For Quick Alerts
  ALLOW NOTIFICATIONS  
  For Daily Alerts

  ಹೃತಿಕ್ ರೋಷನ್ ಪತ್ನಿಯ ಹೊಸ ಬಾಯ್‌ಫ್ರೆಂಡ್: ಏನಿದು ಕತೆ?

  |

  ಬಾಲಿವುಡ್‌ನ ಖಾನ್‌ಗಳ ಸಮಕ್ಕೆ ಕೇಳಿ ಬರುವ ಮತ್ತೊಬ್ಬ ಸ್ಟಾರ್ ಹೆಸರು ಅಕ್ಷಯ್ ಕುಮಾರ್. ಅವರ ನಂತರದ ದೊಡ್ಡ ಸ್ಟಾರ್ ಹೃತಿಕ್ ರೋಷನ್.

  21 ವರ್ಷದಿಂದಲೂ ನಾಯಕ ನಟನಾಗಿ ನಟಿಸುತ್ತಿರುವ ಹೃತಿಕ್ ರೋಷನ್ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ 41 ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ಹಲವು ಸೂಪರ್-ಡೂಪರ್ ಹಿಟ್ ಸಿನಿಮಾಗಳನ್ನು ಹೃತಿಕ್ ನೀಡಿದ್ದಾರೆ. ಸಿನಿಮಾಗಳಲ್ಲಿ ದೊಡ್ಡ ಯಶಸ್ಸನ್ನೇ ಗಳಿಸಿರುವ ಹೃತಿಕ್ ರೋಷನ್ ಖಾಸಗಿ ಜೀವನದಲ್ಲಿ ಮಾತ್ರ ಯಶಸ್ವಿಯಾಗಲಿಲ್ಲ.

  ಚಿತ್ರರಂಗಕ್ಕೆ ನಾಯಕ ನಟನಾಗಿ ಕಾಲಿಟ್ಟ ವರ್ಷವೇ ಹೃತಿಕ್ ರೋಷನ್, ಸೂಸೆನ್ ಖಾನ್ ಅವರನ್ನು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ವಿವಾಹವಾದರು. ಅವರ ವಿವಾಹಕ್ಕೆ ಬಾಲಿವುಡ್‌ನ ಸ್ಟಾರ್ ನಟ-ನಟಿಯರೆಲ್ಲ ಹಾಜರಿ ಹಾಕಿದ್ದರು. ಆರಂಭದ ಹಲವು ವರ್ಷ ಇಬ್ಬರ ದಾಂಪತ್ಯ ಚೆನ್ನಾಗಿಯೇ ಇತ್ತು. ಆದರೆ ವಿವಾಹವಾದ ಹದಿಮೂರು ವರ್ಷಗಳ ಬಳಿಕ ಇಬ್ಬರೂ ಬೇರೆಯಾದರು. ಈಗ ಹೃತಿಕ್‌ರ ಮಾಜಿ ಪತ್ನಿ ಸುಸೇನ್ ಖಾನ್ ಹೊಸ ಬಾಯ್‌ಫ್ರೆಂಡ್ ತೋಳತೆಕ್ಕೆಯಲ್ಲಿದ್ದಾರೆ.

  ಹೊಸ ಬಾಯ್‌ಫ್ರೆಂಡ್ ಜೊತೆ ಸುಸೇನ್ ಖಾನ್

  ಹೊಸ ಬಾಯ್‌ಫ್ರೆಂಡ್ ಜೊತೆ ಸುಸೇನ್ ಖಾನ್

  43 ವರ್ಷ ವಯಸ್ಸಿನ ಸುಸೇನ್ ಖಾನ್, ಅರ್ಸಲನ್ ಗೋನಿ ಎಂಬಾತನೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ ಗಲ್ಲಿಗಳಲ್ಲಿ ಜೋರಾಗಿಯೇ ಹರಿದಾಡುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಹಲವು ಕಾರ್ಯಕ್ರಮಗಳಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಇಬ್ಬರೂ ಗೋವಾ ಟ್ರಿಪ್ ಸಹ ಹೋಗಿ ಬಂದಿದ್ದಾರೆ. ಎರಡು ದಿನದ ಹಿಂದಷ್ಟೆ ನಡೆದ ಬಾಲಿವುಡ್ ಸೆಲೆಬ್ರಿಟಿ ಅನುಷ್ಕಾ ರಂಜನ್‌ರ ಮದುವೆಯಲ್ಲಿಯೂ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮುಂಬೈ ಪೊಲೀಸರು ಡ್ರಾಗನ್ ಕ್ಲಬ್ ರೈಡ್ ಮಾಡಿದಾಗ ಕ್ಲಬ್‌ನಲ್ಲಿ ಸುಸೇನ್ ಖಾನ್ ಇದ್ದರು. ಅವರೊಟ್ಟಿಗೆ ಅರ್ಸಲನ್ ಗೋನಿ ಸಹ ಇದ್ದರು ಎನ್ನಲಾಗಿತ್ತು.

  ಅರ್ಸಲನ್ ಗೋನಿ ಯಾರು?

  ಅರ್ಸಲನ್ ಗೋನಿ ಯಾರು?

  ಅರ್ಸಲನ್ ಗೋನಿ, ಜನಪ್ರಿಯ ಟಿವಿ ನಟ ಅಲಿ ಗೋನಿಯ ಸಹೋದರ ಹಾಗೂ ಸ್ವತಃ ನಟ ಸಹ ಹೌದು. ಅರ್ಸಲನ್ ಗೋನಿ ನಟಿಸಿರುವ 'ಮೇ ಹಿರೋ ಬೋಲ್‌ ರಹಾ ಹು' ವೆಬ್ ಸರಣಿ ಜೀ5 ನಲ್ಲಿ ಪ್ರಸಾರವಾಗುತ್ತಿದೆ. ಆಲ್ಟ್ ಬಾಲಾಜಿಯ ಕೆಲವು ವೆಬ್ ಸರಣಿಯನ್ನೂ ಗೋನಿ ನಟಿಸಿದ್ದಾರೆ. ಒಟಿಟಿ ಮಾತ್ರಕ್ಕಷ್ಟೆ ನಟನೆಯನ್ನು ಸೀಮಿತಗೊಳಿಸಿಕೊಂಡಿದ್ದಾರೆ ಈ ನಟ.

  ಶಾರುಖ್ ಪತ್ನಿಯೊಂದಿಗೆ ಪಾಲುದಾರಿಕೆ

  ಶಾರುಖ್ ಪತ್ನಿಯೊಂದಿಗೆ ಪಾಲುದಾರಿಕೆ

  ಹೃತಿಕ್‌ ರೋಷನ್‌ರಿಂದ ದೂರಾಗುವ ಎರಡು ವರ್ಷ ಮುಂಚೆಯೇ ಸುನೇನ್ ಖಾನ್, ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಜೊತೆ ಪಾಲುದಾರಿಕೆಯಲ್ಲಿ ಒಳಾಂಗಣ ವಿನ್ಯಾಸದ ಉದ್ಯಮ ಪ್ರಾರಂಭಿಸಿದ್ದಾರೆ. ಅಮೆರಿಕದ ಬ್ರೂಕ್ಸ್ ಕಾಲೇಜ್‌ನಲ್ಲಿ ಒಳಾಂಗಣ ವಿನ್ಯಾಸದ ಪದವಿ ಪಡೆದಿರುವ ಸುಸೇನ್ ಖಾನ್ ಭಾರತದ ತಾರಾ ಒಳಾಂಗಣ ವಿನ್ಯಾಸಕಿಯರಲ್ಲಿ ಒಬ್ಬರು. ಶಾರುಖ್ ಹಾಗೂ ಹೃತಿಕ್ ಕುಟುಂಬಕ್ಕೂ ಬಹಳ ಒಳ್ಳೆಯ ಸಂಬಂಧ ಇದೆ. ಕೆಲವು ದಿನಗಳ ಹಿಂದೆ ಆರ್ಯನ್ ಖಾನ್ ಬಂಧನವಾಗಿದ್ದಾಗ, ಹೃತಿಕ್ ರೋಷನ್ ಬಹಿರಂಗವಾಗಿ ಆರ್ಯನ್ ಖಾನ್‌ಗೆ ಬೆಂಬಲ ಸಹ ಸೂಚಿಸಿದ್ದರು.

  ಕಂಗನಾ ಜೊತೆಗೆ ಸಂಬಂಧದಲ್ಲಿದ್ದ ಹೃತಿಕ್

  ಕಂಗನಾ ಜೊತೆಗೆ ಸಂಬಂಧದಲ್ಲಿದ್ದ ಹೃತಿಕ್

  ಹೃತಿಕ್ ರೋಷನ್ ಹಾಗೂ ಸುಸೇನ್ ಖಾನ್ ವಿಚ್ಛೇಧನ ಪಡೆದಿದ್ದಾರಾದರೂ ಇಬ್ಬರು ಒಳ್ಳೆಯ ಸ್ನೇಹಿತರಂತೆ ಇದ್ದಾರೆ. ಕಳೆದ ಲಾಕ್‌ಡೌನ್ ಅವಧಿಯನ್ನು ಇಬ್ಬರೂ ಒಟ್ಟಿಗೆ ತಮ್ಮ ಇಬ್ಬರು ಮಕ್ಕಳೊಂದಿಗೆ ಕಳೆದಿದ್ದಾರೆ. 2000 ನೇ ಇಸವಿಯಲ್ಲಿ ಮದುವೆಯಾದ ಈ ಜೋಡಿ 2013 ರಲ್ಲಿ ಬೇರಾಗಿ 2014 ರಲ್ಲಿ ವಿಚ್ಛೇಧನ ಪಡೆದುಕೊಂಡಿತು. ಇಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ. ವಿಚ್ಛೇಧನದ ಬಳಿಕ ಹೃತಿಕ್ ರೋಷನ್, ಕಂಗನಾ ರನೌತ್‌ ಜೊತೆ ಕೆಲ ಕಾಲ ಡೇಟಿಂಗ್ ನಡೆಸಿದರು. ಆದರೆ ಕಂಗನಾ ಆ ಬಳಿಕ ಹೃತಿಕ್ ಜೊತೆ ಜಗಳವಾಡಿ ಆ ಜಗಳ ಕೋರ್ಟ್ ಮೆಟ್ಟಿಲು ಸಹ ಏರಿತು. ತಾವು ಹೃತಿಕ್‌ಗೆ ತಮ್ಮ ನಗ್ನ ಚಿತ್ರಗಳನ್ನು ಕಳಿಸಿದ್ದಾಗಿಯೂ ಕಂಗನಾ ಮಾಧ್ಯಮಗಳ ಮುಂದೆ ಹೇಳಿದ್ದರು.

  English summary
  Who is Arslan Goni? rumored boyfriend of Hritik Roshan's wife Sussane Khan. Both were scene together in many bollywood parties.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X