ಅನುಪಮಾ, ರಚಿತಾ, ಆಶಿಕಾ : ಯಾರ ಮೇಲೆ ಶ್ರೀಮುರಳಿ ಒಲವು?

ನಟ ಶ್ರೀಮುರಳಿ ಈಗ 'ಭರಾಟೆ' ಹಾಗೂ 'ಮದಗಜ' ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. 'ಭರಾಟೆ' ಸಿನಿಮಾದ ಹಾಡಿಗೆ ಇತ್ತೀಚಿಗಷ್ಟೆ ಇಬ್ಬರು ನಾಯಕಿಯರ ಜೊತೆಗೆ ಶ್ರೀಮುರಳಿ ಕುಣಿದಿದ್ದಾರೆ. ಆದರೆ, ಇತ್ತ ಅವರ 'ಮದಗಜ' ಸಿನಿಮಾದ ನಾಯಕಿ ಯಾರು ಎಂಬುದು ಇನ್ನು ಪ್ರಶ್ನೆಯಾಗಿಯೇ ಉಳಿದಿದೆ.

'ಅಯೋಗ್ಯ' ಚಿತ್ರದ ನಿರ್ದೇಶಕ ಮಹೇಶ್ ಗೌಡ 'ಮದಗಜ' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಉಮಾಪತಿ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ಸ್ಕ್ರಿಪ್ಟ್ ಯುಗಾದಿ ಹಬ್ಬದ ಶುಭದಿನ ನಡೆದಿದೆ.

ಮತ್ತೊಂದು ಕಡೆ 'ಮದಗಜ' ಸಿನಿಮಾದ ನಾಯಕಿಯ ಆಯ್ಕೆ ಸದ್ಯ ನಡೆಯುತ್ತಿದೆ. ಅನುಪಮ ಪರಮೇಶ್ವರನ್, ರಚಿತಾ ರಾಮ್, ಆಶಿಕಾ ರಂಗನಾಥ್ ಈ ಮೂರು ನಾಯಕಿಯರ ಪೈಕಿ ಯಾರು ಓಕೆ ಆಗುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ. ಮುಂದೆ ಓದಿ...

'ಮದಗಜ'ನಿಗೆ ಅನುಪಮ ಜೋಡಿ?

'ಮದಗಜ'ನಿಗೆ ಅನುಪಮ ಜೋಡಿ?

ಮಲೆಯಾಳಂ ನಟಿ ಅನುಪಮ ಪರಮೇಶ್ವರನ್ 'ನಟ ಸಾರ್ವಭೌಮ' ಸಿನಿಮಾದ ಮೂಲಕ ಕನ್ನಡಕ್ಕೆ ಬಂದಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಅವರ ಪಾತ್ರ ದೊಡ್ಡ ಮೆಚ್ಚುಗೆ ಪಡೆದಿದೆ. ಪುನೀತ್ ರಾಜ್ ಕುಮಾರ್ ನಂತರ ಅನುಪಮ ಪರಮೇಶ್ವರನ್ ನಟ ಶ್ರೀ ಮುರಳಿಗೆ ಜೋಡಿಯಾಗುತ್ತಾರ ಎನ್ನುವ ಕುತೂಹಲ ಇದೆ.

ಮತ್ತೆ ಒಂದಾಗುತ್ತಾ 'ರಥಾವರ' ಜೋಡಿ

ಮತ್ತೆ ಒಂದಾಗುತ್ತಾ 'ರಥಾವರ' ಜೋಡಿ

'ರಥಾವರ' ಸಿನಿಮಾದಲ್ಲಿ ಶ್ರೀಮುರಳಿ ಹಾಗೂ ರಚಿತಾ ರಾಮ್ ಒಟ್ಟಿಗೆ ನಟಿಸಿದ್ದರು. ಇತ್ತೀಚಿಗಷ್ಟೆ 'ಭರಾಟೆ' ಸಿನಿಮಾದ ಹಾಡಿಗೂ ಈ ಜೋಡಿ ಒಟ್ಟಿಗೆ ಡ್ಯಾನ್ಸ್ ಮಾಡಿದ್ದರು. ಇದರ ಬಳಿಕ ಇದೀಗ 'ಮದಗಜ' ಸಿನಿಮಾಗೆ ಸಹ ರಚಿತಾ ಹೀರೋಯಿನ್ ಆಗುತ್ತಾರೆ ಎನ್ನುವ ಸುದ್ದಿ ಇದೆ. ನಿರ್ದೇಶಕ ಮಹೇಶ್ ಗೌಡ 'ಅಯೋಗ್ಯ' ಸಿನಿಮಾದಲ್ಲಿ ರಚಿತಾ ಜೊತೆ ಕೆಲಸ ಮಾಡಿದ್ದರು.

ಶ್ರೀಮುರಳಿ ಜೊತೆಗೆ ಆಶಿಕಾ ರಂಗನಾಥ್

ಶ್ರೀಮುರಳಿ ಜೊತೆಗೆ ಆಶಿಕಾ ರಂಗನಾಥ್

ಸದ್ಯ ಸ್ಯಾಂಡಲ್ ವುಡ್ ಮಂದಿಯ ಫೇವರೇಟ್ ಆಗಿರುವ ಆಶಿಕಾ ರಂಗನಾಥ್ ಗೆ ಅವಕಾಶಗಳ ಮೇಲೆ ಅವಕಾಶಗಳು ಬರುತ್ತಿದೆ. ಈಗ ಶ್ರೀಮುರಳಿ ನಟನೆಯ 'ಮದಗಜ' ಸಿನಿಮಾಗೂ ಚುಟು ಚುಟು ಹುಡುಗಿ ಆಶಿಕಾ ಆಯ್ಕೆ ಆಗಬಹುದು.

ಜೂನ್ ತಿಂಗಳಿನಲ್ಲಿ ಶೂಟಿಂಗ್ ಶುರು

ಜೂನ್ ತಿಂಗಳಿನಲ್ಲಿ ಶೂಟಿಂಗ್ ಶುರು

'ಮದಗಜ' ಸಿನಿಮಾಗೆ ಶೂಟಿಂಗ್ ಜೂನ್ ತಿಂಗಳಿನಲ್ಲಿ ಶುರು ಆಗುತ್ತಿದೆ. ಆ ವೇಳೆಗೆ ಈ ಮೂವರಲ್ಲಿ ಯಾರು ಫಿಕ್ಸ್ ಆಗುತ್ತಾರೆ ಎನ್ನುವ ವಿಷಯ ಬಹಿರಂಗ ಆಗಲಿದೆ. ಸಿನಿಮಾದ ಕಥೆ, ಚಿತ್ರಕಥೆ, ಡೈಲಾಗ್ ಎಲ್ಲ ಸಿದ್ಧವಾಗಿದ್ದು ಸ್ಕ್ರಿಪ್ಟ್ ಪೂಜೆ ಸಹ ಮುಗಿದಿದೆ.

More from Filmibeat

English summary
Anupama Parameswaran, Rachitha Ram, Ashika Ranganath who will be the heroine for actor Sri Murali's 'Madhagaja' kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X