For Quick Alerts
  ALLOW NOTIFICATIONS  
  For Daily Alerts

  ರಾಗಿಣಿಗೆ ಪಿನ್ ಇಟ್ಟ ಕನ್ನಡದ ಸ್ಟಾರ್ ನಟರ್ಯಾರು?

  By ಜೀವನರಸಿಕ
  |

  ಕನ್ನಡದ ಗ್ಲಾಮರ್ ಡಾಲ್ ಅನ್ನಿಸಿಕೊಂಡ ರಾಗಿಣಿ ದ್ವಿವೇದಿ ಈಗ ಕನ್ನಡದ ಸಿನಿಮಾಗಳಲ್ಲೇ ಕಾಣಿಸಿಕೊಳ್ತಿಲ್ಲ. ರಾಗಿಣಿಯ ಒಂದೇ ಒಂದು ಕನ್ನಡ ಸಿನಿಮಾ ರಿಲೀಸ್ ಗೆ ರೆಡಿಯಿದೆ. ರಾಗಿಣಿ ಈಗ ಬಾಲಿವುಡ್ ನಲ್ಲಿ ಬಿಜಿ. ಹಾಗಾದರೆ ರಾಗಿಣಿ ಇನ್ಮುಂದೆ ಕನ್ನಡದಲ್ಲಿ ನಟಿಸಲ್ವಾ? ಕನ್ನಡದ ಗ್ಲಾಮರ್ ಡಾಲ್ ಕನ್ನಡದಲ್ಲೇ ಕಾಣಿಸಲ್ವ ಅನ್ನೋ ಕುತೂಹಲ ಸಿನಿಪ್ರೇಮಿಗಳದ್ದು.

  ಜಿಂತಾತ ಚಿತಾ ಚಿತಾ ಅಂತ ಕನ್ನಡಕ್ಕೆ ಬಂದ ರಾಗಿಣಿ ರಾಣಿಯಂತೆ ಕನ್ನಡ ಚಿತ್ರರಂಗದಲ್ಲೆ ಬಹಳ ಬೇಗನೆ ಫೇಮಸ್ಸಾದರು. ಲಕ್ಷಾಂತರ ಅಭಿಮಾನಿಗಳನ್ನೂ ಗಳಿಸಿಕೊಂಡರು. ಆದರೆ ಈಗ ರಾಗಿಣಿ ಕೈಯ್ಯಲ್ಲಿ ಕನ್ನಡ ಸಿನಿಮಾಗಳಿಲ್ಲ. ಆದರೆ ಬಾಲಿವುಡ್, ಐಟಂ ಸಾಂಗ್ ಅಂತ ಬ್ಯುಸಿಯಾಗಿದ್ದಾರೆ ರಾಗಿಣಿ. [ರಾಗಿಣಿ ಟಾಪ್ ಕಳಚಿಬಿದ್ದ ಆ ಕ್ಷಣ]

  ತರ ತರ ಎನಿಸಿದೆ ಮನಸಿಗೆ ನೀನು ಅಂತ ಕನ್ನಡಿಗರ ಮನಸ್ಸಿಗೆ ಕಚಗುಳಿ ಇಡ್ತಾ ಸ್ಯಾಂಡಲ್ ವುಡ್ ನಲ್ಲಿ ಸೆಟ್ಲಾದ ಈ ಬ್ಯೂಟಿ ಕನ್ನಡದ ಸ್ಟಾರ್ ಗಳ ಜೊತೆ ಬಹಳ ಬೇಗನೆ ಮಿಂಚಿದ್ಳು. ಆದರೆ ಈಗ ರಾಗಿಣಿಗೆ ಕನ್ನಡದಲ್ಲೇ ಹಿತಶತ್ರುಗಳಿದ್ದಾರಂತೆ. ಆ ಹಿತಶತ್ರುಗಳು ಯಾರು ಅಂತ ಬಾಯಿಬಿಡ್ತಿಲ್ಲ ಈ ತುಪ್ಪದ ಬೆಡಗಿ. [ರಾಗಿಣಿ ತಮಿಳು, ತೆಲುಗಿಗೆ ರಫ್ತು]

  ಒಟ್ಟಾರೆ ರಾಗಿಣಿ ಕನ್ನಡದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಬಾಲಿವುಡ್ಡಲ್ಲಿ ಅವಕಾಶಗಳು ಬರ್ತಿವೆಯಂತೆ. ಆದರೆ ಕನ್ನಡದಲ್ಲಿ ಯಾರು ರಾಗಿಣಿಗೆ ಪಿನ್ ಇಟ್ರು ಅನ್ನೋದು ಗೊತ್ತಿಲ್ಲ. ಅದೂ ಕೂಡ ಯಾರೋ ದೊಡ್ಡ ಸ್ಟಾರೇ ರಾಗಿಣಿಗೆ ಅವಕಾಶ ತಪ್ಪಿಸ್ತಿದ್ದಾರಂತೆ. ಹೀಗೊಂದು ಗುಲ್ಲು ಗಾಂಧಿನಗರದಲ್ಲಿದೆ. ಹಾಗಾದ್ರೆ ಯಾರಪ್ಪ ಆ ಪುಣ್ಯಾತ್ಮ? ನಿಮಗೇನಾದ್ರೂ ಗೊತ್ತಾ? ಯಾರ ಮೇಲಾದ್ರೂ ಡೌಟ್ ಇದೆಯಾ? ಗೊತ್ತಿದ್ರೆ ನಮ್ ಜೊತೆ ವಸಿ ಹಂಚಿಕೊಳ್ಳಿ ಸ್ವಾಮೀ! [ತುಪ್ಪದ ಬೆಡಗಿಯ ಬೆಣ್ಣೆಯಂಥ ಚಿತ್ರಗಳು]

  English summary
  Kannada actress Ragini Dwivedi now busy in bollywood movies. But, the actress chuck away from Sandalwood. Why, what happened, who hinders the actress in Kannada film industry?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X