'ರಾಧೇ ಶ್ಯಾಮ್' ಚಿತ್ರಕ್ಕೆ 80 ಕೋಟಿ, 'ಸಲಾರ್' ಚಿತ್ರಕ್ಕೆ ಪ್ರಭಾಸ್ ಪಡೆದ ಸಂಭಾವನೆ ಎಷ್ಟು?

ತೆಲುಗು ನಟ ಪ್ರಭಾಸ್ ಕೈಯಲ್ಲಿ ನಾಲ್ಕು ಮೆಗಾ ಪ್ರಾಜೆಕ್ಟ್ ಇದೆ. ಅದರಲ್ಲಿ ಮೊದಲನೇ ಸಿನಿಮಾ 'ರಾಧೇ ಶ್ಯಾಮ್' ಬಿಡುಗಡೆಗೆ ಸಜ್ಜಾಗಿದೆ. ಪೂಜಾ ಹೆಗಡೆ ಮತ್ತು ಪ್ರಭಾಸ್ ನಟನೆಯ ಈ ಚಿತ್ರ ತೆಲುಗು, ಹಿಂದಿ, ತಮಿಳು ಹಾಗೂ ಕನ್ನಡದಲ್ಲಿ ತೆರೆಕಾಣುತ್ತಿದೆ.

ಈ ಚಿತ್ರವನ್ನು ಯುವಿ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದ್ದು, ಪ್ರಭಾಸ್‌ಗೆ ಭಾರಿ ದೊಡ್ಡ ಸಂಭಾವನೆ ನೀಡಲಾಗಿದೆಯಂತೆ. ಟಾಲಿವುಡ್ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ 75-80 ಕೋಟಿ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಬಂದ ಲಾಭದಲ್ಲಿ ಶೇಕಡಾ 10 ರಷ್ಟು ಷೇರು ನೀಡಬೇಕು ಎಂಬ ಒಪ್ಪಂದವೂ ಇದೆಯಂತೆ.

ರಾಮಾಯಣ ಆಧರಿತ ಆದಿಪುರುಷ್ ಹಾಗೂ ನಾಗ್ ಅಶ್ವಿನ್ ನಿರ್ದೇಶನ ಮಾಡುತ್ತಿರುವ ಚಿತ್ರಗಳಿಗೂ ದಾಖಲೆಯ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಈ ಮೂರು ಪ್ರಾಜೆಕ್ಟ್‌ನಿಂದ ಸುಮಾರು 300 ಕೋಟಿವರೆಗೂ ಪ್ರಭಾಸ್ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾತಿದೆ.

What is the Remuneration Of Prabhas for Salaar Movie?

ಇದೀಗ, ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ್ದಾರೆ. ಹೊಂಬಾಳೆ ಫಿಲಂಸ್ ಸಂಸ್ಥೆ (ಕೆಜಿಎಫ್ ನಿರ್ಮಾಪಕರ) ಈ ಚಿತ್ರ ನಿರ್ಮಿಸುತ್ತಿದ್ದಾರೆ. ಪ್ರಭಾಸ್ ಅವರಿಗೆ ಈ ಚಿತ್ರಕ್ಕಾಗಿ ಎಷ್ಟು ಸಂಭಾವನೆ ಕೊಟ್ಟಿರಬಹುದು ಎಂಬ ಕುತೂಹಲ ಗಾಂಧಿನಗರದ ಮಂದಿಯನ್ನು ಕಾಡುತ್ತಿದೆ.

ಈ ಹಿಂದಿನ ವರದಿಯಂತೆ ಪ್ರಭಾಸ್ ಸಂಭಾವನೆ 80 ರಿಂದ 100 ಕೋಟಿವರೆಗೂ ಇದೆ ಎನ್ನುವುದೇ ಸತ್ಯವಾದರೇ, ಸಲಾರ್ ಚಿತ್ರಕ್ಕಾಗಿ ಯಂಗ್ ರೆಬಲ್ ಪಡೆದ ಹಣ ಎಷ್ಟು ಎನ್ನುವುದನ್ನು ಊಹಿಸಬಹುದು. ಈ ಲೆಕ್ಕಾಚಾರ ಸ್ಯಾಂಡಲ್‌ವುಡ್ ಮಂದಿಯನ್ನು ಬೆರಗುಗೊಳಿಸಿದೆ.

ಇನ್ನುಳಿದಂತೆ ಜನವರಿ ತಿಂಗಳಿನಿಂದ ಸಲಾರ್ ಚಿತ್ರೀಕರಣ ಸಹ ಆರಂಭವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

More from Filmibeat

English summary
Hombale Films announces his next project with Tollywood star prabhas and prashanth neel. What is the Remuneration Of Prabhas for Salaar Movie?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X