For Quick Alerts
  ALLOW NOTIFICATIONS  
  For Daily Alerts

  ನಾಗಚೈತನ್ಯ-ಸಮಂತಾಳ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿದ ಅವನು ಯಾರು?

  By ರವೀಂದ್ರ ಕೊಟಕಿ
  |

  ಅಕ್ಕಿನೇನಿ ನಾಗಚೈತನ್ಯ ಮತ್ತು ಸಮಂತಾ ತಮ್ಮ ಮೂರು ವರ್ಷದ ದಾಂಪತ್ಯಕ್ಕೆ ವಿದಾಯ ಹೇಳಿದ್ದಾರೆ. ಇಬ್ಬರೂ ತಾವಿಬ್ಬರೂ ಬೇರೆಯಾಗುತ್ತಿರುವ ವಿಷಯವನ್ನು ಸಾಮಾಜಿಕ ಮಾಧ್ಯಮವನ್ನು ವೇದಿಕೆಯಾಗಿಸಿಕೊಂಡು ತಮ್ಮ ವಿಚ್ಛೇದನವನ್ನು ಬಹಿರಂಗಪಡಿಸಿದ್ದಾರೆ.

  ಈಗ, ಈ ವಿಚ್ಛೇದನದ ನಂತರ ಅವರು ತಮ್ಮ ಮುಂದಿನ ವೈಯಕ್ತಿಕ ಜೀವನದ ಬಗ್ಗೆ ಏನು ನಿರ್ಣಯ

  ತೆಗೆದುಕೊಳ್ಳಬಹುದು ಅಂತ ಕುತೂಹಲದಿಂದ ಇಬ್ಬರ ಅಭಿಮಾನಿಗಳು ಅವರಿಗೆ ತೋಚಿದಂತೆ ಅವರು ಮಾತನಾಡಿಕೊಳ್ಳುತ್ತಿದ್ದಾರೆ.

  ಚೇತು-ಸ್ಯಾಮ್ ವಿಚ್ಛೇದನಕ್ಕೆ ಕಾರಣವಾದ ಅಂಶಗಳಾದರೂ ಏನು? ಈ ಬಗ್ಗೆ ಅವರಿಬ್ಬರು ಎಲ್ಲಿಯೂ ಯಾವುದೇ ತರದ ಹೇಳಿಕೆಯನ್ನುನೀಡಿಲ್ಲ. ಆದಾಗ್ಯೂ,ಅವರ ಪ್ರತ್ಯೇಕತೆಗೆ ಸಂಭವನೀಯ ಕಾರಣಗಳ ಬಗ್ಗೆ ಅನೇಕರು ತಮ್ಮದೇ ಆದ ರೀತಿಯಲ್ಲಿ ಮಾತನಾಡುತ್ತಿದ್ದಾರೆ.

  ಸಮಂತಾಳ ಜೀವನದಲ್ಲಿ ಅವನು!

  ಸಮಂತಾಳ ಜೀವನದಲ್ಲಿ ಅವನು!

  ಸಮಂತಾ 'ದ ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿಯಲ್ಲಿ ಬೋಲ್ಡ್ ಆಗಿ ನಟಿಸಿದ್ದು ಚೇತು ಅಸಮಾಧಾನಕ್ಕೆ ಕಾರಣವಾಗಿತಂತೆ. ಇದೇ ವಿಚಾರವಾಗಿ ಇಬ್ಬರ ಮಧ್ಯೆ ವಾಗ್ವಾದವಾಗಿ ಒಂದಷ್ಟು ಸಮಯ ಇಬ್ಬರೂ ಪರಸ್ಪರ ದೂರವಿದ್ದರಂತೆ. ಹೀಗೆ ಅವರಿಬ್ಬರ ಮಧ್ಯೆ ಉಂಟಾದ ಭಿನ್ನಾಭಿಪ್ರಾಯದ ಬೆಂಕಿಗೆ ತುಪ್ಪ ಸುರಿದವನೇ, ಇಂದಿನ ಈ ವಿಚ್ಛೇದನಕ್ಕೆ ಮೂಲಕಾರಣ ಅಂತ ಅಕ್ಕಿನೇನಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

  ಇಷ್ಟಕ್ಕೂ ಅವನು ಯಾರು?

  ಇಷ್ಟಕ್ಕೂ ಅವನು ಯಾರು?

  ಇವರಿಬ್ಬರ ಸಂಬಂಧದಲ್ಲಿ ಬೆಂಕಿಯಲ್ಲಿ ತುಪ್ಪ ಸುರಿದ ಅವರ ವಿಚ್ಛೇದನಕ್ಕೆ ಕಾರಣವಾದ ವನೆಂದು ಭಾವಿಸಲಾಗಿರುವ ಅವನು ಬೇರೆ ಯಾರು ಅಲ್ಲ, ಸಮಂತಾಳ ಪರ್ಸನಲ್ ಡಿಸೈನರ್ ಪ್ರೀತಂ ಜುಕಲ್ಕರ್. ಹಲವು ವರ್ಷಗಳಿಂದ ಸಮಂತಾರ ಉಡುಪುಗಳನ್ನು ಪ್ರೀತಂ ಜುಕಲ್ಕರ್ ಡಿಸೈನ್ ಮಾಡುತ್ತಿದ್ದಾರೆ. ಪ್ರೀತಂ ಜನಪ್ರಿಯ ಫ್ಯಾಷನ್ ಡಿಸೈನರ್, ಸ್ಟೈಲಿಷ್ ಆಗಿದ್ದಾರೆ. ಸಮಂತಾಗೆ ಮಾತ್ರವೇ ಅಲ್ಲದೆ ಇನ್ನೂ ಹಲವು ನಟಿಯರಿಗೆ, ಕ್ರೀಡಾ ಪಟುಗಳಿಗೆ ವಿಶೇಷ ಸಮಾರಂಭಗಳಿಗಾಗಿ ಸ್ಟೈಲ್ ಮಾಡಿದ್ದಾರೆ.

  ಎಲ್ಲದಕ್ಕೂ ಕಾರಣ ಆ ಒಂದು ಫೋಟೋ!

  ಎಲ್ಲದಕ್ಕೂ ಕಾರಣ ಆ ಒಂದು ಫೋಟೋ!

  'ದಿ ಫ್ಯಾಮಿಲಿ ಮ್ಯಾನ್ ಪಾರ್ಟ್- 2' ಚಿತ್ರದಲ್ಲಿ ಸಮಂತಾ ಬೋಲ್ಡಾಗಿ ನಟಿಸಿದ್ದು ಇವರಿಬ್ಬರ ಮನಸ್ತಾಪಕ್ಕೆ ಕಾರಣವಾದ ಅಂಶ ಅಲ್ಲವೇ ಅಲ್ಲ. ಬದಲಾಗಿ, ಸಮಂತಾ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಪರ್ಸನಲ್ ಡಿಸೈನರ್ ಪ್ರೀತಂ ಜುಕಲ್ಕರ್ ಜನ್ಮದಿನದಂದು ತನ್ನ ಕಾಲುಗಳನ್ನು ಅವನ ಮೇಲೆ ಹಾಕಿ ಸೋಫಾ ಮೇಲೆ ಮಲಗಿದಂತಿರುವ ಫೋಟೋವನ್ನು ಹಂಚಿಕೊಂಡಿದ್ದರು. ಇದು ಆ ಸಮಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಭಿಮಾನಿಗಳು ಅವಳನ್ನು ಅಪಾರವಾಗಿ ಟ್ರೋಲ್ ಮಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ಅಕ್ಕಿನೇನಿ ಕುಟುಂಬದಲ್ಲೂ ಈ ಫೋಟೋ ಬಗ್ಗೆ ಭಾರಿ ಅಸಮಾಧಾನ ಉಂಟುಮಾಡಿತ್ತು ಎನ್ನಲಾಗಿದೆ.ಇಲ್ಲಿಂದಲೇ ಅವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿದ್ದು ಅದು ಕೊನೆಗೆ 'ದ ಫ್ಯಾಮಿಲಿ ಮ್ಯಾನ್ ಪಾರ್ಟ್-2' ಹೊತ್ತಿಗೆ ದೊಡ್ಡಮಟ್ಟದಲ್ಲಿ ಸ್ಪೋಟಗೊಂಡಿದ್ದು ಅಂತ ಟಾಲಿವುಡ್ ಗಲ್ಲಿಗಳಲ್ಲಿ ಕೇಳಿಬರುತ್ತಿರುವ ಮಾತುಗಳು.

  ಪ್ರೀತಂ ವಿರುದ್ಧ ಮುಗಿದು ಬಿದ್ದಿರುವ ನೆಟ್ಟಿಗರು

  ಪ್ರೀತಂ ವಿರುದ್ಧ ಮುಗಿದು ಬಿದ್ದಿರುವ ನೆಟ್ಟಿಗರು

  ಈಗ, ನೆಟ್ಟಿಗರು ನಾಗಚೈತನ್ಯ ಮತ್ತು ಸಮಂತಾ ಅವರ ವಿಭಜನೆಗೆ ಅದೇ ಕಾರಣ ಎಂದು ಪ್ರೀತಂ ಅವರನ್ನು ನಿಂದಿಸುತ್ತಿದ್ದಾರೆ. ಇದರ ಜೊತೆಯಲ್ಲಿ, ವಿಚ್ಛೇದನ ಘೋಷಣೆಯ ನಂತರ ಪ್ರೀತಮ್ ಮಾಡಿದ ಪೋಸ್ಟ್ ಗಳು ಕೂಡ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ತನ್ನ ಇನ್ಸ್ಟಾಗ್ರಾಮ್ ನಲ್ಲಿ

  'ನೀವು ಎಷ್ಟೇ ಜಾಗರೂಕರಾಗಿರಲಿ, ಸುಳ್ಳುಗಳು ಮತ್ತು ರಹಸ್ಯಗಳು ಉಸಿರುಗಟ್ಟಿಸುತ್ತವೆ. ಸಮಾಜದಲ್ಲಿ ಪ್ರಸಿದ್ಧವಾಗಿರುವ ಜನರು ಈಗ ಟ್ರೋಲಿಂಗ್ ರೂಪದಲ್ಲಿ ಮಾನಸಿಕ ಕಿರುಕುಳಕ್ಕೆ ಒಳಗಾಗುವ ಸಾಧ್ಯತೆಯಿದೆ' ಎಂದು ಜುಕಲ್ಕರ್ ಪೋಸ್ಟ್ ಮಾಡಿದ್ದು ಅಲ್ಲದೆ ಅದನ್ನು ಕೆಲವೇ ನಿಮಿಷಗಳಲ್ಲಿ ಅಳಿಸಿ ಹಾಕಿದ್ದಾನೆ. ಈ ಹಿನ್ನೆಲೆಯಲ್ಲಿ, ಇನ್ಸ್ಟಾಗ್ರಾಮ್ ಅನ್ನು ವೇದಿಕೆಯನ್ನಾಗಿ ಮಾಡಿಕೊಂಡು ಟ್ರೋಲ್ ಮಾಡಲಾಗುತ್ತಿದೆ. ಪ್ರೀತಂ ಕೆಲವರಿಗೆ ತೀಕ್ಷ್ಣವಾಗಿ ಉತ್ತರಿಸಿದರು. ಆದರೂ ಟ್ರೋಲಿಂಗ್ ಎಲ್ಲಿಯೂ ನಿಲ್ಲುತ್ತಿಲ್ಲ ಇದರಿಂದ ವಿಚಲಿತಗೊಂಡ. ಪ್ರೀತಂ ಕಾಮೆಂಟ್ ವಿಭಾಗವನ್ನು ನಿಷ್ಕ್ರಿಯಗೊಳಿಸಿದ್ದಾರೆ.

  English summary
  Who is the reason behind Samantha and Naga Chaithanya's divorce. Some people saying stylist Preetham is the reason for the divorce.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X