ಮೆಗಾ ಪ್ರಾಜೆಕ್ಟ್‌ಗೆ ಭರ್ಜರಿ ಪ್ಲ್ಯಾನ್: ಚರಣ್ ಎದುರು ವಿಜಯ್ ಸೇತುಪತಿ?

ಮೆಗಾ ಪವರ್ ಸ್ಟಾರ್ ರಾಮ್‌ಚರಣ್ ತೇಜಾ 'ಗೇಮ್‌ ಚೇಂಜರ್' ನಟಿಸ್ತಿರೋದು ಗೊತ್ತೇಯಿದೆ. ಬುಚ್ಚಿಬಾಬು ಜೊತೆ ಮುಂದಿನ ಸಿನಿಮಾ ಕನ್ಫರ್ಮ್ ಮಾಡಿದ್ದಾರೆ. 'ಮಫ್ತಿ' ನರ್ತನ್ ಜೊತೆಗೂ ಒಂದು ಸಿನಿಮಾ ಮಾತುಕತೆ ಹಂತದಲ್ಲಿದೆ. ಇತ್ತೀಚೆಗೆ ಮನೆಗೆ ಮಗಳನ್ನು ರಾಮ್‌ಚರಣ್- ಉಪಾಸನಾ ದಂಪತಿ ಸ್ವಾಗತಿಸಿದ್ದರು. ಇದೇ ಕಾರಣಕ್ಕೆ ಕೆಲ ದಿನಗಳ ಕಾಲ ಚಿತ್ರೀಕರಣಕ್ಕೆ ಚರಣ್ ಬ್ರೇಕ್ ಹಾಕಿದ್ದರು.

ಮತ್ತೆ 'ಗೇಮ್‌ ಚೇಂಜರ್' ಸಿನಿಮಾ ಚಿತ್ರೀಕರಣಕ್ಕೆ ರಾಮ್‌ಚರಣ್ ಸಿದ್ಧವಾಗುತ್ತಿದ್ದಾರೆ. ತಮಿಳು ನಿರ್ದೇಶಕ ಶಂಕರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಬುಚ್ಚಿಬಾಬು ನಿರ್ದೇಶನದ ಚಿತ್ರಕ್ಕೆ ಟೈಟಲ್ ಫೈನಲ್ ಆಗಿಲ್ಲ. RC16 ಟೈಟಲ್‌ನಲ್ಲಿ ಸಿನಿಮಾ ಕೆಲಸಗಳು ನಡೀತಿದೆ. ಪ್ರೀ ಪ್ರೊಡಕ್ಷನ್ ವರ್ಕ್ ಶುರುವಾಗಿದೆ. ಸದ್ಯ ಸಿನಿಮಾ ಸ್ಟಾರ್‌ ಕಾಸ್ಟ್ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಹರಿದಾಡ್ತಿದೆ. ತಮಿಳು ನಟ ವಿಜಯ್ ಸೇತುಪತಿ ಚಿತ್ರದಲ್ಲಿ ಕೀ ರೋಲ್‌ ಪ್ಲೇ ಮಾಡ್ತಿದ್ದಾರೆ ಎನ್ನಲಾಗ್ತಿದೆ.

Vijay -sethupathi-in-RC16

ಭಾರತೀಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಟ್ರೆಂಡ್ ನಡೀತಿದೆ. ದಕ್ಷಿಣದ ಕಲಾವಿದರು ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಅದೇ ರೀತಿ ಬಾಲಿವುಡ್ ಸ್ಟಾರ್ಸ್ ಕೂಡ ದಕ್ಷಿಣದ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಇನ್ನು ತಮಿಳು ನಟರು ತೆಲುಗಿನಲ್ಲಿ ತೆಲುಗು ನಟರು ಕನ್ನಡದಲ್ಲಿ ಅದೇ ರೀತಿ ಕನ್ನಡ ನಟರು ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸೋದು ಕಾಮನ್ ಆಗಿಬಿಟ್ಟಿದೆ.

ಇತ್ತೀಚೆಗೆ ಕಮಲ್ ಹಾಸನ್ ತೆಲುಗಿನ 'ಪ್ರಾಜೆಕ್ಟ್‌-ಕೆ' ಚಿತ್ರದಲ್ಲಿ ಪ್ರಭಾಸ್ ಎದುರು ವಿಲನ್ ಆಗಿ ನಟಿಸೋಕೆ ಸೈ ಎಂದಿದ್ದಾರೆ. ಇದಕ್ಕಾಗಿ ಭಾರೀ ಮೊತ್ತದ ಸಂಭಾವನೆ ಕೂಡ ಜೇಬಿಗಿಳಿಸುತ್ತಿದ್ದಾರೆ. ಪ್ರತಿಭಾನ್ವಿತ ನಟ ವಿಜಯ್ ಸೇತುಪತಿ ಇತ್ತೀಚೆಗೆ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಇದೀಗ ರಾಮ್‌ಚರಣ್ ಎದುರು ಸೇತುಪತಿ ನಟಿಸ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಇನ್ನು ಚಿತ್ರದಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುವ ಮಾತುಗಳು ಕೇಳಿಬರ್ತಿದೆ.

Vijay -sethupathi-in-RC16

ಈಗಾಗಲೇ ತೆಲುಗಿನ 'ದೇವರ' ಚಿತ್ರದಲ್ಲಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ಸೌತ್‌ ಸಿನಿದುನಿಯಾಗೆ ಶ್ರೀದೇವಿ ಪುತ್ರಿಯ ಆಗಮನವಾಗಿದೆ. ಇದೀಗ RC16 ಚಿತ್ರದಲ್ಲೂ ಜಾನ್ವಿ ನಟಿಸ್ತಾರೆ ಎನ್ನಲಾಗ್ತಿದೆ. ಇನ್ನು ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ. ಆರ್ ರಹಮಾನ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡೋದು ಬಹುತೇಕ ಪಕ್ಕಾ ಎನ್ನುವ ಚರ್ಚೆ ನಡೀತಿದೆ. ಒಟ್ನಲ್ಲಿ ಪ್ರತಿಭಾನ್ವಿತರ ತಂಡ ಕಟ್ಟಿಕೊಂಡು ಬುಚ್ಚಿಬಾಬು 2ನೇ ಚಿತ್ರಕ್ಕೆ ಕೈ ಹಾಕುತ್ತಿದ್ದಾರೆ.

'ಉಪ್ಪೆನ' ಸಿನಿಮಾ ಮೂಲಕ ಬುಚ್ಚಿಬಾಬು ಸ್ವತಂತ್ರ ನಿರ್ದೇಶಕರಾಗಿದ್ದರು. ಮೊದಲ ಪ್ರಯತ್ನದಲ್ಲೇ ಭರ್ಜರಿ ಸಕ್ಸಸ್ ಕಂಡಿದ್ದರು. ಸುಕುಮಾರ್ ಗರಡಿಯಲ್ಲಿ ಪಳಗಿದ ನಿರ್ದೇಶಕ ಈ ಬಾರಿ ರಾಮ್‌ಚರಣ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸೆಟ್ಟೇರುವುದಕ್ಕೂ ಮೊದ್ಲೆ RC16 ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡ್ತಿದೆ. ಈ ಹಿಂದೆ ತಮ್ಮ ಗುರುಗಳಾದ ಸುಕುಮಾರ್ ನಿರ್ದೇಶನದ 'ಪುಷ್ಪ' ಸಿನಿಮಾ 10 'KGF' ಸಿನಿಮಾಗಳಿಗೆ ಸಮ ಎಂದು ಬುಚ್ಚಿಬಾಬು ಹೇಳಿದ್ದು ಭಾರೀ ಸುದ್ದಿ ಆಗಿತ್ತು.

ತಮಿಳು ನಿರ್ದೇಶಕ ಶಂಕರ್ ನಿರ್ದೇಶನದ 'ಗೇಮ್‌ ಚೇಂಜರ್' ಸಿನಿಮಾ ಕೂಡ ಭಾರೀ ನಿರೀಕ್ಷೆ ಮೂಡಿಸಿದೆ. ದಿಲ್ ರಾಜು ಈ ಸಿನಿಮಾ ನಿರ್ಮಾಣ ಮಾಡ್ತಿದ್ದು ಚರಣ್ ಡಬಲ್ ರೋಲ್‌ನಲ್ಲಿ ರಂಜಿಸೋಕೆ ಬರ್ತಿದ್ದಾರೆ. ಕೆಲ ದಿನಗಳ ಹಿಂದೆ ರಿಲೀಸ್ ಆಗಿದ್ದ ಚಿತ್ರದ ಫಸ್ಟ್ ಲುಕ್ ವೈರಲ್ ಆಗಿತ್ತು. ಚಿತ್ರದಲ್ಲಿ ಕಿಯಾರಾ ಅಡ್ವಾನಿ ನಾಯಕಿಯಾಗಿ ನಟಿಸ್ತಿದ್ದಾರೆ. ನ್ಯೂಜಿಲ್ಯಾಂಡ್ ಸೇರಿದಂತೆ ಹಲವೆಡೆ ಸಿನಿಮಾ ಚಿತ್ರೀಕರಣ ನಡೆದಿದೆ.

More from Filmibeat

English summary
Vijay Sethupathi joins cast of Buchibabu and Ramcharan's RC16. A R Rahman confirmed as music director. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X