ರಶ್ಮಿಕಾ ಮಂದಣ್ಣರನ್ನು 'ಚೀಸ್‌ಕೇಕ್' ಅಂತಾರಾ ವಿಜಯ್ ದೇವರಕೊಂಡ?: ಫ್ಯಾನ್ಸ್‌ಗೆ ಈ ಡೌಟ್ ಬಂದಿದ್ಯಾಕೆ?

ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ ನಿಶ್ಚಿತಾರ್ಥ ವಿಷಯದಲ್ಲಿ ಸುದ್ದಿಯಾಗಿದ್ದ ಇವರು ಈಗ ಮತ್ತೆ ಟ್ರಿಪ್ ಹೋಗಿದ್ದಾರೆ. ಇಬ್ಬರು ಜೊತೆಯಲ್ಲಿಯೇ ಹೋಗಿದ್ದಾರೆ ಎಂದು ಫ್ಯಾನ್ಸ್ ಅಂದುಕೊಳ್ಳುತ್ತಿದ್ದಾರೆ. ಇದರ ನಡುವೆ ವಿಜಯ್ ದೇವರಕೊಂಡ ಅವರ ಪೋಸ್ಟ್ ಸಕತ್ ವೈರಲ್ ಆಗುತ್ತಿದೆ.

ವಿಜಯ್ ದೇವರಕೊಂಡ ಚೀಸ್ ಕೇಕ್ ತಿನ್ನುತ್ತಾ ಇರುವ ವಿಡಿಯೋವನ್ನು ಫೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ರಶ್ಮಿಕಾ ಮಂದಣ್ಣ ಅವರ ಹೆಸರಿನಲ್ಲಿಯೇ ಕಾಮೆಂಟ್‌ಗಳಿಂದ ಸಂಪೂರ್ಣವಾಗಿ ಮುಚ್ಚಿಹೋಗಿದೆ. ವಿಜಯ್ ಚೀಸ್ ಕೇಕ್ ತೆಗೆದುಕೊಳ್ಳುವ ಮತ್ತು ಅದನ್ನು ಆಸೆಯಿಂದ ತಿನ್ನುವ ಸಣ್ಣ ರೀಲ್ ಅನ್ನು ಪೋಸ್ಟ್ ಮಾಡಿದ್ದಾರೆ.

Vijay Deverakondas Fans thinks Rashmika Mandannas Nickname is cheesecake!

ರಶ್ಮಿಕಾ ನಿಕ್ ನೇಮ್ ಚೀಸ್‌ಕೇಕ್!?

ಅವರ ಪೋಸ್ಟ್‌ನಲ್ಲಿನ ಕಾಮೆಂಟ್‌ಗಳು ರಶ್ಮಿಕಾ ಮಂದಣ್ಣ ಬಗ್ಗೆ ಮಾತ್ರ ಮೀಸಲಾಗಿವೆ. ವಿಜಯ್ ದೇವರಕೊಂಡ ತನ್ನ ಪೋಸ್ಟ್‌ಗೆ "ಐ ಲವ್ ಚೀಸ್ ಕೇಕ್" ಎಂದು ಶೀರ್ಷಿಕೆ ನೀಡಿದ್ದಾರೆ. ಫೋಸ್ಟ್‌ಗೆ ಕಾಮೆಂಟ್ ಮಾಡಿರುವ ಅನೇಕರು, ಫೆಬ್ರವರಿಯಲ್ಲಿ ನಟಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಿರಾ ಎಂದು ಕೇಳಿದ್ದಾರೆ. ಜೊತೆಗ ಹೆಚ್ಚಿನ ಜನ ಈ ಚೀಸ್ ಕೇಕ್ ಎಂದರೆ ರಶ್ಮಿಕಾ ಮಂದಣ್ಣ ಅವರ ಎಂದು ಪ್ರಶ್ನಿಸಿದ್ದಾರೆ.

ಕಾಮೆಂಟ್ ಮಾಡಿರುವ ಅಭಿಮಾನಿಯೊಬ್ಬರು "ರಶ್ಮಿಕಾ ಅವರ ಅಡ್ಡಹೆಸರು ಚೀಸ್ ಕೇಕ್ ಎಂದು ನಾನು ಅಂದುಕೊಳ್ಳುತ್ತೇನೆ" ಎಂದು ಬರೆದರೆ, ಮತ್ತೊಬ್ಬರು "ರಶ್ಮಿಕಾ ಕೂಡ ನಿಮ್ಮನ್ನು ಮತ್ತು ಚೀಸ್ ಕೇಕ್ ಅನ್ನು ಪ್ರೀತಿಸುತ್ತಾರೆ" ಎಂದು ಹೇಳಿದ್ದಾರೆ. ಮೂರನೆಯವನು "ಸರ್ ನೀವು ನಿಜವಾಗಿಯೂ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತೀರಾ" ಎಂದು ಪ್ರಶ್ನೆ ಮಾಡಿದ್ದಾರೆ.

ಇತ್ತೀಚೆಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಇದೇ ಫೆಬ್ರವರಿ ಎರಡನೇ ವಾರದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಈ ಬಗ್ಗೆ ಆದಷ್ಟು ಬೇಗ ಘೋಷಿಸಲು ಪ್ಲಾನಿಂಗ್ ನಡಿತಿದೆ ಎಂದು ವದಂತಿಗಳು ಹರಡಿದ್ದವು. ಆದರೆ, ಇಬ್ಬರು ನಟರು ತಾವು ಡೇಟ್ ಮಾಡುತ್ತಿದ್ದೇವೆ ಎಂಬುದನ್ನೇ ಒಪ್ಪಿಕೊಂಡಿಲ್ಲ. ಪ್ರಶ್ನೆ ಕೇಳಿದಾಗೆಲ್ಲಾ ತಾವು ಒಳ್ಳೆ ಫ್ರೆಂಡ್ಸ್ ಎಂದು ಹೇಳುತ್ತಾರೆ.

ಇನ್ನು, ನಿಶ್ಚಿತಾರ್ಥದ ವದಂತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ವಿಜಯ್ ದೇವರಕೊಂಡ ತಂಡ ಪ್ರತಿಕ್ರಿಯಿಸಿದೆ. ಈ ವರದಿಗಳನ್ನು 'ಸುಳ್ಳು' ಎಂದು ಕರೆದಿದೆ. ಸುದ್ದಿ ಸಂಸ್ಥೆ ಐಎಎನ್‌ಎಸ್‌ನೊಂದಿಗೆ ಮಾತನಾಡಿದ ತಂಡ, "ಈ ಎಲ್ಲಾ ವರದಿ ಸುಳ್ಳು" ಎಂದು ಸ್ಪಷ್ಟನೆ ನೀಡಿದೆ. ಆದರೂ ಕೂಡ ಹಲವರು ಫೆಬ್ರವರಿಯಲ್ಲಿ ಗುಡ್ ನ್ಯೂಸ್ ಸಿಗಲಿದೆ ಎಂದೇ ನಂಬಿದ್ದಾರೆ.

Vijay Deverakondas Fans thinks Rashmika Mandannas Nickname is cheesecake!

ರಕ್ಷಿತ್ ಶೆಟ್ಟಿ ಜೊತೆಗಿನ 'ಕಿರಿಕ್ ಪಾರ್ಟಿ' ಸಿನಿಮಾದಿಂದ ಖ್ಯಾತಿ ಗಳಿಸಿದ ನಟಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ವಿಜಯ್ ದೇವರಕೊಂಡ ಜೊತೆಗೆ 'ಗೀತಾ ಗೋವಿಂದಂ' ಸಿನಿಮಾದಲ್ಲಿ ನಟಿಸಿದ್ದರು. ಇಬ್ಬರ ಕೆಮಿಸ್ಟ್ರಿಯಿಂದಾಗಿ ಸಿನಿಮಾ ಸಕತ್ ಹಿಟ್ ಆಗಿತ್ತು. ಇದಾದ ಬಳಿಕ ಇಬ್ಬರು ಮತ್ತೆ 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಸದ್ಯ ನಟಿ ರಶ್ಮಿಕಾ ಅನಿಮಲ್ ಸಿನಿಮಾ ಸಕ್ಸಸ್ ಏಂಜಾಯ್ ಮಾಡುತ್ತಿದ್ದಾರೆ. ಗರ್ಲ್‌ಫ್ರೆಂಡ್ ಸಿನಿಮಾ ಮತ್ತು ಪುಷ್ಪ ಭಾಗ ಎರಡರಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನು, ವಿಜಯ್ ದೇವರಕೊಂಡ ಅವರು ಗೀತಾ ಗೋವಿಂದಂ ಖ್ಯಾತಿಯ ಪರಶುರಾಮ್ ಪೆಟ್ಲಾ ನಿರ್ದೇಶನದ ಅವರ ಮುಂದಿನ ಚಿತ್ರ 'ಫ್ಯಾಮಿಲಿ ಸ್ಟಾರ್' ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ನಟಿ ಮೃಣಾಲ್ ಠಾಕೂರ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಫ್ಯಾಮಿಲಿ ಸ್ಟಾರ್ 2024 ರ ಸಂಕ್ರಾಂತಿಯಂದು ಬಿಡುಗಡೆಯಾಗಬೇಕಿತ್ತು. ಆದರೆ ಸಾಲು ಸಾಲು ಸಿನಿಮಾಗಳ ಕಾರಣ ಮುಂಡೂಡಲಾಗಿದೆ.

More from Filmibeat

English summary
Rashmika's Nickname is cheesecake!: Fans comment on vijay Deverakonda photos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X