ಚಿತ್ರೀಕರಣ ಮುಗಿವ ಮುಂಚೆಯೇ 150 ಕೋಟಿ ಲಾಭ ಮಾಡಿದ ವಿಜಯ್ ಸಿನಿಮಾ!
ತಮಿಳಿನ ಸ್ಟಾರ್ ನಟ ವಿಜಯ್‌ರ ಮಾರುಕಟ್ಟೆ ಮೌಲ್ಯ ಸಾಮಾನ್ಯದ್ದಲ್ಲ. 'ಕೆಜಿಎಫ್ 2' ಸಿನಿಮಾವನ್ನು ಎದುರು ಹಾಕಿಕೊಂಡು ತಮ್ಮ 'ಬೀಸ್ಟ್' ಸಿನಿಮಾ ಬಿಡುಗಡೆ ಮಾಡಿ ಸೋತಿದ್ದರೂ ಸಹ ವಿಜಯ್‌ರ ಮಾರುಕಟ್ಟೆ ಮೌಲ್ಯ ಒಂದಿನಿತೂ ಕುಸಿದಿಲ್ಲ. ಅವರ ಹೊಸ ಸಿನಿಮಾಕ್ಕೆ ಬಂದಿರುವ ನೂರಾರು ಕೋಟಿಯ ಆಫರ್ ಇದಕ್ಕೆ ಸಾಕ್ಷಿ.
ವಿಜಯ್ ಪ್ರಸ್ತುತ 'ವಾರಿಸು' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾದ 50% ಚಿತ್ರೀಕರಣವೂ ಪೂರ್ಣವಾಗಿಲ್ಲ. ಅದಾಗಲೇ ಸಿನಿಮಾಕ್ಕೆ 150 ಕೋಟಿ ಆಫರ್ ಬಂದಿದೆ. ಅದೂ ಚಿತ್ರಮಂದಿರ ಬಿಡುಗಡೆ ಹಕ್ಕಿನ ಹೊರತಾಗಿ!
'ವಾರಿಸು' ಸಿನಿಮಾದ ಒಟಿಟಿ ಬಿಡುಗಡೆ, ಸ್ಯಾಟಲೈಟ್, ಆಡಿಯೋ, ಡಿಜಿಟಲ್ ಹಕ್ಕುಗಳಿಗೆ 150 ಕೋಟಿ ಆಫರ್ ಅನ್ನು ನೀಡಲಾಗಿದ್ದು, ಡೀಲ್ ಅನ್ನು ನಿರ್ಮಾಪಕ ದಿಲ್ ರಾಜು ಅಂತ್ಯಗೊಳಿಸಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

ನಾನ್ ಥಿಯೇಟರಿಕಲ್ ಮಾತ್ರವೇ ಅಲ್ಲದೆ, ಈ ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕುಗಳಿಗೂ ಭಾರಿ ಡಿಮ್ಯಾಂಡ್ ಇದೆಯಂತೆ. ಹಿಂದಿ ಡಬ್ಬಿಂಗ್ ನಿಂದಲೂ ಸುಮಾರು 50 ಕೋಟಿ ಗಳಿಸಲಿದ್ದಾರೆ ದಿಲ್ ರಾಜು. ಇದೆಲ್ಲದರ ಬಳಿಕ ಸಿನಿಮಾ ಬಿಡುಗಡೆ ಆದಮೇಲೆಯೂ ನೂರಾರು ಕೋಟಿ ಹಣ ಬಾಚುವ ಸಂಭವ ಇದೆ.
'ವಾರಿಸು' ಸಿನಿಮಾದಲ್ಲಿ ವಿಜಯ್ ಜೊತೆ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ವಂಶಿ ಪೈಡ್ತಪಲ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಕತೆಯನ್ನು ಬಹುವಾಗಿ ಮೆಚ್ಚಿಕೊಂಡು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ನಟ ವಿಜಯ್.
'ವಾರಿಸು' ಸಿನಿಮಾದ ಬಳಿಕ ತಮಿಳಿನ ಜನಪ್ರಿಯ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನದ ಸಿನಿಮಾದಲ್ಲಿ ವಿಜಯ್ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ಎದುರು ವಿಲನ್ ಆಗಿ ಬಾಲಿವುಡ್‌ನ ಸ್ಟಾರ್ ಸಂಜಯ್ ದತ್ ನಟಿಸಲಿರುವುದು ವಿಶೇಷ.


Click it and Unblock the Notifications











