For Quick Alerts
  ALLOW NOTIFICATIONS  
  For Daily Alerts

  ಅನುಷ್ಕಾ-ವಿರಾಟ್ ಮದುವೆಗೆ ಹೋಗುವ ಅತಿ ಮುಖ್ಯ 'ಗಣ್ಯರು' ಇವರೇ.!

  By Bharath Kumar
  |

  ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೋಡಿಯ ಮದುವೆ ಇಟಲಿಯಲ್ಲಿ ನಡೆಯಲಿದೆ ಎಂಬ ಸುದ್ದಿಗಳು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಈಗಾಗಲೇ ಎರಡು ಕುಟುಂಬದವರು ಇಟಲಿಗೆ ತೆರಳಿದ್ದು, ಈ ವಾರಾಂತ್ಯದಲ್ಲಿ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗಿದೆ.

  ಹಾಗಿದ್ರೆ, ಸೂಪರ್ ಜೋಡಿಯ ಈ ಮದುವೆಯಲ್ಲಿ ಯಾರೆಲ್ಲಾ ಭಾಗವಹಿಸಲಿದ್ದಾರೆ ಎಂಬ ಕುತೂಹಲ ಕಾಡುವುದು ಸಹಜ. ಒಂದು ಕಡೆ ಭಾರತ ಮತ್ತು ಶ್ರೀಲಂಕಾ ನಡುವೆ ಏಕದಿನ ಪಂದ್ಯವಿದ್ದು, ಭಾರತದ ಆಟಗಾರರು ಯಾರೂ ಹೋಗಲ್ಲ. ಹೀಗಿದ್ದರೂ, ಇಬ್ಬರು ಆಟಗಾರರಿಗೆ ಮಾತ್ರ ವಿರಾಟ್ ಆಹ್ವಾನ ನೀಡಿದ್ದು, ಈ ಇಬ್ಬರು ಮದುವೆಗೆ ಹೋಗಲಿದ್ದಾರಂತೆ.

  ಮದುವಣಗಿತ್ತಿಯಂತೆ ಅನುಷ್ಕಾ ಶರ್ಮಾ ಮಿಂಚಿರುವ ಟಾಪ್ 8 ಫೋಟೋಗಳುಮದುವಣಗಿತ್ತಿಯಂತೆ ಅನುಷ್ಕಾ ಶರ್ಮಾ ಮಿಂಚಿರುವ ಟಾಪ್ 8 ಫೋಟೋಗಳು

  ಇನ್ನುಳಿದಂತೆ ಬಾಲಿವುಡ್ ನ ಕೆಲವು ತಾರೆಯರು ಕೂಡ ಇವರಿಬ್ಬರ ಮದುವೆಗೆ ಆಗಮಿಸಲಿದ್ದಾರೆ ಎನ್ನಲಾಗಿದೆ. ಹಾಗಿದ್ದರೇ, ಆ ಇಬ್ಬರು ಆಟಗಾರರು ಯಾರು? ಯಾವ ನಟ-ನಟಿಯರು ಇಟಲಿಗೆ ಹೋಗ್ತಾರೆ ಎಂದು ಮುಂದೆ ಓದಿ.....

  ಕ್ರಿಕೆಟ್ ದೇವರಿಗೆ ಆಹ್ವಾನ

  ಕ್ರಿಕೆಟ್ ದೇವರಿಗೆ ಆಹ್ವಾನ

  ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ, ಲಿಟ್ಲ ಮಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ವಿಶೇಷ ಆಹ್ವಾನ ನೀಡಲಾಗಿದ್ದು, ಸಚಿನ್ ಅನುಷ್ಕಾ-ವಿರಾಟ್ ಮದುವೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

  ಇದೇ ವಾರ ಮದುವೆ ಆಗ್ತಾರಂತೆ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮ!ಇದೇ ವಾರ ಮದುವೆ ಆಗ್ತಾರಂತೆ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮ!

  ಯುವರಾಜ್ ಸಿಂಗ್

  ಯುವರಾಜ್ ಸಿಂಗ್

  ಸಚಿನ್ ತೆಂಡೂಲ್ಕರ್ ಜೊತೆಯಲ್ಲಿ ಭಾರತದ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಯುವರಾಜ್ ಸಿಂಗ್ ಅವರಿಗೆ ಕೂಡ ವಿಶೇಷ ಆಹ್ವಾನ ನೀಡಲಾಗಿದೆಯಂತೆ. ಹೀಗಾಗಿ, ಯುವರಾಜ್ ಕೂಡ ತಮ್ಮ ಸ್ನೇಹಿತನ ಮದುವೆಗೆ ಹೋಗಲಿದ್ದಾರೆ ಎನ್ನಲಾಗಿದೆ.

  ಅನುಷ್ಕಾ-ವಿರಾಟ್ ಮದುವೆ ಸುದ್ದಿಗೆ ಸಿಕ್ತು ತಾಜಾ ಸಾಕ್ಷಿಅನುಷ್ಕಾ-ವಿರಾಟ್ ಮದುವೆ ಸುದ್ದಿಗೆ ಸಿಕ್ತು ತಾಜಾ ಸಾಕ್ಷಿ

  ಶಾರೂಖ್-ಅಮೀರ್ ಖಾನ್?

  ಶಾರೂಖ್-ಅಮೀರ್ ಖಾನ್?

  ಬಾಲಿವುಡ್ ಇಂಡಸ್ಟ್ರಿಯಿಂದ ಅನುಷ್ಕಾ ಶರ್ಮಾ ಅವರ ಸಹ ಕಲಾವಿದರು ಅಗಮಿಸಲಿದ್ದಾರೆ ಎನ್ನಲಾಗಿದೆ. ಕಿಂಗ್ ಖಾನ್ ಶಾರೂಖ್ ಮತ್ತು ಅಮೀರ್ ಖಾನ್ ಅವರಿಗೆ ಆಹ್ವಾನ ನೀಡಲಾಗಿದೆಯಂತೆ. ಇವರಿಬ್ಬರ ಜೊತೆ ಆದಿತ್ಯ ಚೋಪ್ರಾ ಹೆಸರು ಕೂಡ ಇದೆಯಂತೆ.

  ಅನುಷ್ಕಾ ಆಪ್ತರು ಮಾತ್ರ

  ಅನುಷ್ಕಾ ಆಪ್ತರು ಮಾತ್ರ

  ಕತ್ರಿನಾ ಕೈಫ್, ರಣ್ಬೀರ್ ಕಪೂರ್, ಕರಣ್ ಜೋಹರ್ ಸೇರಿದಂತೆ ಮತ್ತೆ ಕೆಲವರು ವಿರಾಟ್-ಅನುಷ್ಕಾ ಮದುವೆಗೆ ಸಾಕ್ಷಿಯಾಗಲಿದ್ದಾರೆ ಎನ್ನಲಾಗಿದೆ. ಸುಮಾರು 15-20 ಜನಕ್ಕೆ ಮಾತ್ರ ವಿಶೇಷ ಆಹ್ವಾನ ನೀಡಲಾಗಿದೆಯಂತೆ.

  English summary
  Virat Kohli And Anushka Sharma Wedding: Shah Rukh Khan, Aamir Khan, Sachin Tendulkar, Yuvraj Singh To Attend?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X