ಸಂಜು ವೆಡ್ಸ್ ಗೀತಾ 2 ಚಿತ್ರಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಪಡೆದ ಸಂಭಾವನೆ ಎಷ್ಟು...?
ಧಾರಾವಾಹಿ ಪ್ರಪಂಚದಲ್ಲಿ ಸಣ್ಣಗೆ ಸದ್ದು ಮಾಡುತ್ತಲೇ ಏಕಾಏಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗುವ ಮೂಲಕ ಅಚ್ಚರಿಗೆ ಕಾರಣವಾಗಿದ್ದವರು ರಚಿತಾ ರಾಮ್. ಅಲ್ಲಿಂದಾಚೆ ಕಮರ್ಷಿಯಲ್ ಪಥದಲ್ಲಿಯೇ ಮುಂದುವರೆಯುತ್ತಾ ಬಂದ ರಚಿತಾ ರಾಮ್, ಚಿತ್ರರಂಗದಲ್ಲಿ ಒಂದು ದಶಕ ಪೂರೈಸಿದ್ದಾರೆ. ದರ್ಶನ್ ಸೇರಿ ಡಾ.ಪುನೀತ್ ರಾಜ್ ಕುಮಾರ್, ಡಾ.ಶಿವರಾಜ್ ಕುಮಾರ್, ಸುದೀಪ್, ಉಪೇಂದ್ರ, ಗಣೇಶ್, ದುನಿಯಾ ವಿಜಯ್ ಹೀಗೆ ಕನ್ನಡದ ಬಹುತೇಕ ತಾರೆಯರ ಜೊತೆ ತೆರೆ ಹಂಚಿಕೊಂಡಿದ್ದಾರೆ. ತಮ್ಮ ಈ ಹತ್ತು ವರ್ಷಗಳ ಪ್ರಯಾಣದಲ್ಲಿ ಹಲವು ಏರಿಳಿತವನ್ನು ಕೂಡ ಕಂಡಿದ್ದಾರೆ.
ಇಂಥಾ ರಚಿತಾ ರಾಮ್ ಸಂಜು ವೆಡ್ಸ್ ಗೀತಾ 2 ಚಿತ್ರಕ್ಕೆ 54 ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನುವ ಬ್ರೇಕಿಂಗ್ ನ್ಯೂಸ್ ಸದ್ಯ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಕೇಳಿ ಬರುತ್ತಿರುವ ಈ ಸುದ್ದಿ ನಿಜಾನಾ ಗೊತ್ತಿಲ್ಲ. ಆದರೆ .. 'ಕರ್ನಾಟಕ ಬಾಕ್ಸಾಫೀಸ್' ಟ್ವಿಟರ್ { ಎಕ್ಸ್ } ಖಾತೆಯಿಂದ ಹೀಗೆ ತೇಲಿಕೊಂಡು ಬಂದ ಈ ಸುದ್ದಿಯ ಕುರಿತು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.

ಇನ್ನೂ ಸಂಜು ವೆಡ್ಸ್ ಗೀತಾ-02 ಎಲ್ಲರಿಗೆ ಗೊತ್ತಿರುವಂತೆ 2011ರಲ್ಲಿ ಬಂದ ಸಂಜು ವೆಡ್ಡ್ ಗೀತಾ ಚಿತ್ರದ ಸಿಕ್ವೆಲ್. ಈ ಚಿತ್ರದ ಮೇಲೆ ಕನ್ನಡ ಚಿತ್ರರಂಗಕ್ಕೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ದಶಕದ ಹಿಂದೆ ಸೃಷ್ಟಿಯಾದ ಇತಿಹಾಸ ಈ ಬಾರಿ ಕೂಡ ಸೃಷ್ಟಿಯಾಗುತ್ತೆ ಎನ್ನುವ ಭರವಸೆ ಇದೆ. ರಮ್ಯಾ ಹೊರತು ಪಡಿಸಿ ಆ ತಂಡವೇ ಈ ಚಿತ್ರದ ಹಿಂದಿದೆ.
ಇನ್ನು ರಮ್ಯಾ ನಂತರ ಕನ್ನಡ ಚಿತ್ರರಂಗದಲ್ಲಿ ಯಾರಾದರೂ ಹೆಚ್ಚು ಸಂಭಾವನೆ ಪಡೆದಿದ್ದಾರೆ ಅಂದರೆ ಅದು ರಚಿತಾ ರಾಮ್ ಮಾತ್ರ ಎನ್ನುವ ಮಾತು ಈ ಹಿಂದೆಯಿಂದ ಇದೆ. ಹೀಗಾಗಿ ಹರಿದಾಡುತ್ತಿರುವ ಈ 54 ಲಕ್ಷ ಸಂಭಾವನೆಯ ಸುದ್ದಿ ನಿಜಾ ಇರಬಹುದೆಂದು ಅನೇಕ ಚಿತ್ರಪ್ರೇಮಿಗಳು ಈಗ ಅಂದುಕೊಂಡಿದ್ದಾರೆ. ಸಂಜು ವೆಡ್ಸ್ ಗೀತಾ 2 ಚಿತ್ರಕ್ಕೆ 54 ಲಕ್ಷ ಸಂಭಾವನೆ ಪಡೆದ ರಚಿತಾ ಅಯೋಗ್ಯ 2 ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆದಿರಬಹುದು ಎಂದು ತಮ್ಮಲ್ಲಿ ತಾವೇ ಪ್ರಶ್ನೆಯನ್ನು ಅನೇಕರು ಕೇಳಿಕೊಳ್ಳುತ್ತಿದ್ದಾರೆ.
ಅಂದ್ಹಾಗೇ ಈ ಹಿಂದೆ ರಚಿತಾ ರಾಮ್ ಒಂದು ವರ್ಷಕ್ಕಾಗುವಷ್ಟು ಬ್ಯುಸಿಯಾಗಿದ್ದಾಗ ಅಂದರೆ 2020ರ ಆಚೀಚೆ ಚಿತ್ರವೊಂದಕ್ಕೆ ಇವರು 30ರಿಂದ 35 ಲಕ್ಷ ರೂ.ಗಳವರೆಗೂ ಪಡೆಯುತ್ತಾರೆ ಎನ್ನುವ ಸುದ್ದಿ ಗಾಸಿಪ್ ಕಾಲನಿಯಲ್ಲಿ ಸದ್ದು ಮಾಡಿತ್ತು. ಆ ನಂತರ ರಚಿತಾ ರಾಮ್ ಸಂಭಾವನೆ ಇನ್ನು ದುಬಾರಿಯಾಗಿದೆ ಎಂಬ ಮಾತು ಕೇಳಿ ಬಂತು. 2020ರಲ್ಲಿ 30 ರಿಂ 35 ಲಕ್ಷ ಇದ್ದ ಸಂಭಾವನೆ 2024ರಲ್ಲಿ 60 ರಿಂದ 70 ಲಕ್ಷದವರೆಗೆ ತಲುಪಿದೆ ಎಂಬ ಸುದ್ದಿಯನ್ನು ಕೇಳಿ ಗಾಂಧಿನಗರ ಬೆಚ್ಚಿ ಬಿದ್ದಿತ್ತು. ಇದೀಗ ಇಷ್ಟು ದಿನಗಳವರೆಗೆ ಕೇಳಿ ಬರುತ್ತಿದ್ದ ಈ ಮಾತುಗಳಿಗೆ ಪೂರಕವಾಗಿ ರಚಿತಾ ರಾಮ್ ಸಂಜು ವೆಡ್ಸ್ ಗೀತಾ-02 ಚಿತ್ರಕ್ಕೆ 54 ಲಕ್ಷ ಪಡೆದಿದ್ದಾರೆ ಎನ್ನುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾಗಿದೆ.
ಇನ್ನುಳಿದಂತೆ ಸಂಜು ವೆಡ್ಸ್ ಗೀತಾ 2 ಚಿತ್ರ ಹೊರತು ಪಡಿಸಿದರೆ ರಚಿತಾ ರಾಮ್ BZ ಜಮೀರ್ ಅಹ್ಮದ್ ಖಾನ್ ಅವರ ಮಗ ಝೈದ್ ಖಾನ್ ಅಭಿನಯದ 'ಕಲ್ಟ್' ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರಕ್ಕೆ ರಚಿತಾ ರಾಮ್ ಒಂದು ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಹೀಗಾಗಿ ಬೆಂಗಳೂರಿನ ಕುಬೇರ ಮೂಲೆ ಎಂದೇ ಖ್ಯಾತಿ ಪಡೆದ ರಾಜರಾಜೇಶ್ವರಿ ನಗರದಲ್ಲಿ ರಚಿತಾ ರಾಮ್ ಇರುವ ಹಿನ್ನೆಲೆ ಇವರಿಗೆ ನಿಜಕ್ಕೂ ಕುಬೇರ ವರ ಪ್ರಾಪ್ತಿಯಾಗಿದೆ ಎನ್ನುವ ಅಭಿಪ್ರಾಯ ಕೂಡ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.


Click it and Unblock the Notifications











