'ಯಜಮಾನ'ನ 'ಬಸಣ್ಣಿ' ಪದದ ಅರ್ಥ ಗೊತ್ತಾಯ್ತು.!

Recommended Video

Yajamana movie : ಯಜಮಾನ ಚಿತ್ರದ ಮೂರನೇ ಹಾಡಿನ ವಿಚಿತ್ರ ಅರ್ಥ..! | FILMIBEAT KANNADA

'ಯಜಮಾನ' ಚಿತ್ರದ ಮೂರನೇ ಹಾಡು ಜನವರಿ 26ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಎರಡು ಹಾಡು ರಿಲೀಸ್ ಆಗಿದ್ದು, 'ಶಿವನಂದಿ' ಮತ್ತು 'ಓ ಮುಂಜಾನೆ' ದೊಡ್ಡ ಹಿಟ್ ಆಗಿದೆ.

ಈಗ 'ಬಸಣ್ಣಿ' ಹಾಡು ಗಣರಾಜ್ಯೋತ್ಸವದ ಪ್ರಯುಕ್ತ ತೆರೆಕಾಣುತ್ತಿದೆ. ಈ ಹಾಡಿನ ಹೆಸರು ಕೇಳಿದಾಗನಿಂದ ಕನ್ನಡ ಅಭಿಮಾನಿಗಳು ಶಾಕ್ ಆಗಿದ್ದಾರೆ. ಏನ್ ಗುರು ಇದು ಬಸಣ್ಣಿ. ಈ ಪದ ಯಾವತ್ತೂ ಕೇಳೇ ಇಲ್ಲ. ಏನಿದರ ಅರ್ಥ ಅಂತ ತಲೆಕೆಡಿಸಿಕೊಳ್ಳುತ್ತಿದ್ದಾರೆ.

ಬಸಣ್ಣಿ ಎಂದರೇನು ಎಂದು ಗೂಗಲ್, ಡಿಕ್ಷನರಿಗಳಲ್ಲಿ ಸರ್ಚ್ ಮಾಡ್ತಿದ್ದಾರೆ. ನಿಜವಾದ ಅರ್ಥವೇನು ಎಂದು ಗೊತ್ತಾಗದೇ ಒಂದು ರೀತಿ ಟೆನ್ಷನ್ ಆಗಿದ್ದಾರೆ ಡಿ ಬಾಸ್ ಭಕ್ತರು. ಆಮೇಲೆ ಗೊತ್ತಾಯ್ತು ಇದು ಯೋಗರಾಜ್ ಭಟ್ ಅವರ ಸಾಹಿತ್ಯ ಅಂತ. ಅಷ್ಟಕ್ಕೂ, 'ಬಸಣ್ಣಿ' ಎಂದರೇನು?

ಭಟ್ಟರ ಸಾಹಿತ್ಯ

ಭಟ್ಟರ ಸಾಹಿತ್ಯ

ಯೋಗರಾಜ್ ಭಟ್ಟರ ಸಾಹಿತ್ಯ ಅಂದ್ರೇನೆ ಹೀಗೆ, ತಲೆಕೆಟ್ಟೋಗುತ್ತೆ. ಎಲ್ಲೂ ಕೇಳದಂತಹ ಅಪರೂಪದ ಪದಗಳನ್ನ ಬಳಸಿ ಸಾಹಿತ್ಯ ಬರೆಯುತ್ತಾರೆ. ಕೇಳೋಕೆ ಚೆಂದವೆನಿಸಿದರೂ ಅರ್ಥ ಮಾತ್ರ ಅನೇಕರಿಗೆ ಗೊತ್ತಾಗಲ್ಲ. ಈ ರೀತಿಯಾದ ಭಟ್ಟರು ಹಾಡುಗಳು ಹೆಚ್ಚಿವೆ.

ಬಸಣ್ಣಿ ಅಂದರೇನು?

ಬಸಣ್ಣಿ ಅಂದರೇನು?

ಸದ್ಯದ ಮಾಹಿತಿ ಪ್ರಕಾರ ಬಸಣ್ಣಿ ಕೇವಲ ವ್ಯಕ್ತಿಯ ಹೆಸರು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ. ಕೆಲವು ಕಡೆ ಕಥೆಗಳಲ್ಲಿ ವ್ಯಕ್ತಿಯ ಹೆಸರು ಹೇಳುವಾಗ ಈ ಪದವನ್ನ ಬಳಸುತ್ತಾರೆ ಎಂದು ಹೇಳಲಾಗ್ತಿದೆ. ಆದ್ರೆ, ನಿಜವಾದ ಅರ್ಥವನ್ನ ಭಟ್ಟರೇ ಹೇಳಬೇಕಿದೆ.

ಭಟ್ಟರು-ಹರಿಕೃಷ್ಣ ಜುಗಲ್ ಬಂದಿ

ಭಟ್ಟರು-ಹರಿಕೃಷ್ಣ ಜುಗಲ್ ಬಂದಿ

ಈ ಹಿಂದೆ ಚಿಂಗಾರಿ ಚಿತ್ರದ 'ಕೈ ಕೈಯ ಕಚ್ಚಾಸುಡಾ ಬಸುಡಾ' ಹೀಗೆ ಬಂದಿತ್ತು. ಪದಗಳಿಗೆ ಅರ್ಥವೇ ಗೊತ್ತಾಗದೇ ಇದ್ದ ಪ್ರೇಕ್ಷಕರು ಮಾತ್ರ ಹಾಡು ಕೇಳಿ ಎಂಜಾಯ್ ಮಾಡ್ತಿದ್ರು. ಇಂತಹ ಸಾಹಿತ್ಯ ಬಳಸೋದ್ರಲ್ಲಿ ಯೋಗರಾಜ್ ಭಟ್ ಎತ್ತಿದ ಕೈ. ಆಗ ಭಟ್ಟರ ಸಾಹಿತ್ಯಕ್ಕೆ ಸಂಗೀತ ನೀಡಿದ್ದು ಹರಿಕೃಷ್ಣ. ಈಗ ಅದೇ ಜೋಡಿ ಮತ್ತೆ 'ಬಸಣ್ಣಿ' ಹಾಡಿನ ಮೂಲಕ ಬಂದಿದೆ.

ಟ್ರೆಂಡ್ ಆಗೋದು ಪಕ್ಕಾ

ಟ್ರೆಂಡ್ ಆಗೋದು ಪಕ್ಕಾ

ಸದ್ಯ, 'ಯಜಮಾನ' ಚಿತ್ರದ 'ಶಿವನಂದಿ' ಮತ್ತು 'ಓ ಮುಂಜಾನೆ' ಹಾಡುಗಳು ದೇಶದ ಮಟ್ಟದಲ್ಲಿ ಟ್ರೆಂಡ್ ಆಗಿವೆ. ಈಗ 'ಬಸಣ್ಣಿ' ಹಾಡಿನ ಮೇಲೆ ಡಿ ಬಾಸ್ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ. ಸದ್ಯದ ನಿರೀಕ್ಷೆ ನೋಡಿದ್ರೆ, ಬಹುಶಃ ಈ ಹಾಡು ಟ್ರೆಂಡ್ ಆಗುವ ಎಲ್ಲಾ ಸಾಧ್ಯತೆಗಳಿವೆ.

More from Filmibeat

English summary
Mass Number Basanni from challenging star darshan's yajamana will be out on 26th january at 11:00am. What is the meaning of basanni.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X