»   » ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ನಟ ಯಾರು?

ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ನಟ ಯಾರು?

By: ಜೀವನರಸಿಕ
Subscribe to Filmibeat Kannada

ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಯಾರು ಅಂದ್ರೆ ನಮಗೆ ತಕ್ಷಣ ನೆನಪಾಗೋದು ಕಿಚ್ಚ ಸುದೀಪ್, ಪವರ್ಸ್ಟಾರ್, ಚಾಲೆಂಜಿಂಗ್ಸ್ಟಾರ್ ಆದ್ರೆ ಇವ್ರೆಲ್ಲರಿಗಿಂತ ಹೆಚ್ಚು ಸಂಭಾವನೆ ಪಡೆಯೋ ನಟ ಒಬ್ಬರಿದ್ದಾರೆ. ಹೌದಾ ಅಂತ ಶಾಕ್ ಆಗ್ಬೇಡಿ.. ಹೌದು..

ಯಾರು ಅದು ಸದ್ಯಕ್ಕೆ ಈ ಮೂವರನ್ನ ಬಿಟ್ರೆ ಇನ್ಯಾರಿದ್ದಾರೆ. ರಿಯಲ್ಸ್ಟಾರ್ ಉಪ್ಪೀನಾ.. ಏ.. ಅಷ್ಟೊಂದು ಇರೋಕೆ ಸಾಧ್ಯ ಇಲ್ಲ. ಶಿವಣ್ಣ.. ನೋ ಶಿವಣ್ಣ ಹಾಗೆಲ್ಲಾ ಕೇಳೋ ವ್ಯಕ್ತೀನೇ ಅಲ್ಲ ಬಿಡಿ. ರವಿಮಾಮನಾ.. ಅವರಿಗೆ ಅಷ್ಟೊಂದು ಡಿಮಾಂಡ್ ಇಲ್ಲ.. ಇನ್ನು ಗಣೇಶನಾ... ಛೆ ತಮಾಷೆ ಮಾಡಬೇಡಿ! [ಚಿಕ್ಕಣ್ಣನ ದಿನದ ಸಂಭಾವನೆ ಎಷ್ಟು?]

Who is the highest paid actor in Sandalwood?

ಸದ್ಯ ಸ್ಯಾಂಡಲ್ವುಡ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ನಟ ಅಂದ್ರೆ ಅದು ರವಿಶಂಕರ್. ವಿಲನ್ ಪಾತ್ರದ ಜೊತೆಗೆ ಕಾಮಿಡಿ ಶೇಡ್ಗೂ ಹೊಂದಿಕೊಳ್ಳೋ ರವಿಶಂಕರ್ ಒಂದು ದಿನಕ್ಕೆ ಕೇಳೋ ಸಂಭಾವನೆ 5 ಲಕ್ಷ.. ಹಾಗೂ ಹೀಗೂ ಮಾಡಿ ನೀವು ಒಪ್ಪಿಸ್ತೀರಾ ಅಂದ್ರೆ 3 ಲಕ್ಷಕ್ಕೆ ಇಳೀಬಹುದು.

ಸದ್ಯ ಕೈಯ್ಯಲ್ಲಿ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮುಖ್ಯ ಪಾತ್ರ ಮಾಡ್ತಿರೋ ರವಿಶಂಕರ್ಗೆ ತೆಲುಗು ತಮಿಳಲ್ಲೂ ಬೇಡಿಕೆ ಇದೆ. ಸೋ ರವಿಶಂಕರ್ ನಿಮ್ಮ ಸಿನಿಮಾದಲ್ಲಿ ಬೇಕು ಅಂದ್ರೆ ನೀವು ಕೋಟಿ ಕೊಡೋಕೆ ರೆಡಿಯಾಗಿರ್ಬೇಕು.. [ದರ್ಶನ್ ಸಂಭಾವನೆ 8 ಕೋಟಿ ಅನ್ನೋದು ನಿಜಾನಾ?]

English summary
Who is the highest paid actor in Sandalwood? Kichcha Sudeep, Challenging star Darshan, Crazy Star Ravichandran, Hattrick hero Shiva Rajkumar, Power star Puneeth Rajkumar, Golden Star Ganesh? No, none of these. He is none other than Ravishankar!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada