»   » ಡ್ರಾಮಾ ಕ್ವೀನ್ ರಾಖಿಗೆ ಕಡೆಗೂ ಕಂಕಣ ಭಾಗ್ಯ

ಡ್ರಾಮಾ ಕ್ವೀನ್ ರಾಖಿಗೆ ಕಡೆಗೂ ಕಂಕಣ ಭಾಗ್ಯ

Posted By:
Subscribe to Filmibeat Kannada

ಬಾಲಿವುಡ್ ನ ಕಿರಿಕ್ ತಾರೆ ಎಂದು ಕರೆಸಿಕೊಂಡಿರುವ ರಾಖಿ ಸಾವಂತ್ ಗೆ ಕಡೆಗೂ ಕಂಕಣ ಭಾಗ್ಯ ಕೂಡಿಬಂದಿದೆ. ಈ ಹಿಂದೊಮ್ಮೆ ಆಕೆ ಯೋಗಾ ಗುರು ಬಾಬಾ ರಾಮ್ ದೇವ್ ಮೇಲೆ ಕಣ್ಣಾಕ್ಕಿದ್ದರು. ಆದರೆ ಬಾಬಾ ರಾಮ್ ದೇವ್ ಕವಡೆ ಕಾಸಿನ ಕಿಮ್ಮತ್ತು ಕೊಡದೆ ರಾಖಿಗೆ ರಾಖಿ ಕಟ್ಟಿಬಿಟ್ಟರು.

ಅದಕ್ಕೂ ಮುನ್ನ 'ರಾಕಿ ಕಾ ಸ್ವಯಂವರ' ಹಾಗೂ 'ರಾಖಿ ಕಿ ಶಾದಿ' ಎಂಬ ರಿಯಾಲಿಟಿ ಶೋಗಳ ಮೂಲಕ ಒಂದಷ್ಟು ಯುವಕರ ಎದೆಯಲ್ಲಿ ನೂರಾರು ಚಿತ್ತಾರಗಳನ್ನು ಬಿಡಿಸಿದ್ದರು. ಇದೆಲ್ಲಾ ಆದ ಮೇಲೂ ರಾಖಿ ಈಗ ಮದುವೆಯಾಗಲು ದೃಢ ನಿರ್ಧಾರ ಮಾಡಿದ್ದಾರಂತೆ.


ಒಟ್ಟಾರೆಯಾಗಿ ಹೇಳಬೇಕೆಂದರೆ ರಾಖಿ ಈಗ ಮದುವೆ ಮೂಡ್ ನಲ್ಲಿದ್ದಾರೆ. ಇಷ್ಟು ದಿನ ಈಕೆ ಮದುವೆ ವಯಸ್ಸು ಮೀರಿದ ಬಾಲಿವುಡ್ ನ ಅವಿವಾಹಿತ ನಟ ಸಲ್ಮಾನ್ ಖಾನ್ ಮದುವೆಯಾದ ಕೂಡಲೆ ನಾನು ಆಗುತ್ತೇನೆ ಎನ್ನುತ್ತಿದ್ದರು.

ಆದರೆ ಸಲ್ಲು ಮದುವೆಗಾಗಿ ಕಾದುಕಾದು ರಾಖಿ ಸುಸ್ತಾಗಿದ್ದಾರೆ. ಸಲ್ಲುಗೆ ಮದುವೆಯಾಗುತ್ತದೆ ಎಂಬ ಆಸೆಯನ್ನೂ ಬಿಟ್ಟಿದ್ದಾರೆ. ಈಗ ಆಕೆ ಮದುವೆಯಾಗಲು ಸಿದ್ಧವಾಗಿದ್ದು 2014ರ ಒಳಗೆ ಮದುವೆಯಾಗುತ್ತೇನೆ ಎನ್ನುತ್ತಿದ್ದಾರೆ. ರಾಖಿಗೆ ತಾಳಿ ಕಟ್ಟುವ ಪುಣಾತ್ಮ ಎಲ್ಲಿದ್ದಾನೋ ಏನೋ? ರಾಖಿ ಅಭಿಮಾನಿಗಳೂ ಶೀಘ್ರಮೇವ 'ವರ' ಪ್ರಾಪ್ತಿ ರಸ್ತು ಎನ್ನುತ್ತಿದ್ದಾರೆ.

ಈಕೆಯೊಂದಿಗೆ ಸಂಸಾರ ಮಾಡುವ ಸೌಭಾಗ್ಯ ಅದ್ಯಾವ ವರಮಹಾಶಯನಿಗೆ ಬರೆದಿದೆಯೋ ಏನೋ ಎಂದು ಆಡಿಕೊಳ್ಳುತ್ತಿದ್ದಾರೆ. ರಾಖಿ ಸಾವಂತ್ ಸದ್ಯಕ್ಕೆ ಲೈಫ್ ಓಕೆ ವಾಹಿನಿಯ 'ವೆಲ್ ಕಮ್ ಬಾಜಿ ಮೆಹಮಾನ್ ನವಾಜ್ ಕಿ' ಎಂಬ ರಿಯಾಲಿಟಿ ಶೋನಲ್ಲಿ ಅಭಿನಯಿಸುತ್ತಿದ್ದಾರೆ. (ಏಜೆನ್ಸೀಸ್)

English summary
Bollywood Drama Queen Rakhi Sawant admitted that she want to marry. “I would probably get married by 2014. I need some time to choose my groom as marriage is not a game,” said Ms Sawant.
Please Wait while comments are loading...