ಸಂಭಾವನೆ ಪಡೆಯುವುದರಲ್ಲಿ ದಾಖಲೆ ಬರೆದ ನಟ ವಿಜಯ್

ಭಾರತದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರು ತಮಿಳಿನ ನಟ ವಿಜಯ್.

ವಿಜಯ್ ಸಿನಿಮಾಗಳೆಂದರೆ ಅವು ಪಕ್ಕಾ ಹೌಸ್‌ಫುಲ್. ತಮಿಳಿನಲ್ಲಿ ಮಾತ್ರವಲ್ಲ ಇತರೆ ಭಾಷೆಗಳಲ್ಲಿಯೂ ವಿಜಯ್‌ಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗಳು ಕೆಲವೇ ದಿನಗಳಲ್ಲಿ ನೂರು-ಇನ್ನುರು ಕೋಟಿ ಗಳಿಕೆಯನ್ನು ಸುಲಭಕ್ಕೆ ಮಾಡಿಬಿಡುತ್ತದೆ.

ಕಳೆದ ವರ್ಷ ಕೊರೊನಾ ಸಮಯದಲ್ಲಿ ಬಿಡುಗಡೆ ಆಗಿದ್ದ ವಿಜಯ್ ನಟನೆಯ 'ಮಾಸ್ಟರ್' ಸಿನಿಮಾ, 50% ಆಕ್ಯುಪೆನ್ಸಿ ನಡುವೆಯೂ ಗಳಿಕೆಯಲ್ಲಿ ದಾಖಲೆ ಮಾಡಿತ್ತು. ತಮ್ಮ ಸಿನಿಮಾ ನೂರಾರು ಕೋಟಿ ಗಳಿಸುತ್ತಿರುವುದನ್ನು ಗಮನಿಸಿ ತಮ್ಮ ಸಂಭಾವನೆಯನ್ನು ಭಾರಿ ಮಟ್ಟದಲ್ಲಿ ಏರಿಸಿಕೊಂಡಿದ್ದಾರೆ ವಿಜಯ್. ಆ ಮೂಲಕ ಸಂಭಾವನೆ ಪಡೆಯುದರಲ್ಲಿಯೂ ದಾಖಲೆ ನಿರ್ಮಿಸಿದ್ದಾರೆ.

ವಿಜಯ್ ಕೆಲವು ದಿನಗಳ ಹಿಂದಷ್ಟೆ ತಮ್ಮ 66ನೇ ಸಿನಿಮಾ ಒಪ್ಪಿಕೊಂಡಿದ್ದಾರೆ. ತೆಲುಗಿನಲ್ಲಿ ಕೆಲವು ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಲಿರುವ ಈ ಸಿನಿಮಾಕ್ಕೆ ದೊಡ್ಡ ಸಿನಿಮಾಗಳ ನಿರ್ಮಾಪಕ ದಿಲ್ ರಾಜು ಬಂಡವಾಳ ಹೂಡಲಿದ್ದಾರೆ.

ಭಾರಿ ಸಂಭಾವನೆ ಪಡೆಯುತ್ತಿರುವ ವಿಜಯ್

ಭಾರಿ ಸಂಭಾವನೆ ಪಡೆಯುತ್ತಿರುವ ವಿಜಯ್

'ಮಾಸ್ಟರ್', 'ಬೀಸ್ಟ್' ಸಿನಿಮಾಗಳಿಗೆ ಕ್ರಮವಾಗಿ 70, 80 ಕೋಟಿ ಸಂಭಾವನೆ ಪಡೆದಿದ್ದ ನಟ ವಿಜಯ್ ತಮ್ಮ 66ನೇ ಸಿನಿಮಾಕ್ಕೆ 100 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಮೂಲಗಳ ಪ್ರಕಾರ ಈ ಸಿನಿಮಾಕ್ಕೆ ವಿಜಯ್ ಬರೋಬ್ಬರಿ 120 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರಂತೆ. ಆ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಭಾರತದ ನಟ ಎಂಬ ಖ್ಯಾತಿಯನ್ನು ವಿಜಯ್ ಪಡೆಯುತ್ತಿದ್ದಾರೆ.

ಚಿತ್ರೀಕರಣ ಆರಂಭಕ್ಕೂ ಮುನ್ನ 200 ಕೋಟಿ ಆಫರ್

ಚಿತ್ರೀಕರಣ ಆರಂಭಕ್ಕೂ ಮುನ್ನ 200 ಕೋಟಿ ಆಫರ್

ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ಮುನ್ನವೇ ದೊಡ್ಡ ಮಾಧ್ಯಮ ಸಂಸ್ಥೆಯಿಂದ ಭಾರಿ ದೊಡ್ಡ ಡೀಲ್ ಈ ಸಿನಿಮಾಕ್ಕೆ ಹುಡುಕಿಕೊಂಡು ಬಂದಿದೆ. ಒಟಿಟಿ ಹಾಗೂ ಮನೊರಂಜನಾ ಚಾನೆಲ್ ಎರಡೂ ಹೊಂದಿರುವ ಮೀಡಿಯಾ ಸಂಸ್ಥೆಯೊಂದು ಸಿನಿಮಾದ ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕು ಎರಡಕ್ಕೂ ಸೇರಿ 200 ಕೋಟಿ ಆಫರ್ ನೀಡಿದೆಯಂತೆ. ಆದರೆ ಒಪ್ಪಂದಕ್ಕೆ ದಿಲ್‌ ರಾಜು ಇನ್ನೂ ಸಹಿ ಹಾಕಿಲ್ಲ. ಸಿನಿಮಾದ ಚಿತ್ರೀಕರಣ ಆರಂಭವಾದಮೇಲಷ್ಟೆ ಬಾಕಿ ಎಂದಿದ್ದಾರೆ.

ಮಾರ್ಚ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ

ಮಾರ್ಚ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ

ಸಿನಿಮಾದ ಚಿತ್ರೀಕರಣ ಇದೇ ವರ್ಷ ಮಾರ್ಚ್‌ನಲ್ಲಿ ಪ್ರಾರಂಭವಾಗಲಿದೆ. ಈ ಸಿನಿಮಾವು ಕೌಟುಂಬಿಕ ಕತೆಯನ್ನು ಹೊಂದಿರಲಿದೆ ಎಂದು ನಿರ್ಮಾಪಕ ದಿಲ್ ರಾಜು ಗುಟ್ಟು ಬಿಟ್ಟುಕೊಟ್ಟಿದ್ದಾರೆ. ''ವಿಜಯ್, ಕೌಟುಂಬಿಕ ಕತೆಯಲ್ಲಿ ಕಾಣಿಸಿಕೊಂಡು ಬಹು ಸಮಯವಾಯ್ತು. ನಿರ್ದೇಶಕ ವಂಶಿ ಪೈಡಪಲ್ಲಿ ಕತೆ ಹೇಳಿದಾಗ ನಾನೂ ಹಾಗೂ ವಿಜಯ್ ಇಬ್ಬರೂ ಬಹಳ ಮೆಚ್ಚಿಕೊಂಡೆವು. ವಿಜಯ್‌ ಅವರು ಕೂಡಲೇ ಈ ಸಿನಿಮಾ ಮಾಡುವುದಾಗಿ ಒಪ್ಪಿಕೊಂಡರು'' ಎಂದಿದ್ದಾರೆ. ವಿಜಯ್‌ ನಟನೆಯ 66ನೇ ಸಿನಿಮಾವು ಮುಂದಿನ ವರ್ಷ (2023) ಸಂಕ್ರಾಂತಿ ವೇಳೆಗೆ ಬಿಡುಗಡೆ ಆಗಲಿದೆ.

'ಬೀಸ್ಟ್' ಸಿನಿಮಾದಲ್ಲಿ ನಟಿಸುತ್ತಿರುವ ವಿಜಯ್

'ಬೀಸ್ಟ್' ಸಿನಿಮಾದಲ್ಲಿ ನಟಿಸುತ್ತಿರುವ ವಿಜಯ್

ವಿಜಯ್ ಇದೀಗ 'ಬೀಸ್ಟ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿರುವ ಈ ಸಿನಿಮಾವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಸೆಲ್ವರಾಘವನ್, ಯೋಗಿ ಬಾಬು, ಶೈನ್ ಟಾಮ್ ಚಾಕೋ, ಜಾನ್ ವಿಜಯ್, ಶಾಜಿ ಚೆನ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾದಲ್ಲಿ ವಿಜಯ್ ಗುಪ್ತಚರ ಇಲಾಖೆ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾವನ್ನು ಸನ್ ನೆಟ್‌ವರ್ಕ್ ಖ್ಯಾತಿಯ ಕಲಾನಿಧಿ ಮಾರನ್ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಕ್ಕೆ ವಿಜಯ್ 80 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
Tamil super star Vijay taking more than 100 cr rs for his 66th movie producing by Dil Raju. From this he will be the highest remuneration taking actor of India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X