ಶಾರುಖ್ ಖಾನ್ ಸಿನಿಮಾದಲ್ಲಿ ನಟಿಸಲು ಭಾರಿ ಸಂಭಾವನೆ ಪಡೆದ ವಿಜಯ್ ಸೇತುಪತಿ

ಶಾರುಖ್ ಖಾನ್ ಸಿನಿಮಾದಲ್ಲಿ ನಟಿಸುವ ಅವಕಾಶಕ್ಕಾಗಿ ಹಲವು ನಟ-ನಟಿಯರು ಕಾಯುತ್ತಿರುತ್ತಾರೆ. ಅವರೊಟ್ಟಿಗೆ ತೆರೆ ಹಂಚಿಕೊಂಡರೆ ಸಾಕು ಆ ನಂತರ ಅವಕಾಶಗಳ ಸುರಿಮಳೆಯೇ ಆಗುತ್ತದೆ ಎಂಬುದು ನಟ-ನಟಿಯರ ಲೆಕ್ಕಾಚಾರ.

ಶಾರುಖ್ ಖಾನ್ ಜೊತೆ ಕೆಲಸ ಮಾಡಲು ಸಹ ಅನೇಕ ನಿರ್ದೇಶಕರು ತುದಿ ಗಾಲಲ್ಲಿ ನಿಂತಿರುತ್ತಾರೆ. ಆದರೆ ಕೆಲವರಿಗಷ್ಟೆ ಅವಕಾಶ ಒದಗಿಬರುತ್ತದೆ. ಇದೀಗ ತಮಿಳಿನ ಖ್ಯಾತ ನಿರ್ದೇಶಕ ಅಟ್ಟಿಲಿಗೆ ಈ ಅವಕಾಶ ಒದಗಿ ಬಂದಿದೆ.

ಅಟ್ಟಿಲಿ ನಿರ್ದೇಶಿಸುತ್ತಿರುವ 'ಜವಾನ್' ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸುತ್ತಿದ್ದು, ಸಿನಿಮಾದಲ್ಲಿ ಶಾರುಖ್ ಖಾನ್ ಎದುರು ವಿಜಯ್ ಸೇತುಪತಿ ವಿಲನ್ ಆಗಿ ನಟಿಸಿದ್ದಾರೆ. ಶಾರುಖ್ ಖಾನ್ ಜೊತೆಗೆ ನಟಿಸಲು ವಿಜಯ್ ಸೇತುಪತಿ ಭಾರಿ ಮೊತ್ತದ ಸಂಭಾವನೆಯನ್ನೇ ಪಡೆದಿದ್ದಾರೆ.

ಭಾರಿ ಸಂಭಾವನೆ ಪಡೆದಿರುವ ವಿಜಯ್

ಭಾರಿ ಸಂಭಾವನೆ ಪಡೆದಿರುವ ವಿಜಯ್

ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾದಲ್ಲಿ ನಟಿಸಲು ವಿಜಯ್ ಸೇತುಪತಿ ಬರೊಬ್ಬರಿ 21 ಕೋಟಿ ರುಪಾಯಿ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ತಮಿಳು ಹಾಗೂ ಹಿಂದಿ ಎರಡೂ ಭಾಷೆಯಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಲಿದೆ. ಈ ಸಿನಿಮಾ ಶಾರುಖ್ ಖಾನ್‌ರ ಎರಡನೇ ತಮಿಳು ಸಿನಿಮಾ ಸಹ ಆಗಲಿದೆ. ಈ ಹಿಂದೆ ಕಮಲ್ ಹಾಸನ್ ಜೊತೆಗೆ 'ಹೇ ರಾಮ್' ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಿದ್ದರು.

ಸಂತಾನಂ ಪಾತ್ರ ಸಖತ್ ಹಿಟ್ ಆಗಿದೆ

ಸಂತಾನಂ ಪಾತ್ರ ಸಖತ್ ಹಿಟ್ ಆಗಿದೆ

ಕಮಲ್ ಹಾಸನ್ ಜೊತೆಗೆ 'ವಿಕ್ರಂ' ಸಿನಿಮಾದಲ್ಲಿ ಸಂತಾನಂ ಪಾತ್ರದಲ್ಲಿ ವಿಜಯ್ ಸೇತುಪತಿ ಮಿಂಚಿದ್ದರು. ಆ ಸಿನಿಮಾದಲ್ಲಿ ನಟಿಸಲು ಹದಿನೈದು ಕೋಟಿ ಸಂಭಾವನೆಯನ್ನು ವಿಜಯ್ ಪಡೆದಿದ್ದರು. ಆ ಸಿನಿಮಾ ಹಿಟ್ ಆದ ಬಳಿಕ ಇದೀಗ ತಮ್ಮ ಸಂಭಾವನೆಯನ್ನು 21 ಕೋಟಿಗೆ ಏರಿಸಿಕೊಂಡಿದ್ದಾರೆ ವಿಜಯ್. 'ವಿಕ್ರಂ'ನಲ್ಲಿ ಇದ್ದಂತೆ ಈ ಸಿನಿಮಾದಲ್ಲಿಯೂ ವಿಜಯ್ ಸೇತುಪತಿ ಪಾತ್ರಕ್ಕೆ ಭಾರಿ ಮಹತ್ವ ಇದೆಯಂತೆ. ವಿಜಯ್‌ರ ಹೆಚ್ಚು ಡೇಟ್ಸ್ ಅನ್ನು ಸಹ ಅಟ್ಟಿಲಿ ಪಡೆದುಕೊಂಡಿದ್ದಾರೆ.

ನಯನತಾರಾ ನಾಯಕಿ

ನಯನತಾರಾ ನಾಯಕಿ

ಶಾರುಖ್ ಖಾನ್ ನಟಿಸುತ್ತಿರುವ 'ಜವಾನ್' ಸಿನಿಮಾದಲ್ಲಿ ಬಹುತೇಕ ನಟ-ನಟಿಯರು ತಮಿಳಿನವರೇ ಆಗಿದ್ದಾರೆ. ಅಟ್ಟಿಲಿ ನಿರ್ದೇಶನದ ಈ ಸಿನಿಮಾದಲ್ಲಿ ನಯನತಾರಾ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಹಾಸ್ಯನಟ ಯೋಗಿ ಬಾಬು ಸಹ ಸಿನಿಮಾದಲ್ಲಿದ್ದಾರೆ. ಇನ್ನು ವಿಜಯ್ ಸೇತುಪತಿ ವಿಲನ್ ಆಗಿದ್ದಾರೆ. ಸಿನಿಮಾದ ಕೆಲವು ಪೋಸ್ಟರ್‌ಗಳು ಈಗಾಗಲೇ ಬಿಡುಗಡೆ ಆಗಿದ್ದು, ಈ ಸಿನಿಮಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಆಗಿರಲಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಹಲವು ಸಿನಿಮಾಗಳಿವೆ ವಿಜಯ್ ಸೇತುಪತಿ ಬಳಿ

ಹಲವು ಸಿನಿಮಾಗಳಿವೆ ವಿಜಯ್ ಸೇತುಪತಿ ಬಳಿ

ಇನ್ನು ವಿಜಯ್ ಸೇತುಪತಿ ಕೈಯಲ್ಲಿ ಹಲವು ಸಿನಿಮಾಗಳಿವೆ. 'ವಿಕ್ರಂ' ಸಿನಿಮಾದ ಭರ್ಜರಿ ಹಿಟ್ ಬಳಿಕ ವಿಜಯ್ ಸೇತುಪತಿ ಬಾಲಿವುಡ್‌ ಕಡೆ ಮುಖ ಮಾಡಿದಂತಿದ್ದಾರೆ. ಕತ್ರಿನಾ ಕೈಫ್ ಜೊತೆ ಹಿಂದಿ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾ ಮುಗಿವ ಹಂತದಲ್ಲಿದೆ. ತಮಿಳಿನ 'ಮಾನಗರಂ' ಸಿನಿಮಾದ ಹಿಂದಿ ರೀಮೇಕ್‌ನಲ್ಲಿಯೂ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ. ಅದರ ಬಳಿಕ ಸುದೀಪ್ ಜೊತೆ 'ಪಿಸಾಸು 2', 'ಗಾಂಧಿ ಟಾಕೀಸ್', 'ಸುದು ಕುವಂ 2', ''ಯಾದೂಂ ಊರೆ ಯಾವರೂಂ ಕೇಲಿರ್', 'ವಿಧತಲೈ', 'ಮೈಖೆಲ್', 'ಕುಲಾಸ್ವಾಮಿ', 'ಸಲಾರ್' ಇನ್ನೂ ಹಲವು ನಟಿಸಿಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Tamil actor Vijay Sethupathi taking huge remuneration for Shah Rukh Khan's Jawan movie. Nayantara acting as heroine in the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X