದ್ದರು. ಇದೆಲ್ಲವೂ ಇವರಿಬ್ಬರ ಗಪ್‌-ಚುಪ್ ಪ್ರೇಮಕತೆ ಸುದ್ದಿಗಳಿಗೆ ಇನ್ನಷ್ಟು ಇಂಬು ನೀಡಿತ್ತು.

ಅದರ ಬೆನ್ನಲ್ಲೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಶ್ಮಿಕಾ ಮಂದಣ್ಣ, 'ಹೌದು ನಾನು ವಿಜಯ್ ಪ್ರವಾಸ ಹೋಗಿದ್ದು ನಿಜ ಆದರೆ ನಾವೆಲ್ಲರೂ ಆಗಾಗ್ಗೆ ಪ್ರವಾಸ ಹೋಗುತ್ತಿರುತ್ತೇವೆ. ನಾವಿಬ್ಬರೇ ಪ್ರವಾಸ ಹೋಗಿರಲಿಲ್ಲ ನಮ್ಮೊಟ್ಟಿಗೆ ಇತರ ಗೆಳೆಯರು ಸಹ ಇದ್ದರು'' ಎಂದಿದ್ದಾರೆ ರಶ್ಮಿಕಾ ಮಂದಣ್ಣ. ಇವರಿಬ್ಬರ ಪ್ರೇಮ-ಪ್ರಕರಣ ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಕಾದು ನೋಡಬೇಕಿದೆ.

More from Filmibeat

English summary
Vijay Deverakonda and Rashmika Mandanna acting together again in movie sequel of super hit Geetha Govindam.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X