Aishwarya: ಅರ್ಜುನ್ ಸರ್ಜಾ ಮಗಳಿಗೆ ಭಾವಿ ಮಾವನಿಂದ ಷರತ್ತು? ಮದುವೆಗೂ ಮುನ್ನ ಏನದು ಕಂಡೀಷನ್?
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮಿಳಿನ ಹಿರಿಯ ಹಾಸ್ಯ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ಜೊತೆ ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಜೋಡಿ ಕೆಲವು ದಿನಗಳಿಂದ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.
ಅರ್ಜುನ್ ಸರ್ಜಾ ಕಟ್ಟಿಸಿರೋ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿಯೇ ಪುತ್ರಿ ಐಶ್ವರ್ಯಾ ಹಾಗೂ ಉಮಾಪತಿ ನಿಶ್ವಿತಾರ್ಥವನ್ನು ಮಾಡಿಕೊಡಲಾಗಿದೆ. ಈ ಕಾರ್ಯಕ್ರಮದ ಫೋಟೊ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ಬೆನ್ನಲ್ಲೇ ಹೊಸದೊಂದು ಸುದ್ದಿ ತಮಿಳು ಚಿತ್ರರಂಗದಲ್ಲಿ ವೈರಲ್ ಆಗುತ್ತಿದೆ.

ಐಶ್ವರ್ಯಾ ಅರ್ಜುನ್ ಮದುವೆಗೆ ತಯಾರಿ ನಡೆಸುತ್ತಿದ್ದಾರೆ. ಅದೇ ಇನ್ನೊಂದು ಕಡೆ ಐಶ್ವರ್ಯಾ ಅರ್ಜುನ್‌ಗೆ ಮಾವ ತಂಬಿ ರಾಮಯ್ಯ ಹಾಕಿರುವ ಕಂಡೀಷನ್ ಬಗ್ಗೆನೂ ಚರ್ಚೆಯಾಗುತ್ತಿದೆ. ಈಗಾಗಲೇ ತಮಿಳು ಮಾಧ್ಯಮಗಳಲ್ಲಿ ಈ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದೇನು ಅನ್ನೋದನ್ನು ತಿಳಿಯಲು ಮುಂದೆ ಓದಿ..
ಭಾವಿ ಸೊಸೆಗೆ ತಂಬಿ ರಾಮಯ್ಯ ಷರತ್ತು
ಕಳೆದ ತಿಂಗಳು ಐಶ್ವರ್ಯಾ ಹಾಗೂ ಉಮಾಪತಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅರ್ಜುನ್ ಸರ್ಜಾ ಚೆನ್ನೈನಲ್ಲಿ ನಿರ್ಮಿಸಿದ ಆಂಜನೇಯ ಸ್ವಾಮಿ ಸನ್ನಿಯಲ್ಲಿ ಈ ಜೋಡಿಯ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿತ್ತು. ಅರ್ಜುನ್ ಸರ್ಜಾ ಹಾಗೂ ತಂಬಿ ರಾಮಯ್ಯ ಕುಟುಂಬಸ್ಥರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದಾದ ಕೆಲವು ದಿನಗಳ ಬಳಿಕ ಸೊಸೆಗೆ ಮಾವ ತಂಬಿ ರಾಮಯ್ಯ ಒಂದು ಕಂಡೀಷನ್ ಹಾಕಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.

ಮಾವ ಹಾಕಿದ ಕಂಡೀಷನ್ ಏನು?
ಅರ್ಜುನ್ ಸರ್ಜಾ ಹಾಗೂ ತಂಬಿ ರಾಮಯ್ಯ ಎರಡೂ ಕುಟುಂಬಗಳೂ ಸಿನಿಮಾರಂಗಕ್ಕೆ ಚಿರಪರಿಚಿತರು. ಇಬ್ಬರ ಮಕ್ಕಳೂ ಕೂಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅರ್ಜುನ್ ಸರ್ಜಾ ಪುತ್ರಿ ಕನ್ನಡ, ತಮಿಳು, ತೆಲುಗು ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹೀಗಿರುವಾಗ ಮದುವೆ ಬಳಿಕ ಸಿನಿಮಾದಲ್ಲಿ ನಟಿಸುವಂತಿಲ್ಲ ಎಂದು ಐಶ್ವರ್ಯಾ ಅರ್ಜುನ್‌ಗೆ ಮಾವ ತಂಬಿ ರಾಮಯ್ಯ ಕಂಡೀಷನ್ ಹಾಕಿದ್ದಾರಂತೆ. ಮಾವ ತಂಬಿ ರಾಮಯ್ಯ ಕೂಡ ಸಿನಿಮಾರಂಗದವರೇ ಆಗಿದ್ದರೂ, ಯಾಕೀ ಷರತ್ತು ಹಾಕಿದ್ದಾರೆ ಅನ್ನೋದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ.
ಕಾಲಿವುಡ್‌ನಲ್ಲಿ ಹರಿದಾಡುತ್ತಿರೋ ಸುದ್ದಿ
ಐಶ್ವರ್ಯಾ ಅರ್ಜುನ್‌ಗೆ ಮಾವ ತಂಬಿ ರಾಮಯ್ಯ ಯಾಕೀ ಕಂಡೀಷನ್ ಹಾಕಿದ್ದಾರೆ ಅನ್ನೋದು ಇನ್ನು ಸ್ಪಷ್ಟವಾಗಿಲ್ಲ. ಈ ಬಗ್ಗೆ ಅಧಿಕೃತ ಮಾಹಿತಿ ಕೂಡ ಹೊರಬಿದ್ದಿಲ್ಲ. ಕೇವಲ ಕಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿಯಷ್ಟೇ. ಈ ಕಂಡೀಷನ್‌ಗೆ ಐಶ್ವರ್ಯಾ ಅರ್ಜುನ್ ಕೂಡ ಒಪ್ಪಿಕೊಂಡಿದ್ದು, ಹೊಸ ಉದ್ಯಮಕ್ಕೆ ಆರಂಭಿಸಲಿದ್ದಾರೆ ಎನ್ನಲಾಗಿದೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ ಎಂದೂ ವರದಿಯಾಗಿದೆ.
ಮದುವೆ ಯಾವಾಗ?
ಮದುವೆ ಬಳಿಕ ಐಶ್ವರ್ಯಾ ಅರ್ಜುನ್ ಸಿನಿಮಾದಲ್ಲಿ ನಟಿಸುವುದಿಲ್ಲ ಅನ್ನೋ ಸುದ್ದಿಯಂತೂ ಹರಿದಾಡುತ್ತಿದೆ. ಆದರೆ ಸತ್ಯಾಸತ್ಯತೆಗಳ ಬಗ್ಗೆ ಇನ್ನಷ್ಟ ಮಾಹಿತಿ ಹೊರಬೀಳಬೇಕಿದೆ. ಸದ್ಯ ಐಶ್ವರ್ಯಾ ಅರ್ಜುನ್ ನಿಶ್ಚಿತಾರ್ಥ ನೆರವೇರಿದ್ದು, ಮುಂದಿನ ವರ್ಷ ಫೆಬ್ರವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಈ ಬಗ್ಗೆನೂ ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿಯಿದೆ.


Click it and Unblock the Notifications











