»   » ಪಿತ್ತ ನೆತ್ತಿಗೇರಿಸಿಕೊಂಡ ಸಲ್ಮಾನ್ ಖಾನ್ ಮಾಡಿದ್ದೇನು..?

ಪಿತ್ತ ನೆತ್ತಿಗೇರಿಸಿಕೊಂಡ ಸಲ್ಮಾನ್ ಖಾನ್ ಮಾಡಿದ್ದೇನು..?

Posted By:
Subscribe to Filmibeat Kannada

ರೀಲ್ ನಲ್ಲೂ...ರಿಯಲ್ ನಲ್ಲೂ ಸಲ್ಮಾನ್ ಖಾನ್ 'ಹೀರೋ'! ಯಾರೇ ಕೆಣಕಿದರೂ, ಬೆಳ್ಳಿಪರದೆ ಮೇಲೆ ಮುಖ ಮೂತಿ ನೋಡದೆ ನಾಲ್ಕು ತದಕುವ ಸಲ್ಮಾನ್, ಪರದೆ ಹಿಂದೆ ಕೂಡ ತಂಟೆಗೆ ಬಂದವರನ್ನ ತರಾಟೆಗೆ ತೆಗೆದುಕೊಳ್ಳದೇ ಸುಮ್ಮನೆ ಕೂರುವ ಜಾಯಮಾನದವರಲ್ಲ.

ಸೆಲೆಬ್ರಿಟಿಯೇ ಆಗಿರಲಿ, ತನ್ನ ಆಪ್ತ ಸ್ನೇಹಿತನೇ ಆಗಿರಲಿ, ಪ್ರಾಣ ಕೊಡುವ ಪ್ರಿಯತಮೆ ಆಗಿರಲಿ, ಅಥವಾ ಅಭಿಮಾನಿಗಳೇ ಆಗಿರಲಿ...ಯಾರೇ ಆದರೂ, ಸಲ್ಲು ಗರಂ ಆದ್ರೆ ಕಥೆ ಮುಗಿದ ಹಾಗೆ ಲೆಕ್ಕ.

Watch the video of Salman Khan

ಸಲ್ಲು ಗರಂ ಆದ ಪ್ರಸಂಗಗಳನ್ನ ನೀವು ಇಲ್ಲಿಯವರೆಗೂ ಸಾಕಷ್ಟು ಕೇಳಿರ್ತೀರಾ. ಆದ್ರೆ, ಅದರ ಅನುಭವ ರಾಜಸ್ಥಾನದ ಕೆಲ ಹುಡುಗರಿಗೆ ಪ್ರತ್ಯಕ್ಷವಾಗಿ ಆಗಿದೆ. ಸುಮ್ಮನೆ ಹೋಗುತ್ತಿದ್ದ ಸಲ್ಮಾನ್ ಖಾನ್ ಗೆ ಟಾಂಗ್ ಕೊಟ್ಟ ಹುಡುಗ್ರಿಗೆ, ಸಲ್ಲು ಗುನ್ನ ನೀಡೋಕೆ ಮುಂದಾಗಿದ್ದರು ಅನ್ನೋದು ನಿಮ್ಗೆ ಗೊತ್ತಾ.!?

ಅಷ್ಟಕ್ಕೂ ಆಗಿದ್ದು ಏನಪ್ಪಾ ಅಂದ್ರೆ, ಸಲ್ಮಾನ್ ಖಾನ್ ತಮ್ಮ ಮುಂದಿನ ಚಿತ್ರ 'ಬಜರಂಗಿ ಭಾಯ್ ಜಾನ್' ಶೂಟಿಂಗ್ ಗಾಗಿ ರಾಜಸ್ಥಾನ್ ಗೆ ತೆರಳುತ್ತಿದ್ದರು. ಮರ್ಸಿಡೀಸ್ ಕಾರಿನಲ್ಲಿ ಹೈವೇಯಲ್ಲಿ ಚಲಿಸುತ್ತಿದ್ದಾಗ, ಕೆಲ ತುಂಡು ಹೈಕ್ಳು ಸಲ್ಲು ಗಾಡಿಯನ್ನ ಫಾಲೋ ಮಾಡಿದ್ದಾರೆ. [ಸಲ್ಮಾನ್ ಖಾನ್ ಗೆ ಶ್ರೀಲಂಕಾದ ನಟ ಎಚ್ಚರಿಕೆ ನೀಡಿದ್ದು ಯಾಕೆ? ]

ಸಾಲ್ದು ಅಂತ ಬಾಯಿಗೆ ಬಂದ ಹಾಗೆ ಕಾಮೆಂಟ್ ಮಾಡೋಕೆ ಶುರುಮಾಡಿದ್ದಾರೆ. ಮೊದ ಮೊದಲು ತಾಳ್ಮೆಯಿಂದಲೇ ಇದ್ದ ಸಲ್ಮಾನ್ ಖಾನ್ ಗೆ ಇದ್ದಕ್ಕಿದ್ದಂತೆ ರೋಷ ಉಕ್ಕಿ ಬಂದಿದೆ. ಡ್ರೈವರ್ ಗೆ ಕಾರು ನಿಲ್ಲಿಸುವುದಕ್ಕೆ ಹೇಳಿ, ರೋಡ್ ನಲ್ಲಿ ಇಳಿದು, ಟಾಂಗ್ ಕೊಟ್ಟ ಹುಡುಗರ ಬುರುಡೆ ಬಿಸಿ ಮಾಡೋಕೆ ಹೋಗಿದ್ದಾರೆ ಸಲ್ಮಾನ್. [ಸಲ್ಮಾನ್ ಖಾನ್ 'ಪ್ರೇಮ' ಪುರಾಣಕ್ಕೆ 25 ವಸಂತಗಳು! ]

ಸಲ್ಲು ಕಾರಿನಿಂದ ಇಳಿಯುತ್ತಿದ್ದಂತೆ ಅಕ್ಕಪಕ್ಕ ಇದ್ದ ಜನರೆಲ್ಲಾ ಸಲ್ಮಾನ್ ನ ಸುತ್ತು ವರಿದಿದ್ದಾರೆ. ಜನರ ಮುಂದೆ ಸೀನ್ ಕ್ರಿಯೇಟ್ ಮಾಡುವುದು ಸರಿಯಲ್ಲ ಅಂತ ಸಲ್ಲು ಜೊತೆಗಿದ್ದ ಆಪ್ತರು, ಪರಿಸ್ಥಿತಿಯನ್ನ ತಿಳಿಗೊಳಿಸಿ, ಸಲ್ಲುಗೆ ಸಮಾಧಾನ ಮಾಡಿ ಸ್ಪಾಟ್ ಗೆ ತೆರಳಿದ್ದಾರೆ.

ಸಲ್ಲು ಜೊತೆ ಆಪ್ತೇಷ್ಟರು ಇದದ್ದಕ್ಕೆ ಬಚಾವ್. ಇಲ್ಲಾಂದ್ರೆ, ಆ ಹುಡುಗರ ಕಥೆ ಏನಾಗಿರ್ತ್ತಿತ್ತೋ...ದೇವರೇ ಬಲ್ಲ..!

English summary
Salman Khan, who was traveling to the shooting spot of 'Bajrangi Bhaijaan', chased away his fans by stepping out of his car. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada