ಪವರ್ ಸ್ಟಾರ್ ಪುನೀತ್ ಅಭಿನಯದ 25ನೇ ಚಿತ್ರ ಯಾವುದು?

By Harshitha

ಅಣ್ಣಾವ್ರ ಮುದ್ದಿನ ಮಗ ಪುನೀತ್ ರಾಜ್ ಕುಮಾರ್ ಆರು ತಿಂಗಳ ಪುಟ್ಟ ಮಗು ಆಗಿದ್ದಾಗಲೇ 'ಪ್ರೇಮದ ಕಾಣಿಕೆ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಬಾಲನಟನಾಗಿ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ 'ಮಾಸ್ಟರ್ ಲೋಹಿತ್', ಪುನೀತ್ ರಾಜ್ ಕುಮಾರ್ ಆಗಿದ್ದು 'ಅಪ್ಪು' ಚಿತ್ರದ ಮೂಲಕ.

2002 ರಿಂದ ಗಾಂಧಿನಗರದಲ್ಲಿ ಸೋಲಿಲ್ಲದ ಸರದಾರನಾಗಿರುವ ಪುನೀತ್ ರಾಜ್ ಕುಮಾರ್ ಈಗ ಸಿಲ್ವರ್ ಜ್ಯುಬಿಲಿ ಸಂಭ್ರಮದಲ್ಲಿದ್ದಾರೆ. ಅರ್ಥಾತ್ ಅವರ 25ನೇ ಸಿನಿಮಾ ಸೆಟ್ಟೇರುವುದಕ್ಕೆ ತಯಾರಿ ನಡೆಯುತ್ತಿದೆ.

Who will direct Puneeth Rajkumar's 25th movie?

ಪವನ್ ಒಡೆಯರ್ ನಿರ್ದೇಶನದ 'ರಣವಿಕ್ರಮ' ಪುನೀತ್ ರಾಜ್ ಕುಮಾರ್ ಅಭಿನಯದ 23ನೇ ಸಿನಿಮಾ. ಏಪ್ರಿಲ್ 10 ರಂದು ತೆರೆಮೇಲೆ 'ರಣವಿಕ್ರಮ'ನ ಪರಾಕ್ರಮ ಶುರುವಾಗಲಿದೆ. ಈಗಾಗಲೇ ದುನಿಯಾ ಸೂರಿ ನಿರ್ದೇಶನದಲ್ಲಿ 'ದೊಡ್ಮನೆ ಹುಡುಗ' ಚಿತ್ರಕ್ಕೆ ಪುನೀತ್ ಚಾಲನೆ ಕೊಟ್ಟಿದ್ದಾರೆ. ಅಲ್ಲಿಗೆ, ಅಪ್ಪು ಕೆರಿಯರ್ ನ 24ನೇ ಸಿನಿಮಾ 'ದೊಡ್ಮನೆ ಹುಡುಗ'. [ರಾಮಾಚಾರಿ ಡೈರೆಕ್ಟರ್ ಪುನೀತ್ ಗೆ ಆಕ್ಷನ್ ಕಟ್]

ಹಾಗಾದ್ರೆ, ಪುನೀತ್ ರಾಜ್ ಕುಮಾರ್ ಅಭಿನಯದ 25ನೇ ಚಿತ್ರ ಯಾವುದು? 'ಪವರ್ ಹೌಸ್'ನಲ್ಲಿರುವ ಎಲ್ಲಾ ಅಭಿಮಾನಿಗಳಿಗೂ ಕಾಡುತ್ತಿರುವ ಪ್ರಶ್ನೆ ಇದು. 'ಉಗ್ರಂ' ಖ್ಯಾತಿಯ ಪ್ರಶಾಂತ್ ನೀಲ್ ಜೊತೆ 'ಆಹ್ವಾನ', ಕಾಲಿವುಡ್ ನ ಶರವಣನ್ ನಿರ್ದೇಶನದಲ್ಲಿ 'ಪ್ರೊಡಕ್ಷನ್ ನಂ.1', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಡೈರೆಕ್ಟರ್ ಸಂತೋಷ್ ಅನಂದರಾಮ್ ರೊಂದಿಗೆ 'ಪ್ರೊಡಕ್ಷನ್ ನಂ.3' ಮತ್ತು 'ಬಹದ್ದೂರ್' ನಿರ್ದೇಶಕ ಚೇತನ್ ಜೊತೆ 'ಜೇಮ್ಸ್' ಚಿತ್ರಕ್ಕೆ ಅಪ್ಪು ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದ್ದಾರೆ. ['ಅಣ್ಣಾಬಾಂಡ್' ಪುನೀತ್ ಜೇಮ್ಸ್ ಫಸ್ಟ್ ಲುಕ್ ಔಟ್]

Who will direct Puneeth Rajkumar's 25th movie?

ಕೈಲಿ ಇಷ್ಟೆಲ್ಲಾ ಪ್ರಾಜೆಕ್ಟ್ ಗಳಿದ್ದರೂ, ತಮ್ಮ ಸಿಲ್ವರ್ ಜ್ಯುಬಿಲಿ ಸಿನಿಮಾವನ್ನ ಅಪ್ಪು ಫೈನಲೈಸ್ ಮಾಡಿಲ್ಲ. 'ಆಹ್ವಾನ' ಸಿನಿಮಾ ಸೆಟ್ಟೇರಬೇಕು ಅಂದ್ರೆ, ಅದಕ್ಕೂ ಮೊದಲು ಪ್ರಶಾಂತ್ ನೀಲ್ ನಿರ್ದೇಶನದ 'ಕೆ.ಜಿ.ಎಫ್' ಮುಗಿಯಬೇಕು. ಅಸಲಿಗೆ 'ಕೆ.ಜಿ.ಎಫ್' ಸೆಟ್ಟೇರುವುದು ಯಶ್ ಅಭಿನಯದ 'ಮಾಸ್ಟರ್ ಪೀಸ್' ರಿಲೀಸ್ ಆದ್ಮೇಲೆ. ಇದೆಲ್ಲಾ ಆಗುವುದಕ್ಕೆ ಮಿನಿಮಂ ಒಂದು ವರ್ಷ ಬೇಕು.

ಆದ್ರೆ, ಶರವಣನ್, ಸಂತೋಷ್ ಅನಂದರಾಮ್ ಮತ್ತು ಚೇತನ್ ತಮ್ಮ ತಮ್ಮ ಚಿತ್ರಗಳ ಸ್ಕ್ರಿಪ್ಟಿಂಗ್ ಕೆಲಸದಲ್ಲಿ ತೊಡಗಿದ್ದಾರೆ. ಅಪ್ಪು ಹುಟ್ಟುಹಬ್ಬಕ್ಕೆ ನಿರ್ದೇಶಕ ಶರವಣನ್, ಇನ್ನೂ ಹೆಸರಿಡದ ತಮ್ಮ 'ಪ್ರೊಡಕ್ಷನ್ ನಂ.1' ಸಿನಿಮಾ ಏಪ್ರಿಲ್ ನಲ್ಲಿ ಸೆಟ್ಟೇರಲಿದೆ ಅಂತ ಅನೌನ್ಸ್ ಮಾಡಿದ್ರು. [ಪುನೀತ್ ಹೊಸ ಚಿತ್ರ ಏಪ್ರಿಲ್ ನಿಂದ ಶುರು..!]

Who will direct Puneeth Rajkumar's 25th movie?

ಸದ್ಯಕ್ಕೆ ಅಪ್ಪು 'ದೊಡ್ಮನೆ ಹುಡುಗ' ಚಿತ್ರದ ಶೂಟಿಂಗ್ ನಲ್ಲಿ ತೊಡಗಿದ್ದಾರೆ. ಒಂದು ಸಿನಿಮಾ ಕಂಪ್ಲೀಟ್ ಆಗುವವರೆಗೂ ಮತ್ತೊಂದು ಚಿತ್ರಕ್ಕೆ ಪುನೀತ್ ಕೈಹಾಕಲ್ಲ. ಅಲ್ಲಿಗೆ, ತಮ್ಮ 25ನೇ ಚಿತ್ರವನ್ನ ಕಾಲಿವುಡ್ ನಿರ್ದೇಶಕರಿಗೆ ಕೊಡುತ್ತಾರೋ, ಇಲ್ಲಾ ಕನ್ನಡದ ಯುವ ನಿರ್ದೇಶಕರಿಂದ ಆಕ್ಷನ್ ಕಟ್ ಹೇಳಿಸಿಕೊಳ್ಳುತ್ತಾರೋ, ಕಾದು ನೋಡಬೇಕು. (ಫಿಲ್ಮಿಬೀಟ್ ಕನ್ನಡ)

More from Filmibeat

English summary
Kannada Actor Puneeth Rajkumar's 24th movie 'Dodmane Huduga' is already on the floors. Now Power Star Fans are eagerly waiting to know the Actor's 25th Movie. Will Kollywood director Saravanan direct Appu's silver jubilee movie? is the question as of now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X