For Quick Alerts
  ALLOW NOTIFICATIONS  
  For Daily Alerts

  ಕಮಲ್ ಹಾಸನ್ ಸಿನಿಮಾದಿಂದಲೂ ಹೊರನಡೆದ ವಿಜಯ್ ಸೇತುಪತಿ!

  |

  ಭಾರತದ ಅತ್ಯುತ್ತಮ ಸಿನಿಮಾ ನಟರಲ್ಲಿ ತಮಿಳಿನ ವಿಜಯ್ ಸೇತುಪತಿ ಸಹ ಒಬ್ಬರು. ರಾಷ್ಟ್ರಪ್ರಶಸ್ತಿ ವಿಜೇತ ಈ ನಟ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  ತಮಿಳು ಮಾತ್ರವೇ ಅಲ್ಲದೆ, ತೆಲುಗು, ಹಿಂದಿ, ಮಲಯಾಳಂನಲ್ಲಿಯೂ ವಿಜಯ್ ಸೇತುಪತಿಗೆ ದೊಡ್ಡ ಬೇಡಿಕೆ ಇದೆ. ಆದರೆ ಇತ್ತೀಚೆಗೆ ವಿಜಯ್ ಸೇತುಪತಿ ದೊಡ್ಡ ಬ್ಯಾನರ್‌ ಸಿನಿಮಾಗಳಿಂದಲೇ ಹೊರಗೆ ಹೋಗುತ್ತಿದ್ದಾರೆ.

  ಮೊದಲಿಗೆ ಅಮೀರ್ ಖಾನ್ ನಟನೆಯ 'ಲಾಲ್ ಸಿಂಗ್ ಛಡ್ಡಾ' ಸಿನಿಮಾದಿಂದ ಹೊರಗೆ ಬಂದ ವಿಜಯ್, ನಂತರ ತೆಲುಗಿನ 'ಪುಷ್ಪ' ಸಿನಿಮಾದಿಂದ ಹೊರಗೆ ಬಂದರು. ಇದೀಗ ಕಮಲ್ ಹಾಸನ್ ಸಿನಿಮಾದಿಂದಲೂ ವಿಜಯ್ ಹೊರಗೆ ಬಂದಿದ್ದಾರೆ.

  ಕಮಲ್ ಹಾಸನ್ ನಟಿಸುತ್ತಿರುವ 'ವಿಕ್ರಂ' ಸಿನಿಮಾದಲ್ಲಿ ವಿಜಯ್ ಸೇತುಪತಿಗೆ ಮುಖ್ಯ ಪಾತ್ರವಿತ್ತು. ಆದರೆ ಆ ಸಿನಿಮಾದಿಂದ ವಿಜಯ್ ಸೇತುಪತಿ ಹೊರಗೆ ಬಂದಿದ್ದಾರೆ.

  ವಿಜಯ್ ಸೇತುಪತಿ ಬಳಿ ಪ್ರಸ್ತುತ 20 ಕ್ಕೂ ಹೆಚ್ಚು ಸಿನಿಮಾಗಳಿವೆ. ಈಗಾಗಲೇ ಬಿಗಿಯಾದ ಶೆಡ್ಯೂಲ್ ಹೊಂದಿರುವ ಅವರು 'ವಿಕ್ರಂ' ಸಿನಿಮಾಕ್ಕೆ ಡೇಟ್ಸ್ ಹೊಂದಿಸಲು ಆಗದೆ ಆ ಸಿನಿಮಾದಿಂದ ಹೊರಗೆ ಹೋಗುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹೊರಹಾಕಿಲ್ಲ.

  ಮತ್ತೊಂದು ಸುದ್ದಿಯ ಪ್ರಕಾರ, ಚಿತ್ರತಂಡವು ವಿಜಯ್ ಸೇತುಪತಿಗೆ ಆಫರ್ ಮಾಡಿದ್ದ ಸಂಭಾವನೆ ಸಹ ವಿಜಯ್ ಸೇತುಪತಿ, 'ವಿಕ್ರಂ' ಸಿನಿಮಾದಿಂದ ಹೊರಬರಲು ಕಾರಣವೆಂದು ಹೇಳಲಾಗುತ್ತಿದೆ. ಕಮಲ್ ಹಾಸನ್ ಹಾಗೂ ವಿಜಯ್ ಸೇತುಪತಿ ಅಭಿಮಾನಿಗಳು ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ.

  'ಲಾಲ್ ಸಿಂಗ್ ಛಡ್ಡಾ' ಸಿನಿಮಾದಲ್ಲಿ ವಿಜಯ್ ಸೇತುಪತಿ ಕೈಬಿಟ್ಟ ಪಾತ್ರಕ್ಕೆ ತೆಲುಗಿನ ನಾಗಚೈತನ್ಯ ಅನ್ನು ಆಯ್ಕೆ ಮಾಡಲಾಯಿತು. 'ಪುಷ್ಪ' ಸಿನಿಮಾದಲ್ಲಿ ವಿಜಯ್ ಕೈ ಬಿಟ್ಟ ಪಾತ್ರಕ್ಕೆ ಮಲಯಾಳಂನ ಫಹಾದ್ ಫಾಸಿಲ್ ಅನ್ನು ಹಾಕಿಕೊಳ್ಳಲಾಯಿತು. ಈಗ 'ವಿಕ್ರಂ' ಸಿನಿಮಾದಲ್ಲಿಯೂ ಸಹ ವಿಜಯ್ ಜಾಗಕ್ಕೆ ಯಾವ ನಟನನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಕುತೂಹಲ ಇದೆ.

  ಕಮಲ್ ಹಾಸನ್ ನಟಿಸುತ್ತಿರುವ 'ವಿಕ್ರಂ' ಸಿನಿಮಾವನ್ನು ಲೋಕೇಶ್ ಕನಕರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಫಹಾದ್ ಫಾಸಿಲ್ ಸಹ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಆಂಟೊನಿ ವರ್ಗೀಸ್, ನಾರಾಯನ್, ಅರ್ಜುನ್ ದಾಸ್ ಇದ್ದಾರೆ. ಸಿನಿಮಾದಲ್ಲಿ ನಾಯಕಿ ಪಾತ್ರವೇ ಇಲ್ಲ.

  English summary
  Vijay Sethupathi walked out of Kamal Haasan's Vikram movie. Previously he walked out of Hindi movie 'Lal Singh Chadda', Telugu movie 'Pushpa' for dates issue.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X