ಮಹೇಶ್ ಬಾಬುಗೆ ವಿಚ್ಛೇದನ ನೀಡಲು ಮುಂದಾಗಿದ್ದ ನಮ್ರತಾ ಶಿರೋಡ್ಕರ್: ಕಾರಣ ಆ ನಟಿ?

By ಫಿಲ್ಮಿಬೀಟ್ ಡೆಸ್ಕ್

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಹಾಗೂ ನಮ್ರತಾ ಶಿರೋಡ್ಕರ್ ತೆಲುಗು ಚಿತ್ರರಂಗದ ಬೆಸ್ಟ್ ಕಪಲ್. ಇವರಿಬ್ಬರೂ ಗುಟ್ಟಾಗಿ ಪ್ರೀತಿ ಮಾಡಿದ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದರು.

ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮಹೇಶ್ ಬಾಬು ಹಾಗೂ ನಮ್ರತಾ ಇಬ್ಬರೂ ಮಗ ಹಾಗೂ ಮಗಳೊಂದಿಗೆ ಸಮೃದ್ಧವಾದ, ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಮಹೇಶ್ ಬಾಬು ಅದೆಷ್ಟೇ ಬ್ಯುಸಿಯಾಗಿದ್ದರೂ ತನ್ನ ಕುಟುಂಬಕ್ಕೆ ಸಮಯ ಕೊಡುವುದನ್ನು ಮಾತ್ರ ಮರೆಯೋದಿಲ್ಲ.

Viral When Namrata Shirodkar decided to divorce Mahesh Babu because of that actress

ಹೆಚ್ಚು ಕಡಿಮೆ ಪ್ರತಿ ಮೂರು ತಿಂಗಳಿಗೊಮ್ಮೆ ಪತ್ನಿ ಹಾಗೂ ಮಕ್ಕಳನ್ನು ಕರೆದುಕೊಂಡು ವಿದೇಶಕ್ಕೆ ಹೋಗಿ ಎಂಜಾಯ್ ಮಾಡಿ ಬರುತ್ತಾರೆ. ಈ ಜೋಡಿ ಈಗ ನೆಮ್ಮದಿಯಾಗಿ ಸಂಸಾರ ನಡೆಸುತ್ತಿದ್ದಾರೆ. ಆದರೆ, ಹಿಂದೊಮ್ಮೆ ನಮ್ರತಾ ಹಾಗೂ ಮಹೇಶ್ ಬಾಬು ನಡುವೆ ವೈಮನಸ್ಸು ಶುರುವಾಗಿತ್ತು. ಒಂದು ಹಂತದಲ್ಲಿ ನಮ್ರತಾ ವಿಚ್ಚೇದನ ನೀಡುವುದಕ್ಕೂ ಮುಂದಾಗಿದ್ದರು ಎಂಬ ಸುದ್ದಿ ಓಡಾಡಿತ್ತು.

ವಿಚ್ಛೇದನ ನೀಡಲು ಮುಂದಾಗಿದ್ದ ನಮ್ರತಾ?

'ವಂಶಿ' ಸಿನಿಮಾದ ವೇಳೆ ನಮ್ರತಾ ಶಿರೋಡ್ಕರ್ ಹಾಗೂ ಮಹೇಶ್ ಬಾಬು ಲವ್‌ನಲ್ಲಿ ಬಿದ್ದಿದ್ದರು. ಆದರೆ, ಈ ಜೋಡಿ ಜಗತ್ತಿಗೆ ತಿಳಿಯದಂತೆ ಗುಟ್ಟಾಗಿ ಪ್ರೀತಿ ಮಾಡುತ್ತಿದ್ದರು. ಬಳಿಕ ಫೆಬ್ರವರಿ 10, 2005ರಲ್ಲಿ ಕೇವಲ ಎರಡು ಕುಟುಂಬಗಳ ಸಮ್ಮುಖದಲ್ಲಿ ಈ ಜೋಡಿ ಕೌಟುಂಬಿಕ ಜೀವನಕ್ಕೆ ಕಾಲಿಟ್ಟಿತ್ತು. ಮದುವೆಯಾದ ಕೆಲವು ದಿನಗಳ ಕಾಲ ಇಬ್ಬರೂ ಆರಾಮಾಗಿಯೇ ಇದ್ದರು. ಆದರೆ, ಕೆಲವೇ ದಿನಗಳ ಬಳಿಕ ನಮ್ರತಾ ಶಿರೋಡ್ಕರ್ ಪ್ರಿನ್ಸ್ ಮಹೇಶ್ ಬಾಬುಗೆ ವಿಚ್ಛೇದನ ನೀಡುತ್ತಾರೆಂಬ ಸುದ್ದಿ ಹೇಳಿ ಅಭಿಮಾನಿಗಳೇ ಶಾಕ್ ಆಗಿದ್ದರು.

ನಾಯಕಿ ವಿಚಾರದಲ್ಲಿ ಇಬ್ಬರ ನಡುವೆ ಜಗಳ?

ಅಷ್ಟಕ್ಕೂ ನಮ್ರತಾ ಹಾಗೂ ಮಹೇಶ್ ಬಾಬು ನಡುವೆ ಬಿರುಕು ಬಿಟ್ಟಿದೆ ಅನ್ನೋ ಸುದ್ದಿ ಟಾಲಿವುಡ್‌ನಲ್ಲಿ ಸದ್ದು ಮಾಡಿತ್ತು. ಆದರೆ, ಯಾಕೆ ಅನ್ನೋದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆಗಲೇ ಇವರಿಬ್ಬರ ನಡುವೆ ನಟಿಯೊಬ್ಬರು ಎಂಟ್ರಿ ಕಟ್ಟಿದ್ದಾರೆ ಅನ್ನೋ ಸುದ್ದಿ ಓಡಾಡಿತ್ತು. ಮಹೇಶ್ ಬಾಬು ಮತ್ತು ನಮ್ರತಾ ನಡುವೆ ನಾಯಕಿಯೊಬ್ಬರ ವಿಚಾರಕ್ಕೆ ಜಗಳ ನಡೆದಿದ್ದವು ಎಂಬ ಸುದ್ದಿ ಹಬ್ಬಿದ್ದವು.

Viral When Namrata Shirodkar decided to divorce Mahesh Babu because of that actress

ಆ ನಟಿ ಯಾರು?

ಮಹೇಶ್ ಬಾಬು ಹಾಗೂ ನಮ್ರತಾ ಶಿರೋಡ್ಕರ್ ಮದುವೆಯಾದ ಕೆಲವೇ ದಿನಗಳಲ್ಲಿ ವಿಚ್ಛೇದನಕ್ಕೆ ಮುಂದಾಗಿದ್ದು ಶಾಕಿಂಗ್ ವಿಚಾರವಾಗಿತ್ತು. ಅದರಲ್ಲೂ ಅಂದಿನ ಸ್ಟಾರ್ ನಾಯಕಿನೇ ಕಾರಣ ಅನ್ನೋ ಸುದ್ದಿ ಎಲ್ಲೆಡೆ ಹಬ್ಬಿತ್ತು. ಆಕೆ ಮತ್ಯಾರೂ ಅಲ್ಲ ಕೃಷ್ಣ ಸುಂದರಿ ತ್ರಿಶಾ. ಈ ನಟಿಯ ಹೆಸರು ಅದಾಗಲೇ ಪ್ರಭಾಸ್ ಹಾಗೂ ವಿಜಯ್ ಜೊತೆ ತಳುಕು ಹಾಕಿಕೊಂಡಿತ್ತು. ಹೀಗಾಗಿ ತನ್ನ ಪತಿಯ ಮೇಲೂ ಮೋಡಿ ಮಾಡಬಹುದೆಂಬ ಭಯ ಶುರುವಾಗಿತ್ತು. ಈ ಕಾರಣಕ್ಕೆ ಮಹೇಶ್ ಬಾಬು ಹಾಗೂ ನಮ್ರತಾ ನಡುವೆ ಜಗಳ ಶುರುವಾಗಿತ್ತು ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿದ್ದವು.

ಮಹೇಶ್ ಬಾಬು-ತ್ರಿಶಾ ಟಾಲಿವುಡ್‌ನ ಹಿಟ್ ಪೇರ್

ಮಹೇಶ್ ಬಾಬು ಮದುವೆ ಆಗುವುದಕ್ಕೂ ಮೊದಲು ತ್ರಿಶಾ ಜೊತೆ 'ಅಥಡು' ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಈ ಸೂಪರ್ ಜೋಡಿ ಮತ್ತೆ 'ಸೈನಿಕುಡು' ಸಿನಿಮಾ ಮೂಲಕ ಒಂದಾಗಿತ್ತು. ಈ ಸಿನಿಮಾ ವೇಳೆ ಇಬ್ಬರ ಬಗ್ಗೆ ಒಂದಿಷ್ಟು ಸುದ್ದಿಗಳು ಹರಿದಾಡಿದ್ದವು. ಅದರಿಂದ ನಮ್ರತಾ ಶಿರೋಡ್ಕರ್ ಕೋಪಗೊಂಡಿದ್ದರು ಎಂದು ವರದಿಗಳಾಗಿವೆ.

More from Filmibeat

English summary
Viral:Namrata Shirodkar decided to divorce Mahesh Babu because of that actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X