ನಿರ್ದೇಶಕ ಶಂಕರ್ ಜೊತೆ ಕಿರಿಯ ಮಗಳು ಮಾತಾಡುತ್ತಿಲ್ಲ: ಅಪ್ಪ-ಮಗಳ ನಡುವೆ ಅಂತಹದ್ದೇನಾಯ್ತು?
ದಕ್ಷಿಣ ಭಾರತದ ದುಬಾರಿ ನಿರ್ದೇಶಕ ಶಂಕರ್ ಯಾರಿಗೆ ಗೊತ್ತಿಲ್ಲ ಹೇಳಿ. 'ಇಂಡಿಯನ್', 'ಎಂದಿರನ್', 'ಅನ್ನಿಯನ್', 2.0 ಅಂತಹ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನಿರ್ದೇಶಿರೋ ಶಂಕರ್ ಎಲ್ಲಾ ಭಾಷೆಯ ಸಿನಿಮಾ ಪ್ರಿಯರಿಗೂ ಬಹುತೇಕ ಪರಿಚಯವಿದೆ.
ಮಾಸ್ ಹಾಗೂ ತಾಂತ್ರಿಕವಾಗಿ ಅಚ್ಚರಿ ಮೂಡಿಸುವಂತಹ ಸಿನಿಮಾಗಳನ್ನೇ ಶಂಕರ್ ನಿರ್ದೇಶನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಬಿಗ್ ಬಜೆಟ್ ಸಿನಿಮಾಗಳನ್ನು ಮಾಡಿ ಗೆಲ್ಲುವುದನ್ನು ಹೇಳಿ ಕೊಟ್ಟಿದ್ದೇ ಶಂಕರ್. ಇದರೊಂದಿಗೆ ತಮಿಳು ಚಿತ್ರರಂಗವನ್ನು ಪ್ಯಾನ್ ಇಂಡಿಯಾ ಲೆವೆಲ್‌ಗೆ ತೆಗೆದುಕೊಂಡು ಹೋಗಿದ್ದು ಇದೇ ನಿರ್ದೇಶಕ.

ಶಂಕರ್ ನಿರ್ದೇಶಿಸಿದ ಸಿನಿಮಾ ತಮಿಳು ಚಿತ್ರರಂಗಕ್ಕಷ್ಟೇ ಅಲ್ಲ. ಭಾರತೀಯ ಚಿತ್ರರಂಗಕ್ಕೆ ಹೊಸದೆನಿಸಿತ್ತು. ಬಾಕ್ಸಾಫೀಸ್‌ನಲ್ಲೂ ಹೊಸ ಕ್ರಾಂತಿಯನ್ನೇ ಬರೆದಿತ್ತು. ಶಂಕರ್ ಸಿನಿಮಾ ಅಂದ್ರೆ ಇಂದಿಗೂ ನಿರೀಕ್ಷೆಗಳು ದುಪ್ಪಟ್ಟಾಗುತ್ತವೆ. ಈಗ ಶಂಕರ್ ಜೊತೆಗೆ ಅವರ ಪುತ್ರಿ ಕೂಡ ಸಿನಿಮಾರಂಗದಲ್ಲಿ ಮಿಂಚುತ್ತಿದ್ದಾರೆ. ಸದ್ಯ ತಮಿಳು ಚಿತ್ರರಂಗದಲ್ಲಿ ಅಪ್ಪ-ಮಗಳ ಬಗ್ಗೆನೇ ಸುದ್ದಿ ಓಡಾಡುತ್ತಿದೆ.
'ಜಂಟಲ್‌ಮ್ಯಾನ್' ಶಂಕರ್ ಅಂತಲೇ ಖ್ಯಾತಿ
ಶಂಕರ್ 1993ರಿಂದ ಸಿನಿಮಾರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. 'ಜಂಟಲ್‌ಮ್ಯಾನ್' ಇವರು ನಿರ್ದೇಶಿಸಿದ ಮೊದಲ ಸಿನಿಮಾ. ಇಂದಿಗೂ ಶಂಕರ್ ಹಾಗೂ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಸೇರಿಕೊಂಡರೆ, ಆ ಸಿನಿಮಾ ಹಿಟ್ ಲಿಸ್ಟ್ ಸೇರೋದು ಗ್ಯಾರಂಟಿ. ಇದೂವರೆಗೂ ಈ ಜೋಡಿ ಸುಮಾರು 11 ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದೆ. 'ಇಂಡಿಯನ್', 'ಶಿವಾಜಿ', 'ಎಂದಿರನ್' ಇವರ ವೃತ್ತಿ ಬದುಕಿಗೆ ಹೊಸ ಮೈಲೇಜ್ ಕೊಟ್ಟ ಸಿನಿಮಾ. ವೃತ್ತಿ ಜೀವನದ ಹೊರತಾಗಿ ಶಂಕರ್ ಕೌಟುಂಬಿಕ ಜೀವನ ಕೂಡ ಸುದ್ದಿಯಲ್ಲಿದೆ.
ಶಂಕರ್‌ಗೆ ಪುತ್ರಿಯರದ್ದೇ ಚಿಂತೆ?
ತಮಿಳು ಚಿತ್ರರಂಗದಲ್ಲಿ ಶಂಕರ್ ಸಿನಿಮಾಗಳಂತೆ ಅವರ ಕುಟುಂಬ ಜೀವನ ಕೂಡ ಅಷ್ಟೇ ಚರ್ಚೆಯಲ್ಲಿದೆ. ಇತ್ತೀಚೆಗೆ ತಮಿಳಿನ ವಿವಾದ ಪತ್ರಕರ್ತ ಬೈಲ್ವಾನ್ ರಂಗನಾಥ್ ಶಾಕ್ ಹೇಳಿಕೆಯೊಂದನ್ನು ನೀಡಿದ್ದರು. ಶಂಕರ್ ಮೊದಲ ಪುತ್ರಿ ಐಶ್ವರ್ಯಾ ಪತಿಯಿಂದ ವಿಚ್ಛೇದನ ಪಡೆಯಲಿದ್ದಾರೆ ಅಂತ ಹೇಳಿದ್ದರು. 2021ರಲ್ಲಿ ಐಶ್ವರ್ಯಾ ಮಧುರೈ ಪ್ಯಾಂಥರ್ಸ್ ಕ್ರಿಕೆಟ್ ತಂಡದ ಆಟಗಾರ ರೋಹಿತ್ ದಾಮೋದರ್ ಜೊತೆ ವಿವಾಹವಾಗಿದ್ದರು. ಆದರೆ, ಈ ಹೇಳಿಕೆ ಶಂಕರ್ ಹಾಗೂ ಕುಟುಂಬ ಪ್ರತಿಕ್ರಿಯೆ ನೀಡಿಲ್ಲ.

2ನೇ ಮಗಳು ತಂದೆ ಜೊತೆ ಮಾತಾಡುತ್ತಿಲ್ಲ
ಶಂಕರ್ ಎರಡನೇ ಮಗಳು ಅದಿತಿ. ಎಂಬಿಬಿಎಸ್ ಶಿಕ್ಷಣ ಪಡೆದಿರೋ ಅದಿತಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕಾರ್ತಿ ನಟಿಸಿದ 'ವಿರುಮಾನ್' ಸಿನಿಮಾದಲ್ಲಿ ನಟಿಸಿರೋ ಅದಿತಿಗೆ ಸಿನಿಪ್ರಿಯರು ಮೆಚ್ಚುಗೆ ಸೂಚಿಸಿದ್ದರು. ಶಿವಕಾರ್ತಿಕೇಯನ್ ಜೊತೆ ನಟಿಸಿದ 'ಮಾವೀರನ್' ಕೂಡ ಕ್ಲಿಕ್ ಆಯ್ತು. ಹೀಗಾಗಿ ಅದಿತಿ ಶಂಕರ್‌ಗೆ ಹೆಚ್ಚು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಈ ಮಧ್ಯೆ ಕಿರಿಯ ಮಗಳು ಅದಿತಿ ಸಿನಿಮಾ ವಿಚಾರಕ್ಕೆ ತಂದೆ ಶಂಕರ್ ಜೊತೆ ಮಾತು ಬಿಟ್ಟಿದ್ದಾರಂತೆ. ಇಂತಹದ್ದೊಂದು ಸುದ್ದಿ ಟಾಲಿವುಡ್‌ನಲ್ಲಿ ಓಡಾಡುತ್ತಿದೆ.
ಅಪ್ಪ-ಮಗಳ ಕಿತ್ತಾಟಕ್ಕೇನು ಕಾರಣ?
ಶಂಕರ್ ಮಗಳು ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದು, ತಂದೆ ಶಂಕರ್ ಒಪ್ಪಿಗೆ ಪಡೆದಿಲ್ಲ. ಮಗಳ ಈ ನಡೆಯನ್ನು ಶಂಕರ್ ವಿರೋಧಿಸಿದ್ದರಂತೆ. ಇದರ ಹೊರತಾಗಿಯೂ ಅದಿತಿ ಶಂಕರ್ ಸಿನಿಮಾದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದರಿಂದ ಅಪ್ಪ-ಮಗಳು ಇಬ್ಬರೂ ಮುನಿಸಿಕೊಂಡಿದ್ದಾರೆ. ಈ ಮಧ್ಯೆ ಅಪ್ಪನ ಹೆಸರಿನಿಂದಲೇ ಅದಿತಿ ಚಿತ್ರರಂಗಕ್ಕೆ ಬಂದಿದ್ದಾರೆ ಅನ್ನೋ ಆರೋಪಗಳು ಕೂಡ ಕೇಳಿಬಂದಿದ್ದವು. ಈ ಬಗ್ಗೆ ಕೂಡ ಶಂಕರ್ ಕುಟುಂಬ ಪ್ರತಿಕ್ರಿಯಿಸಿಲ್ಲ.


Click it and Unblock the Notifications











