twitter
    For Quick Alerts
    ALLOW NOTIFICATIONS  
    For Daily Alerts

    ಡಬ್ಬಿಂಗ್ ಬೇಡ ಅನ್ನೋರಿಗೆ ಪ್ರಶ್ನೆ-ಪರಿಹಾರಗಳು

    By ಗಿರೀಶ್, ಕಾರ್ಗದ್ದೆ
    |

    ಜಗತ್ತಿನಾದ್ಯಂತ ಡಬ್ಬಿಂಗ್ -ಅನ್ನು ಒಂದು ಭಾಷೆಯಲ್ಲಿರುವ ಜಗತ್ತಿನ ಅತ್ಯುತ್ತಮವಾದ ಜ್ಞಾನ, ಮನರಂಜನೆಯನ್ನು ಇನ್ನೊಂದು ಭಾಷೆಗೆ ತರುವ ಸಾಧನವನ್ನಾಗಿ ನೋಡುತ್ತಾರೆ. ಆದರೆ, ಕರ್ನಾಟಕದಲ್ಲಿ ಮಾತ್ರ ಇದು ಮಾರಕ ಹೇಗಾಗುತ್ತದೆ.

    ಕರ್ನಾಟಕದಲ್ಲಿನ ಡಬ್ಬಿಂಗ್ ಮೇಲಿನ ನಿಷೇಧದಿಂದಾಗಿ ಜ್ಞಾನ ವಾಹಿನಿಗಳಾದ ಡಿಸ್ಕವರಿ, ನ್ಯಾಟ್-ಜಿಯೊ, ಅನಿಮಲ್ ಪ್ಲಾನೆಟ್ ಗಳಾಗಲೀ, ಮಕ್ಕಳ ಅಚ್ಚುಮೆಚ್ಚಿನ ಡಿಸ್ನಿ, ಕಾರ್ಟೂನ್ ನೆಟ್ವರ್ಕ್, ಪೋಗೊ ಮುಂತಾದ ವಾಹಿನಿಗಳಾಗಲೀ, ಇಲ್ಲವೇ ಜಗತ್ತಿನ ಅತ್ಯುತ್ತಮ ಮನರಂಜನೆಯ ಚಿತ್ರಗಳನ್ನಾಗಲೀ ಕನ್ನಡಿಗರು ಕನ್ನಡದಲ್ಲಿ ನೋಡಿ ಸವಿಯಲಾಗದಂತಹ ಪರಿಸ್ಥಿತಿ ಹುಟ್ಟಿದೆ.

    ಇಲ್ಲಿ ಮುಖ್ಯವಾಗಿ ಪ್ರೇಕ್ಷಕನ ಆಯಾಮವೇ ಕಾಣೆಯಾಗಿರುವುದು ಕಂಡು ಬರುತ್ತಿದೆ. ಪ್ರೇಕ್ಷಕನ ಅಭಿಪ್ರಾಯ ಏನು ಎಂಬುದರ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಂತ್ತಿಲ್ಲ. ನಾನು ಒಬ್ಬ ಕನ್ನಡ ಪ್ರೇಕ್ಷಕನಾಗಿ ಕೆಲವು ಅಂಶಗಳನ್ನು ಈ ಬರಹದಲ್ಲಿ ವ್ಯಕ್ತಪಡಿಸಿದ್ದೀನಿ.

    ಡಬ್ಬಿಂಗ್ ಅನ್ನುವುದು ಕನ್ನಡ ಪರವೇ ಹೊರತು ವಿರೋಧಿಯಲ್ಲ, ಇದು ಸಾಮಾನ್ಯ ಜನರ ನ್ಯಾಯಯುತ ಬೇಡಿಕೆಯಾಗಿದೆ. ಕನ್ನಡದ ಹೋರಾಟಕ್ಕೆ ದನಿಗೂಡಿಸಿ ಈ ಪಿಟಿಶನ್ ಗೆ ಸಹಿ ಮಾಡಿ

    ಕನ್ನಡ ಇಂಡಸ್ಟ್ರಿಗೆ ಡಬ್ಬಿಂಗ್ ಭೂತ ಕಾಡ್ತಿರೋದರ ವಿರುದ್ಧ ಇದೇ ಜನವರಿ 27ಕ್ಕೆ ಚಿತ್ರರಂಗದ ಮಂದಿ ಎಲ್ಲರೂ ಪ್ರತಿಭಟನೆಗೆ ಇಳಿಯೋಕೆ ಡೆಡ್ ಲೈನ್ ಫಿಕ್ಸ್ ಮಾಡ್ಕೊಂಡಿದ್ದಾರೆ. ಚಿತ್ರರಂಗದ ದೊಡ್ಡ ಸ್ಟಾರ್ ಗಳು ಈ ಪ್ರತಿಭಟನೆಯಲ್ಲಿ ಇರ್ತಾರಾ? ಮುಂಚೂಣಿಯಲ್ಲಿ ನಿಂತು ಬಲ ತುಂಬ್ತಾರಾ ಅನ್ನೋ ಅನುಮಾನ ಇದೆ [ವಿವರ ಇಲ್ಲಿ ಓದಿ]

    'ಡಬ್ಬಿಂಗ್ ಬಂದರೆ ನಮ್ಮ ಕನ್ನಡ ಸಂಸ್ಕೃತಿ ಹಾಳಾಗುತ್ತೆ

    'ಡಬ್ಬಿಂಗ್ ಬಂದರೆ ನಮ್ಮ ಕನ್ನಡ ಸಂಸ್ಕೃತಿ ಹಾಳಾಗುತ್ತೆ

    ಸಿನೆಮಾದಲ್ಲಿ ಬರೋದೆಲ್ಲ ಕನ್ನಡ ಸಂಸ್ಕೃತಿ ಅಂತ ಕನ್ನಡ ಪ್ರೇಕ್ಷಕ ಅಂದುಕೊಳ್ಳುತ್ತಾನೆ ಅಂದರೆ ಅದು ಕನ್ನಡ ಪ್ರೇಕ್ಷಕನನ್ನು ಅವಮಾನಿಸಿದಂತೆ.ಕನ್ನಡ ಚಿತ್ರದ ಅಭಿಮಾನಿಗಳು ರೀಲ್ ಲೈಫ್ ಮತ್ತು ರಿಯಲ್ ಲೈಫ್ ನಡುವಿನ ವ್ಯತ್ಯಾಸ ಅರಿಯದಷ್ಟು ದಡ್ಡರಲ್ಲ. ಅಷ್ಟಕ್ಕೂ ಕನ್ನಡ ಚಿತ್ರದಲ್ಲಿ ಬರೋದೆಲ್ಲ ಕನ್ನಡ ಸಂಸ್ಕೃತಿನಾ? ಕನ್ನಡದಲ್ಲಿ ಮಚ್ಚು ಲಾಂಗು, ರತಿ ಚಿತ್ರಗಳು ಸಹ ಬರುತ್ತವೆ ಹಾಗಂತ ಅಲ್ಲಿ ಬರೋದೆಲ್ಲ ಕನ್ನಡ ಸಂಸ್ಕೃತಿನ ಬಿಂಬಿಸುತ್ತೆ ಅನ್ನೋಕ್ಕಾಗುತ್ತಾ? ಹಾಗಂತ ರತಿ ಚಿತ್ರಗಳು ಮಾಡೋದು ತಪ್ಪು ಸರಿ ಅನ್ನೋ ವಿಮರ್ಶೆಗೆ ನಾನು ಹೊರಟಿಲ್ಲ, ಅಂತಹ ಚಿತ್ರಗಳನ್ನು ನೋಡುವ ಪ್ರೇಕ್ಷಕರು ಸಹ ಇದ್ದಾರೆ ಹಾಗಾಗಿ ಅಂತಹ ಚಿತ್ರಗಳು ತಯಾರಾಗುತ್ತವೆ ಅಷ್ಟೇ. ರಿಮೇಕ್ ಹೆಸರಲ್ಲಿ ಫ್ರೇಮ್ ಟು ಫ್ರೇಮ್ ಭಟ್ಟಿ ಇಳಿಸುವಾಗ ಆಗದ ಕನ್ನಡ ಸಂಸ್ಕೃತಿ ನಾಶ ಒರಿಜಿನಲ್ ಆದ ಚಿತ್ರವೇ ಕನ್ನಡ ಮಾತಿನೊಂದಿಗೆ ಬಂದಾಗ ಆಗುತ್ತೆ ಅನ್ನೋ ವಾದ ನಾವು ಒಪ್ಪಬೇಕಾ?

    ಕನ್ನಡದ ಸೃಜನಶೀಲತೆ ಹಾಳಾಗುತ್ತೆ

    ಕನ್ನಡದ ಸೃಜನಶೀಲತೆ ಹಾಳಾಗುತ್ತೆ

    ಇಂದಿನ ರಿಮೇಕ್ ಯುಗದಲ್ಲೂ ಸಹ ಗಿರೀಶ್ ಕಾಸರವಳ್ಳಿ ಅಂತಹ ನಿರ್ದೇಶಕರಿದ್ದಾರೆ. ಪುಟ್ಟಣ್ಣ ಕಣಗಾಲ್ ರಂತಹ ಮೇರು ನಿರ್ದೇಶಕರನ್ನು ನಮ್ಮ ಚಿತ್ರರಂಗ ಕಂಡಿದೆ. ಶಂಕರನಾಗ್ ಎಂಬ ಮಿನುಗುತಾರೆ ಹುಟ್ಟಿದ್ದು ನಮ್ಮಲ್ಲೇ. ಅಷ್ಟಕ್ಕೂ ಡಬ್ಬಿಂಗ್ ಅವಕಾಶ ಇರುವು ತಮಿಳು ತೆಲುಗು ಚಿತ್ರರಂಗದ ಸೃಜನಶೀಲತೆ ಯಾಕೆ ನಶಿಸಿಲ್ಲ? ರಿಮೇಕ್ ಮಾಡುವ ಅವಕಾಶ ಕಡಿಮೆ ಆದಾಗ ಮಾತ್ರ ಸ್ವಂತವಾಗಿ ಯೋಚಿಸುವ, ಸೃಷ್ಟಿಸುವ ಮನಸ್ಸು ಬರೋದು. ಸ್ಪರ್ದೆ ಇದ್ದಾಗಲೇ ಗುಣಮಟ್ಟ ಸುದಾರಿಸೋದು. ಬೇಕೋ ಬೇಡವೋ ಜಾಗತೀಕರಣ ನಮ್ಮ ಎಲ್ಲ ರಂಗಕ್ಕೂ ಕಾಲಿಟ್ಟಿದೆ. ಬರಗಾಲವೋ ಮಳೆಗಾಲವೋ ಈ ನಾಡಿನ ಬಡ ರೈತ ಸಹ ಜಗತ್ತಿನ ಉತ್ಪಾದನೆ ಜೊತೆ ಸ್ಪರ್ದೆ ಮಾಡಬೇಕಿದೆ, ಅವನು ಮಾಡುತ್ತಿದ್ದಾನೆ. ಬಡ ರೈತನಿಗೆ ಇಲ್ಲದ ಸವಲತ್ತು ಕನ್ನಡ ಚಿತ್ರರಂಗಕ್ಕೆ ಬೇಕಾ?

    ಕನ್ನಡದ ಕಲಾವಿದರು ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಾರೆ

    ಕನ್ನಡದ ಕಲಾವಿದರು ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಾರೆ

    ಇದೆ ಒಂದು ಅಂಶ ಸಾಕು ಈ ಚಿತ್ರರಂಗದವರ ದ್ವಂದ್ವ ನೀತಿ ಹಾಗು ಸ್ವಾರ್ಥವನ್ನು ನಿರೂಪಿಸಲಿಕ್ಕೆ. ಕಾರ್ಮಿಕರ ಬಗ್ಗೆ ಮಾತಾಡೋ ನೀವು ನಿಮ್ಮ ಚಿತ್ರಗಳನ್ನು ಬೇರೆ ಭಾಷೆ ಡಬ್ ಮಾಡೋದು ಯಾಕೆ? ಅಲ್ಲಿಯ ಕಾರ್ಮಿಕರ ಹೊಟ್ಟೆ ಮೇಲೆ ಹೊಡಿಯೋ ಕೆಲಸ ಯಾಕೆ ಮಾಡ್ತೀರ? ಕನ್ನಡದ ಕಲಾವಿದರು ಕೆಲಸ ಕಳೆದುಕೊಳ್ಳುತಾರೆ ಅನ್ನೋದಾದ್ರೆ - ಒಂದು ಕನ್ನಡ ಚಿತ್ರ ತಗೊಳ್ಳಿ, ನಾಯಕಿ - ಪರ ಭಾಷಿಕಳು, ವಿಲ್ಲನ್ - ಪರ ಭಾಷೆ, ಗಾಯನ - ಪರಭಾಷೆ. ಈ ಅವಕಾಶ ಬೇರೆ ಭಾಷಿಕರಿಗೆ ಹೋದಾಗ ನಮ್ಮ ಕಲಾವಿದರು ಕೆಲಸ ಕಳೆದುಕೊಲ್ಲಲ್ಲಿಲ್ಲವೇ?

    ಕನ್ನಡ ಚಿತ್ರಗಳದ್ದು ಸೀಮಿತ ಮಾರುಕಟ್ಟೆ

    ಕನ್ನಡ ಚಿತ್ರಗಳದ್ದು ಸೀಮಿತ ಮಾರುಕಟ್ಟೆ

    ತೆಲುಗು ತಮಿಳಿನಲ್ಲಿ ಅವರ ಮಾರುಕಟ್ಟೆ ದೊಡ್ಡದಿದೆ ಹಾಗಾಗಿ ಅಲ್ಲಿ ಡಬ್ಬಿಂಗ್ ನಡಿಯುತ್ತೆ ಆದರೆ ಕನ್ನಡ ಚಿತ್ರಗಳದ್ದು ಸೀಮಿತ ಮಾರುಕಟ್ಟೆ:

    ಈಗ ನೋಡಿ, ಮೊದಮೊದಲಿಗೆ ಚಿಕ್ಕಮಕ್ಕಳು ಕಾರ್ಟೂನ್ ಅನ್ನು ಬೇರೆ ಭಾಷೆಯಲ್ಲಿ ನೋಡ್ತಾವೆ, ನಂತರ ಡಿಸ್ಕವರಿ ನ್ಯಾಷನಲ್ ಜಿಯೋ ಅಂತಹ ಚಾನಲ್ ಗಳನ್ನೂ ಬೇರೆ ಭಾಷೆಯಲ್ಲಿ ನೋಡುತ್ತಾರೆ, ಸುತ್ತಮುತ್ತಲಿನ ವಾತಾವರಣವೇ ಬೇರೆ ಭಾಷೆಯಿಂದ ಕೂಡಿರುವ ಪರಿಣಾಮವಾಗಿ ಕನ್ನಡ ಎಂದರೆ ಅಪ್ರಯೋಜಕ ಎಂದು ಭಾವಿಸುವ, ಕನ್ನಡದ ಬಗ್ಗೆ ಕೀಳರಿಮೆ ಬೆಳೆಸಿಕೊಂಡ, ಕನ್ನಡ ಚಿತ್ರಗಳನ್ನೇ ನೋಡದ ಒಂದು ಜನಾಂಗ ಸೃಷ್ಟಿ ಆಗುತ್ತೆ. ಆಗ ರಿಮೇಕ್ ಮಾಡಿ ಅಥವಾ ಸ್ವಮೇಕ್ ಮಾಡಲಿ ಕನ್ನಡ ಚಿತ್ರಗಳಿಗೆ ಮಾರುಕಟ್ಟೆಯೇ ಇಲ್ಲವಾಗಿರುತ್ತದೆ.

    ತಮಿಳು ತೆಲುಗರಿಗೆ ಅವರ ಮಾರುಕಟ್ಟೆ ಇದ್ದಕಿದ್ದ ಹಾಗೆ ಹುಟ್ಟಿಕೊಂಡಿಲ್ಲ ರಾಮಾಯಣ ಮಹಾಭಾರತದಂತಹ ಜನಪ್ರಿಯ ಕಾರ್ಯಕ್ರಮಗಳು, ಜ್ಞಾನ ಸಂಬಂದಿ ಕಾರ್ಯಕ್ರಮಗಳು, ಟೈಟಾನಿಕ್, ಅವತಾರ್, ಸ್ಪೈಡರ್ ಮಾನ್ ನಂತಹ ಚಿತ್ರಗಳು ಸಹ ತಮಿಳಿನಲ್ಲಿ ದೊರೆಯುವಂತೆ ಮಾಡಿಕೊಂಡರು ಒಟ್ಟಾರೆಯಾಗಿ ಎಲ್ಲಡೆ ತಮ್ಮ ಭಾಷೆಯೇ ಸೌರ್ವಭೌಮತ್ವತೆ ಮೆರೆಯುವಂತೆ ಮಾಡಿದರು ಇದರ ಪರಿಣಾಮವಾಗಿ ನಮ್ಮ ಭಾಷೆಯಲ್ಲೇ ಎಲ್ಲಾ ಸಿಗುತ್ತಲ್ಲ ಬೇರೆ ಭಾಷೆ ಯಾಕೆ ಕಲೀಬೇಕು ಎಂಬ ನಂಬಿಕೆಯನ್ನು ಜನರು ಬೆಳೆಸಿಕೊಳ್ಳುವಂತಾಯಿತು ಇದರ ಪರಿಣಾಮವಾಗಿಯೇ ಇವತ್ತು ಅವರ ಮಾರುಕಟ್ಟೆ ವಿಸ್ತಾರವಾಗಿದೆ. ಆದರೆ ನಾವು? ಎಂದೋ ಮಾಡಬೇಕಿದ್ದ ಕೆಲಸವನ್ನು ಇವತ್ತಿಗೂ ಮಾಡಿಲ್ಲ ಮತ್ತು ಅದೇ ರಾಗ ಹಾಡ್ತಾ ಇದೀವಿ.

    ಉದ್ಯಮ ಅಷ್ಟೇ ಅಲ್ಲ ಕಲಾಭಿವ್ಯಕ್ತಿ ಮಾಧ್ಯಮ

    ಉದ್ಯಮ ಅಷ್ಟೇ ಅಲ್ಲ ಕಲಾಭಿವ್ಯಕ್ತಿ ಮಾಧ್ಯಮ

    ಸಿನೆಮಾ ಒಂದು ಕಲೆ ಅನ್ನೋದನ್ನ ನಾವು ಒಪ್ಕೋತೀನಿ, ಅದೇ ಉಸುರಿನಲ್ಲಿ ಅದು ಉದ್ಯಮವು ಹೌದು, ಕನ್ನಡ ಪ್ರೇಕ್ಷಕ ಬಿಟ್ಟಿಯಾಗಿ ಚಿತ್ರ ನೋಡೋದಿಲ್ಲ, ಟಿಕೆಟ್ ತಗೊಂಡೆ ನೋಡ್ತಾನೆ. ಹಾಡುಗಳ ಸಿಡಿ/ಕಾಸೆಟ್ ಗಳನ್ನೂ ನಮಗೆ ಯಾರು ದಾನವಾಗಿ ಕೊಡೋದಿಲ್ಲ. ಲಾಭ ನಷ್ಟದ ಲೆಕ್ಕಾಚಾರವಿಲ್ಲದೆ ಯಾವುದೇ ಚಿತ್ರ ತಯಾರಗೋದಿಲ್ಲ. ನಾವು ಗ್ರಾಹಕರು ನಮಗೆ ಇಷ್ಟವಾದುದನ್ನು ನೋಡ್ತೀವಿ ಬೇಡದನ್ನು ತಿರಸ್ಕರಿಸುತ್ತೀವಿ.

    ಡಬ್ಬಿಂಗ್ ಬಂದುದೇ ಆದರೆ ಆ ಒಳ್ಳೆಯದರ ಜೊತೆಗೆ ಜೊಳ್ಳು ಕೂಡ ಡಬ್ ಆಗಿ ಬರುತ್ತೆ

    ಡಬ್ಬಿಂಗ್ ಬಂದುದೇ ಆದರೆ ಆ ಒಳ್ಳೆಯದರ ಜೊತೆಗೆ ಜೊಳ್ಳು ಕೂಡ ಡಬ್ ಆಗಿ ಬರುತ್ತೆ

    ಕಾಳು ಅಥವಾ ಜೊಳ್ಳು ಅಂತ ತೀರ್ಮಾನಿಸಬೇಕಾದರೆ ನೋಡುವ ಪ್ರೇಕ್ಷಕನಿಗೆ ಅದು ಸಂಪೂರ್ಣ ಅರ್ಥವಾಗಬೇಕು. ಸಂಪೂರ್ಣ ಅರ್ಥವಾಗಬೇಕಾದರೆ ಅದು ತನಗೆ ಅರ್ಥ ಅಗೋ ಭಾಷೆಯಲ್ಲಿರಬೇಕು ಆಲ್ವಾ. ಅರ್ಥ ಆಗದ ಭಾಷೆಯಲ್ಲಿ ನೋಡಿ ಕಾಳನ್ನು ಜೊಳ್ಳು ಅಂತನೋ ಅಥವಾ ಜೊಳ್ಳನ್ನೇ ಕಾಳು ಅಂತ ತೀರ್ಮಾನಿಸಬಹುದಾದ ಅಪಾಯ ಇದೆ. ಉದಾ: ಇನ್ಸೆಪ್ಶನ್ ಚಿತ್ರವು ಅರ್ಥ ಆಗದೆ ಹೋದಾಗ..ಏನಪ್ಪಾ ಇದು ಅಂತ ಅನ್ನಿಸುತ್ತದೆ. ಅದೇ ಸಂಪೂರ್ಣ ಅರ್ಥವಾದಾಗ ಮಾತ್ರ ಒಂದು ಖಚಿತ ತೀರ್ಮಾನಕ್ಕೆ ಬರೋದು ಸಾದ್ಯ. ಇಲ್ಲದಿದ್ದರೆ ಅದು ಕನ್ನಡ ಬರದವನಿಗೆ ಕುವೆಂಪು ಸಾಹಿತ್ಯ ಕೊಟ್ಟು ವಿಮರ್ಶೆ ಬರಿ ಅಂತ ಹೇಳಿದಂತೆ.

    'ಡರ್ಟಿ ಪಿಕ್ಚರ್' ರಿಮೇಕ್ ನಲ್ಲಿ ಪಾಕಿಸ್ತಾನದ ವೀಣಾ ಮಲ್ಲಿಕ್ ನಟಿಸಿದ್ದರು. ಡಬ್ಬಿಂಗ್ ಬಂದ್ರೆ ಸೃಜನಶೀಲತೆ ಹಾಳಾಗುತ್ತೆ, ನಮ್ಮ ಕಲಾವಿದರು ಕೆಲ್ಸ ಕಳೆದುಕೊಳ್ಳುತ್ತಾರೆ, ನಮ್ಮ ಸಂಸ್ಕೃತಿ ಎಕ್ಕುಟ್ಕೊಂಡು ಹೋಗುತ್ತೆ ಅನ್ನುವವರು ಈಗ ಉತ್ತರಿಸಬೇಕಿದೆ...ಹೇಳಿ - ಸೃಜನಶೀಲತೆ, ಕಲಾವಿದರ ಹೊಟ್ಟೆಪಾಡು ಮತ್ತು ಸಂಸ್ಕೃತಿ ಇವುಗಳಲ್ಲಿ ಯಾವುದಕ್ಕೆ ಈ ಚಿತ್ರ ಕೊಡುಗೆ ನೀಡಬಲ್ಲದು?

    English summary
    Kannada film industry has called for a film industry bandh on the 27th of January, 2014 to protest against dubbing in Kannada cinema and Television. Here the facts one has to know before raising the voice against the removal of ban on Dubbing
    Monday, January 13, 2014, 17:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X