»   » ಬ್ಯೂಟಿ ನೇಹಾ ಪಾಟೀಲ್ ಯಾಕ್ ಹಂಗ್ ಇರ್ತಾರೆ?

ಬ್ಯೂಟಿ ನೇಹಾ ಪಾಟೀಲ್ ಯಾಕ್ ಹಂಗ್ ಇರ್ತಾರೆ?

By: ಜೀವನರಸಿಕ
Subscribe to Filmibeat Kannada

ನೀವು ಕೀ ಕೊಡೋ ರೊಬೋಟ್ ಗಳನ್ನ ನೋಡಿರ್ತೀರಾ. ಅವು ಕಣ್ಣನ್ನ ಕೂಡ ಎಡಬಲಕ್ಕೆ ಕೀಲಿಸೋದಿಲ್ಲ. ಹಾಗೇ ಇರೋ ನಟಿಯೊಬ್ಬರು ಕನ್ನಡದಲ್ಲಿದ್ದಾರೆ. ಆ ನಟಿ ಮತ್ಯಾರೂ ಅಲ್ಲ ಸೈಲೆಂಟ್ ಬ್ಯೂಟಿ ನೇಹಾ ಪಾಟೀಲ್. ನೇಹಾ ಪಾಟೀಲ್ ಯಾವುದಾದ್ರೂ ಪ್ರೆಸ್ ಮೀಟ್ ಗೆ ಬಂದ್ರೆ ಲವಲವಿಕೆಯಿಂದ ಓಡಾಡೋದೇ ಇಲ್ಲವಂತೆ.

ನೇಹಾ ಪಾಟೀಲ್ ಒಂದಷ್ಟು ಎಡವಟ್ಟು ಮಾಡಿಕೊಂಡು ಕಾಂಟ್ರವರ್ಸಿಗಳಿಂದ ಸುದ್ದಿ ಮಾಡಿದ್ದ ನಟಿ. ಕಾಂಟ್ರವರ್ಸಿ ಮಾಡಿಕೊಂಡಮೇಲೆ ಕಳೆದ ವರ್ಷ ಪತ್ರಕರ್ತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡು ವಿವಾದಗಳನ್ನ ಸ್ವಲ್ಪ ತಣ್ಣಗೆ ಮಾಡಿದ್ರು. [ಈ ಸ್ಯಾಂಡಲ್ ವುಡ್ ಜೋಡಿಹಕ್ಕಿಗಳು ಲವ್ ಮಾಡ್ತವ್ರಾ?]


ಅದು ನನ್ನಿಂದ ಆದ ವಿವಾದವಲ್ಲ ಅಂತ ಸಮರ್ಥಿಸಿಕೊಂಡು ಒಂದಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಅದೆಲ್ಲ ಓಕೆ ಆಗಿದ್ದು ಆಗಿ ಹೋಯ್ತು. ಈಗಲಾದ್ರೂ ಎಲ್ಲರ ಜೊತೆಗೂ ಸರಿಯಾಗಿ ಬೆರೆತು ಇರಬಹುದಲ್ಲ.

ಇಲ್ಲೀವರೆಗೂ ಸಿಂಪಲ್ ಚೆಲುವೆಯಾಗಿ ಕಾಣಿಸಿಕೊಳ್ತಿದ್ದ ನೇಹಾ ಪಾಟೀಲ್ ಇತ್ತೀಚೆಗೆ ಹಾಟ್ ಹಾಟ್ ಆಗದಿದ್ರೆ ಪ್ರಯೋಜನ ಇಲ್ಲ ಅಂದುಕೊಂಡು ಗ್ಲಾಮರಸ್ ಡ್ರೆಸ್ ಗಳಲ್ಲೂ ಮಿಂಚ್ತಿದ್ದಾರೆ. ಸದ್ಯ ಶಂಬೋ ಮಹದೇವ, ಪಾರು ವೈಫ್ ಆಫ್ ದೇವದಾಸ್, ಅಯ್ಯ-2 ಸೇರಿದಂತೆ ಒಂದು ತಮಿಳು ಸಿನಿಮಾದಲ್ಲೂ ಬಿಜಿಯಾಗಿದ್ದಾರೆ.

ನೇಹಾ ಪಾಟೀಲ್ ಗೆ ಏನಾದ್ರೂ ಮಾತ್ನಾಡಿದ್ರೆ ಕಾಂಟ್ರವರ್ಸಿ ಆಗುತ್ತೆ ಅನ್ನೋ ಭಯ ಅನ್ನಿಸುತ್ತೆ. ಇನ್ಮುಂದೆ ಭಯ ಬಿಟ್ಟು ಬಿಂದಾಸಾದ್ರೆ ಸೂಪರ್ ಡ್ರೆಸ್ಸಲ್ಲಿ ಮಾತ್ರ ಓಪನ್ ಆದ್ರೆ ಸಾಕ? ಮಾತಲ್ಲಿ ಕೂಡ ಓಪನ್ ಆಗ್ಬೇಕಲ್ವಾ. ಲವಲವಿಕೆಯಿಂದ ಇರ್ಬೇಕಲ್ವ ಅಂತಿದ್ದಾರೆ ಗಾಂಧಿನಗರದ ಸಿನಿಪಂಡಿತರು.

English summary
In recent days Kannada beauty Neha Patil looks like robot why, what happened? Earlier the 'Olavina Ole' heorine 'Neha Patil' lashes out against director Venkatesh at shooting spot. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada