ದಿಶಾ ಪಠಾನಿ- ಟೈಗರ್‌ ಶ್ರಾಫ್ ಬ್ರೇಕಪ್‌ಗೆ ಮದುವೆ ಕಾರಣ!

ಬಾಲಿವುಡ್‌ನಲ್ಲಿ ಪ್ರೀತಿ ಮಾಡುವುದು ಬ್ರೇಕಪ್ ಎನ್ನುವುದು ಇತ್ತೀಚೆಗೆ ತೀರಾ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಬ್ರೇಕಪ್ ಸುದ್ದಿಗಳೇ ಈ ನಡುವೆ ಹೆಚ್ಚಾಗಿವೆ. ಬಾಲಿವುಡ್‌ನಲ್ಲಿ ಲವ್ ಬ್ರೇಕಪ್ ಆದ ಜೋಡಿಗ ಪಟ್ಟಿ ತುಂಬಾ ದೊಡ್ಡದಾಗಿದೆ. ಇನ್ನು ಇತ್ತೀಚೆಗೆ ನಟಿ ದಿಶಾ ಪಠಾನಿ ಮತ್ತು ಟೈಗರ್‌ ಶ್ರಾಫ್ ಬ್ರೇಕಪ್ ಮೂಲಕ ಸುದ್ದಿಯಾಗಿದ್ದಾರೆ.

ಬಾಲಿವುಡ್‌ನಲ್ಲಿ ಕ್ಯೂಟ್ ಅಂಡ್ ಹಾಟ್ ಜೋಡಿ ಎಂದು ಕರೆಸಿಕೊಂಡಿರುವ ಜೋಡಿಗಳಲ್ಲೊಂದು ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ. ಈ ಜೋಡಿ ಹೇಳಿ ಮಾಡಿಸಿದಮತಿದೆ ಎನ್ನುವ ವಿರುದನ್ನು ಕುಡ ಪಡೆದುಕೊಂಡಿದೆ. ಇಬ್ಬರು ಹಲವು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿರೋ ಸುದ್ದಿ ಹರಿದಾಡುತ್ತಲೇ ಇತ್ತು. ಇನ್ನು ಈ ಜೋಡಿಗೆ ಅದೆಷ್ಟೋ ಅಭಿಮಾನಿಗಳು ಕೂಡ ಇದ್ದಾರೆ.

ದಿಶಾ ಪಟಾನಿ ಹಾಗೂ ಟೈಗರ್ ಶ್ರಾಫ್ ಇಬ್ಬರೂ ಒಟ್ಟಿಗೆ ಕೈ ಕೈ ಹಿಡಿದು ಸುತ್ತಾಡಿದ ವಿಡಿಯೋಗಳು, ಫೋಟೊಗಳು ಹರಿದಾಡಿದ್ದವು. ಆದರೂ ಈ ಜೋಡಿ ಎಲ್ಲೂ ತಾವಿಬ್ಬರೂ ಪ್ರೇಮಿಗಳು ಎಂದು ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದ್ರೀಗ ಬ್ರೇಕಪ್‌ನಿಂದ ಸುದ್ದಿ ಆಗಿದ್ದಾರೆ. ಅದಕ್ಕೆ ಕಾರಣ ಏನು ಎನ್ನುವುದು ಈಗ ಬಹಿರಂಗವಾಗಿದೆ. ಅದು ಏನು ಎನ್ನುವುದನ್ನು ಮುಂದೆ ಓದಿ...

ದೂರಾದ ಟೈಗರ್- ದಿಶಾ ಇಬ್ಬರೂ!

ದೂರಾದ ಟೈಗರ್- ದಿಶಾ ಇಬ್ಬರೂ!

ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ ಇಬ್ಬರೂ ಬಹಳ ದಿನಗಳಿಂದ ಬೇರೆ ಬೇರೆಯಾಗಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ. ಈ ಇವರ ಬ್ರೇಕಪ್ ಸುದ್ದಿ ಬಾಲಿವುಡ್‌ನಲ್ಲಿ ನಡೆವುತ್ತಿರುವ ಬಿಸಿ ಬಿಸಿ ಚರ್ಚೆ. ಇಬ್ಬರೂ ತಮ್ಮ ಪ್ರೀತಿಯನ್ನು ಮುರಿದುಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಕಳೆದ ಒಂದು ವರ್ಷದಿಂದ ಇಬ್ಬರ ಸಂಬಂಧದಲ್ಲಿ ಆಗಾಗ ಅಪಸ್ವರಗಳು ಹೇಳಿ ಬರುತ್ತಿದ್ದವು. ಕೆಲವು ವಾರಗಳ ಹಿಂದಷ್ಟೇ ಈ ಜೋಡಿ ಬೇರೆ ಬೇರೆಯಾಗಿದೆ ಅನ್ನೋ ಸುದ್ದಿ ಹರಿದಾಡಿದೆ.

ಮದುವೆ ಕಾರಣಕ್ಕೆ ಬ್ರೇಕಪ್!

ಮದುವೆ ಕಾರಣಕ್ಕೆ ಬ್ರೇಕಪ್!

ಬಾಲಿವುಡ್‌ನ ಈ ಮುದ್ದಾದ ಜೋಡಿ ಮುಂದೊಂದು ದಿನ ಮದುವೆ ಆಗುತ್ತೆ ಎನ್ನುವ ನಂಬಿಕೆ ಅಭಿಮಾನಿಗಳಿಗಿತ್ತು. ಆದರೆ ಮದುವೆ ಕಾರಣಕ್ಕೇನೆ ಈ ಜೋಡಿ ಈಗ ದೂರಾಗಿದೆಯಂತೆ. ಇವರ ಬ್ರೇಕಪ್ ಸುದ್ದಿ ಹೊರ ಬಂದ ಬಳಿಕ, ಯಾಕೆ ಈ ಜೋಡಿ ದೂರವಾಯ್ತು. ಅಂಥದ್ದು ಏನು ಆಗಿದೆ ಎನ್ನುವ ಚರ್ಚೆಗಳು ಹುಟ್ಟಿಕೊಂಡಿದ್ದವು. ಇದಕ್ಕೆ ಈಗ ಮದುವೆ ಎಂದು ಉತ್ತರ ಸಿಕ್ಕಿದೆ. ಇದು ಎಷ್ಟು ನಿಜವೋ ಗೊತ್ತಿಲ್ಲ. ಆದ್ರೆ ಮದುವೆ ಕಾರಣಕ್ಕೆ ದಿಶಾ ಪಟಾನಿ ಮತ್ತು ಟೈಗರ್ ಶ್ರಾಫ್ ದೂರ ಆಗಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.

ಟೈಗರ್ ಶ್ರಾಫ್‌ಗೆ ಈಗಲೇ ಮದುವೆ ಬೇಡ್ವಂತೆ!

ಟೈಗರ್ ಶ್ರಾಫ್‌ಗೆ ಈಗಲೇ ಮದುವೆ ಬೇಡ್ವಂತೆ!

ಬಾಲಿವುಡ್‌ನಲ್ಲಿ ವರದಿ ಆಗಿರುವ ಪ್ರಕಾರ ಈ ಜೋಡಿಯ ಬ್ರೇಕಪ್‌ಗೆ ಮುಖ್ಯ ಕಾರಣ ಟೈಗರ್ ಶ್ರಾಫ್ ಅಂತೆ. ದಿಶಾ ಪಟಾನಿ ಟೈಗರ್ ಶ್ರಾಫ್ ಜೊತೆಗೆ ಮದುವೆ ಆಗಲು ಹಲವು ವರ್ಷಗಳಿಂದ ಕಾಯುತ್ತಲಿದ್ದಾರಂತೆ. ಆದರೆ ಟೈಗರ್ ಶ್ರಾಫ್ ಮಾತ್ರ ಈಗಲೇ ಮದುವೆ ಮಾಡುಕೊಳ್ಳಲು ಸಿದ್ದರಿಲ್ಲವಂತೆ. ಈಗಾಗಲೇ ಹಲವು ಬಾರಿ ಟೈಗರ್ ಶ್ರಾಫ್ ಮದುವೆಯನ್ನು ಮುಂದಕ್ಕೆ ಹಾಕಿದ್ದಾಂತೆ. ಹಾಗಾಗಿ ಇದರಿಂದ ದಿಶಾಗೆ ಬೇಸರವಾಗಿದೆಯಂತೆ. ಮದುವೆ ಆಗುವ ವಿಚಾರಕ್ಕೇನೆ ಇವರ ಬ್ರೇಕಪ್ ಆಗಿದೆ ಎನ್ನಲಾತ್ತಿದೆ.

6 ವರ್ಷ ಪ್ರೀತಿಸಿದ್ದ ಜೋಡಿ!

6 ವರ್ಷ ಪ್ರೀತಿಸಿದ್ದ ಜೋಡಿ!

ಬಾಲಿವುಡ್‌ನ ಫಿಟ್ಟೆಸ್ಟ್ ಆಕ್ಟರ್ ಟೈಗರ್ ಶ್ರಾಫ್. ಈ ನಟನ ಸ್ಟಂಟ್ಸ್‌ಗೆ ಮರುಳಾಗದವರು ಯಾರಿಲ್ಲ. ಹಾಗೇ ಬೋಲ್ಡ್ ಅಂಡ್ ಸ್ಲಿಮ್ ನಟಿಯರಲ್ಲಿ ದಿಶಾ ಪಟಾನಿ ಕೂಡ ಒಬ್ಬರು. ದಿಶಾ ಪಟಾನಿ ಹಾಗೂ ಟೈಗರ್ ಶ್ರಾಫ್ ಇಬ್ಬರೂ ಒಟ್ಟಿಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದ 6 ವರ್ಷಗಳಿಂದ ಎಲ್ಲೇ ಹೋದರೂ ಒಟ್ಟಿಗೆ ಹೋಗಿದ್ದೂ ಇದೆ. ಒಟ್ಟೊಟ್ಟಿಗೆ ಕಂಡಿದ್ದೂ ಇದೆ. ಇವರಿಬ್ಬರ ಈ ಲವ್ ಸ್ಟೋರಿಗೆ 6 ವರ್ಷ. 6 ವರ್ಷಗಳು ಪ್ರೀತಿಯಲ್ಲಿ ಇದ್ದ ಈ ಜೋಡಿ ಈ ಬ್ರೇಕಪ್ ಮಾಡಿಕೊಂಡು ದೂರಾಗಿದೆ.

More from Filmibeat

English summary
Wedding Is The Reason For Disha Patani and Tiger Shroff Breakup, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X