ಸಲಾರ್ ಚಿತ್ರಕ್ಕೆ ಎಂಟ್ರಿ ಕೊಟ್ಟ ಸ್ಟಾರ್ ನಟ: ವಿಲನ್ ಪಾತ್ರದಲ್ಲಿ ಖ್ಯಾತ ಹೀರೋ?
ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್‌ನಲ್ಲಿ ಸೆಟ್ಟೇರಿರುವ ಸಲಾರ್ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ. ಇತ್ತೀಚಿಗಷ್ಟೆ ಹೈದರಾಬಾದ್‌ನಲ್ಲಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದ್ದು, ರಾಕಿಂಗ್ ಸ್ಟಾರ್ ಯಶ್ ಅತಿಥಿಯಾಗಿ ಪಾಲ್ಗೊಂಡಿದ್ದರು.
'ಸಲಾರ್' ಚಿತ್ರಕ್ಕೆ ಹೀರೋಯಿನ್ ಯಾರು ಎಂಬ ವಿಚಾರವೇ ದೊಡ್ಟ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದೀಗ, ದಕ್ಷಿಣ ಭಾರತದ ಖ್ಯಾತ ನಟ ಸಲಾರ್ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಪ್ರಸ್ತುತ, ದಕ್ಷಿಣ ಭಾರತದಲ್ಲಿ ಸ್ಟಾರ್ ಹೀರೋ ಆಗಿ ಮಿಂಚುತ್ತಿರುವ ಹೀರೋ ಈಗ ಸಲಾರ್ ಚಿತ್ರದಲ್ಲಿ ವಿಲನ್ ಆಗಲಿದ್ದಾರೆ. ಅಷ್ಟಕ್ಕೂ ಯಾರದು? ಮುಂದೆ ಓದಿ....

ಸಲಾರ್ ಚಿತ್ರದಲ್ಲಿ ವಿಜಯ್ ಸೇತುಪತಿ?
ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಅವರು ಸಲಾರ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದ ಪ್ರಮುಖ ಖಳನಾಯಕನ ಪಾತ್ರಕ್ಕಾಗಿ ಸೇತುಪತಿ ಜೊತೆ ಮಾತುಕತೆ ಮಾಡಲಾಗುತ್ತಿದೆ. ಆದರೆ, ಇನ್ನು ಪಕ್ಕಾ ಆಗಿಲ್ಲ. ಒಂದು ವೇಳೆ ಈ ಕಾಂಬಿನೇಷನ್ ಕ್ಲಿಕ್ ಆದರೆ ಸಲಾರ್ ಮೇಲಿನ ನಿರೀಕ್ಷೆ ಹೆಚ್ಚಾಗಲಿದೆ.

ಮಾಸ್ಟರ್‌ನಲ್ಲಿ ಧಮಾಕ ಮಾಡಿದ ಸೇತುಪತಿ
ವಿಜಯ್ ನಟಿಸಿದ್ದ ಮಾಸ್ಟರ್ ಚಿತ್ರದಲ್ಲಿ ವಿಜಯ್ ಸೇತುಪತಿ ಖಳನಾಯಕನಾಗಿ ನಟಿಸಿದ್ದರು. ಸೇತುಪತಿ ಪರ್ಫಾಮೆನ್ಸ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಅಂದ್ಹಾಗೆ, ಸೇತುಪತಿ ಭಾಷೆಯ ಗಡಿ ಮೀರಿ ಅಭಿಮಾನಿಗಳನ್ನು ಹೊಂದಿದ್ದಾರೆ. ಹಾಗಾಗಿ, ಪ್ಯಾನ್ ಇಂಡಿಯಾ ಚಿತ್ರ ಸಲಾರ್‌ಗೆ ಸೇತುಪತಿ ಎಂಟ್ರಿ ಹೈಪ್ ಕ್ರಿಯೇಟ್ ಮಾಡಬಹುದು ಎನ್ನುವ ಲೆಕ್ಕಾಚಾರ ಇದೆ.

ಬಾಲಿವುಡ್ ನಟಿಯರು ಬರಬಹುದು?
ಸಲಾರ್ ಚಿತ್ರಕ್ಕೆ ನಾಯಕಿ ಯಾರಾಗಬಹುದು ಎಂಬ ವಿಚಾರ ಚರ್ಚೆಯಾಗುತ್ತಿದೆ. ಬಾಲಿವುಡ್ ನಟಿ ದಿಶಾ ಪಟಾನಿ ಪ್ರಮುಖ ಹೀರೋಯಿನ್ ಆಗಬಹುದು ಎಂದು ಹೇಳಲಾಗಿದೆ. ಈ ನಡುವೆ ಕತ್ರಿನಾ ಕೈಫ್ ಹೆಸರು ಸಹ ಸಲಾರ್ ಪ್ರಾಜೆಕ್ಟ್‌ನಲ್ಲಿ ಕೇಳಿ ಬರ್ತಿದೆ. ಸದ್ಯಕ್ಕೆ ಈ ಇಬ್ಬರು ಪಕ್ಕಾ ಆಗಿಲ್ಲ.

ಫೆಬ್ರವರಿಯಲ್ಲಿ ಶೂಟಿಂಗ್!
ಇತ್ತೀಚಿಗಷ್ಟೆ ಸಲಾರ್ ಮುಹೂರ್ತ ನೆರವೇರಿದೆ. ಭಾರತದ ಎಲ್ಲ ಪ್ರಮುಖ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಸದ್ಯ ಪೂರ್ವ ತಯಾರಿ ನಡೆಸಿರುವ ನಿರ್ದೇಶಕ ಪ್ರಶಾಂತ್ ನೀಲ್, ಫೆಬ್ರವರಿಯಿಂದ ಚಿತ್ರೀಕರಣ ಆರಂಭಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


Click it and Unblock the Notifications











