For Quick Alerts
  ALLOW NOTIFICATIONS  
  For Daily Alerts

  ಚೆಲುವೆ ಕತ್ರೀನಾ ಕೈಫ್‌ಳ ಹೊಸ ಬಾಯ್‌ಫ್ರೆಂಡ್ ಯಾರೆಂದು ಗೊತ್ತೆ?

  By ಫಿಲ್ಮೀಡೆಸ್ಕ್
  |

  ಭಾರತ ಮೂಲದ ಇಂಗ್ಲೆಂಡ್ ಚೆಲುವೆ ಕತ್ರೀನಾ ಕೈಫ್ ಬಾಲಿವುಡ್‌ಗೆ ಕಾಲಿಟ್ಟು 17 ವರ್ಷವಾಯಿತು. ಕತ್ರೀನಾ ಕೈಫ್ ಗೆ ನಟನೆ ಬಾರದು ಎಂದೇ ಬಾಲಿವುಡ್‌ನ ಸಿನಿ ವಿಮರ್ಶಕರ ವಾದ. ಅದೂ ಇಂದಿಗೂ ಚಾಲ್ತಿಯಲ್ಲಿದೆ.

  ಆದರೆ ಕತ್ರೀನಾ ತನ್ನ ಬಿಳಿ ತೊಗಲು ಹಾಗೂ ಗ್ಲಾಮರಸ್ ಆಗಿ ಬಳುಕುವ ದೇಹದೊಂದಿಗೆ ಈಗಲೂ ಬಾಲಿವುಡ್‌ನಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಈಗಲೂ ಅವರ ಕೈಯಲ್ಲಿ ಐದು ಬಿಗ್‌ಬಜೆಟ್ ಸಿನಿಮಾಗಳಿವೆ.

  ಈ ಕತ್ರಿನಾ ಕೈಫ್, ಸಿನಿಮಾಗಳಲ್ಲಿ ನಟನೆ ಮೂಲಕ ಚರ್ಚೆಯಲ್ಲಿರುವುದಕ್ಕೆ ಹೆಚ್ಚಾಗಿ, ತೆರೆಯ ಆಚೆ, ತಮ್ಮ ಸಂಬಂಧಗಳಿಂದಾಗಿ ಆಗಾಗ್ಗೆ ಸುದ್ದಿಗೆ ಬರುತ್ತಲೇ ಇದ್ದರು. ಬಾಲಿವುಡ್‌ನ ಸ್ಟಾರ್ ನಟರುಗಳೊಂದಿಗೆ ಸುತ್ತಾಡಿದ್ದ ಕತ್ರೀನಾ ಈಗ ಮತ್ತೊಬ್ಬ ಯುವ ನಟನ ಜೊತೆ ಕಾಣಿಸಿಕೊಂಡಿದ್ದಾರೆ. ಯಾರು ಆ ನಟ?

  ಸಲ್ಮಾನ್ ಖಾನ್ ಜೊತೆಗೆ ಕೇಳಿಬಂದಿತ್ತು ಹೆಸರು

  ಸಲ್ಮಾನ್ ಖಾನ್ ಜೊತೆಗೆ ಕೇಳಿಬಂದಿತ್ತು ಹೆಸರು

  ನಟಿ ಕತ್ರೀನಾ ಕೈಫ್ ಹೆಸರು ಮೊದಲಿಗೆ ಕೇಳಿಬಂದಿದ್ದು ನಟ ಸಲ್ಮಾನ್ ಖಾನ್ ಜೊತೆಗೆ. ಇಬ್ಬರೂ ಹಲವು ವರ್ಷ ಜೊತೆಯಾಗಿದ್ದರು. ಇಬ್ಬರೂ ಮದುವೆ ಸಹ ಆಗುತ್ತಾರೆ ಎನ್ನಲಾಗಿತ್ತು. ಆದರೆ ಅದೇನಾಯ್ತೊ ಏನೋ ಭಾಯ್ ಹಾಗೂ ಕತ್ರೀನಾ ಸಂಬಂಧ ಹಠಾತ್ತನೆ ಮುರಿದು ಬಿತ್ತು. ಆದರೆ ಇಬ್ಬರ ಗೆಳೆತನ ಹಾಗೆಯೇ ಮುಂದುವರೆದಿದೆಯಂತೆ.

  ರಣಬೀರ್-ಕತ್ರೀನಾರ ಫ್ರಾನ್ಸ್‌ ಚಿತ್ರ ವೈರಲ್ ಆಗಿತ್ತು

  ರಣಬೀರ್-ಕತ್ರೀನಾರ ಫ್ರಾನ್ಸ್‌ ಚಿತ್ರ ವೈರಲ್ ಆಗಿತ್ತು

  ನಂತರ ಕತ್ರೀನಾ ಕೈಫ್ ಕಾಣಿಸಿಕೊಂಡಿದ್ದು ರಣಬೀರ್ ಕಪೂರ್ ಜೊತೆಗೆ. ಇಬ್ಬರೂ ಫ್ರಾನ್ಸ್‌ನ ಎಲ್‌ಬಿಜಾ ದಲ್ಲಿ ಸಮುದ್ರ ತೀರದಲ್ಲಿ ಫೊಟೊಕ್ಕೆ ಸೆರೆ ಸಿಕ್ಕಿದ್ದರು. ಇಬ್ಬರ ಬಗ್ಗೆ ಪ್ರತಿದಿನ ಗಾಸಿಪ್‌ಗಳು ಹರಿದಾಡಿದ್ದವು. ಕತ್ರೀನಾ ಕಾರಣಕ್ಕೆ ರಣಬೀರ್-ಸಲ್ಮಾನ್‌ಗೆ ಜಗಳವೂ ಆಗಿತ್ತು. ಕತ್ರೀನಾ ಜೊತೆಗೆ ಬ್ರೇಕ್ ಅಪ್ ಮಾಡಿಕೊಂಡ ರಣಬೀರ್, ಕತ್ರೀನಾ ಗೆಳತಿ ಆಲಿಯಾ ಜೊತೆಗೆ ಸುತ್ತಾಡುತ್ತಿದ್ದಾರೆ.

  ವಿಕ್ಕಿ ಕೌಶಲ್ ಜೊತೆ ಕತ್ರೀನಾ ಕೈಫ್

  ವಿಕ್ಕಿ ಕೌಶಲ್ ಜೊತೆ ಕತ್ರೀನಾ ಕೈಫ್

  ರಣಬೀರ್ ಕಪೂರ್ ಬ್ರೇಕ್‌ಅಪ್ ನಂತರ ಒಂಟಿಯಾಗಿದ್ದ ಕತ್ರೀನಾ ಈಗ ಹೊಸ ಹೀರೊ ವಿಕ್ಕಿ ಕೌಶಲ್ ಸಖ್ಯದಲ್ಲಿದ್ದಾರೆ. ಈ ಪ್ರೀತಿಗೆ ಇನ್ನೂ ಒಂದು ವರ್ಷ ಆಯುವೂ ಆಗಿಲ್ಲ. ಇಬ್ಬರೂ ಸಹ ಪರಸ್ಪರ ಕಂಪನಿಯನ್ನು ಎಂಜಾಯ್ ಮಾಡುತ್ತಿದ್ದಾರೆ.

  ಪ್ರತಿಭೆಯಿಂದ ಗಮನ ಸೆಳೆಯುತ್ತಿರುವ ವಿಕ್ಕಿ ಕೌಶಲ್

  ಪ್ರತಿಭೆಯಿಂದ ಗಮನ ಸೆಳೆಯುತ್ತಿರುವ ವಿಕ್ಕಿ ಕೌಶಲ್

  ಯುವ ನಟ ವಿಕ್ಕಿ ಕೌಶಲ್ ತನ್ನ ಪ್ರತಿಭೆಯಿಂದ ಬಾಲಿವುಡ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಆಕ್ಷನ್ ಡೈರೆಕ್ಟರ್ ಮಗ ಇಂದು ಬಾಲಿವುಡ್‌ನಲ್ಲಿ ಹೀರೋ ಪಟ್ಟ ಅಲಂಕರಿಸಿದ್ದಾರೆ. ಪಂಜಾಬಿ ಕುಟುಂಬದ ವಿಕ್ಕಿ ಕೌಶಲ್, ತನಗಿಂತ ಆರು ವರ್ಷ ಹಿರಿಯ ಕತ್ರೀಕಾ ಕೈಫ್ ಜೊತೆ ಪ್ರೀತಿಗೆ ಬಿದ್ದಿದ್ದಾರೆ.

  English summary
  Katrina Kaif is seen many times with actor Vicky Kaushal. Both were seems to be in love.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X