'ಕೆಜಿಎಫ್': ನಾಯಕಿ ಶ್ರೀನಿಧಿ ಶೆಟ್ಟಿಗೆ ಬ್ಯಾಡ್ ಲಕ್? ಮುಂದಿನ ನಡೆ ಏನು?

'ಕೆಜಿಎಫ್ 2' ಏಪ್ರಿಲ್ 14ಕ್ಕೆ ರಿಲೀಸ್ ಆಗಿದೆ. ಸದ್ಯ ಚಿತ್ರ ಎಲ್ಲೆಡೆ ಅದ್ಬುತವಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರ ನೋಡಿವರೆಲ್ಲಾ ರಾಕಿ ಭಾಯ್ ಜಪ ಮಾಡುತ್ತಾ ಇದ್ದಾರೆ. 'ಕೆಜಿಎಫ್' ಚಿತ್ರದ ಇಡೀ ಕಥೆ ನಿಂತಿರುವುದೇ ರಾಕಿ ಭಾಯ್ ಪಾತ್ರದ ಮೇಲೆ. ರಾಕಿಗೆ ಚಿತ್ರದಲ್ಲಿ ಸಾಥ್ ನೀಡುವ ನಾಯಕಿ ರೀನಾ ಪಾತ್ರ ಅಷ್ಟಾಗಿ ಪ್ರೇಕ್ಷಕರ ಮನಸ್ಸಲ್ಲಿ ಉಳಿಯುವುದಿಲ್ಲ.

'ಕೆಜಿಎಫ್' ಭಾಗ ಒಂದರಲ್ಲಿ ನಟಿ ಶ್ರೀನಿಧಿ ಪಾತ್ರ ತುಂಬಾ ಚಿಕ್ಕದಾಗಿತ್ತು. ನಟಿ ಶ್ರೀನಿಧಿ ಪಾತ್ರ ಹಾಗೆ ಬಂದು ಹೀಗೆ ಹೋಗಿತ್ತು. ಇನ್ನು ರಾಕಿ ಮತ್ತು ರೀನಾ ಲವ್ ಸ್ಟೋರಿ ಕೂಡ ಅಷ್ಟಾಗಿ ಮೊದಲ ಭಾಗದಲ್ಲಿ ಇರಲಿಲ್ಲ. ಹಾಗಾಗಿ ಎರಡನೇ ಭಾಗದಲ್ಲಿ ಶ್ರೀನಿಧಿ ಶೆಟ್ಟಿ ಪಾತ್ರ ಹೇಗೆ ಇರುತ್ತೆ? ಎನ್ನುವ ಬಗ್ಗೆ ಹೆಚ್ಚಿನ ಕುತೂಹಲ ಇತ್ತು. ಇಡೀ ಚಿತ್ರದಲ್ಲಿ ರಾಕಿ ಜೊತೆಗೆ ರೀನಾ ಪಾತ್ರ ಕೂಡ ಸಾಗುತ್ತೆ. ಆದರೆ ಮುಖ್ಯ ಅನಿಸೋದು ಎರಡು ಸನ್ನಿವೇಶಗಳಲ್ಲಿ ಮಾತ್ರ.

'ಕೆಜಿಎಫ್' ಚಿತ್ರದಿಂದ ರೀನಾ ಪಾತ್ರಧಾರಿ ಶ್ರೀನಿಧಿ ಶೆಟ್ಟಿಗೆ ಬೇರೆ ನಿರ್ಮಾಣ ಸಂಸ್ಥೆಯಿಂದ ಅವಕಾಶಗಳು ಬಂದಿಲ್ಲ. 'ಕೆಜಿಎಫ್‌'ಗಾಗಿ ಚಿತ್ರಗಳನ್ನು ಶ್ರೀನಿಧಿ ಶೆಟ್ಟಿ ಒಪ್ಪಿಕೊಂಡಿಲ್ಲ ಎನ್ನುವ ಚರ್ಚೆಗಳು ಶುರುವಾಗಿವೆ. ಇಷ್ಟು ದಿನ ಕಾದಿದ್ದಕ್ಕೆ ಶ್ರೀನಿಧಿ ಶೆಟ್ಟಿ ಹೇಳಿಕೊಳ್ಳುವಂತಹ ಸಿನಿಮಾ ಹುಡುಕಿಕೊಂಡು ಬಂದಿಲ್ಲ. ಹೀಗಾಗಿ ಶ್ರೀನಿಧಿಗೆ 'ಕೆಜಿಎಫ್ 2' ಬ್ಯಾಡ್ ಲಕ್ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಶ್ರೀನಿಧಿ ಶೆಟ್ಟಿ ಪಾತ್ರ ನುಂಗಿದ ಯಶ್ ಪಾತ್ರ!

ಶ್ರೀನಿಧಿ ಶೆಟ್ಟಿ ಪಾತ್ರ ನುಂಗಿದ ಯಶ್ ಪಾತ್ರ!

ಕೆಜಿಎಫ್ ಮೊದಲ ಭಾಗ ಮತ್ತು ಎರಡನೇ ಭಾಗವನ್ನು ನೋಡಿರೋರಿಗೆ ಚಿತ್ರದ ಬಗ್ಗೆ ಗೊತ್ತಿರುತ್ತೆ. ಈ ಚಿತ್ರದಲ್ಲಿ ಹತ್ತು ಹಲವು ಪಾತ್ರಗಳಿವೆ. ಆ ಎಲ್ಲಾ ಪಾತ್ರಗಳಿಗೂ ನಾಯಕನ ಪಾತ್ರದಷ್ಟೆ ಹೆಚ್ಚಿನ ಪ್ರಾಮುಖ್ಯತೆ ಬಿಲ್ಡಪ್ ನೀಡಲು ಸಾಧ್ಯವಿಲ್ಲ. ಆದರೆ ಒಂದು ಚಿತ್ರದಲ್ಲಿ ಅತಿ ಮುಖ್ಯ ಎನಿಸುವುದು ನಾಯಕ, ನಾಯಕಿ ಮತ್ತು ಖಳನಾಯಕನ ಪಾತ್ರಗಳು. ಆದರೆ 'ಕೆಜಿಎಫ್' ಚಿತ್ರದಲ್ಲಿ ನಾಯಕಿ ಹೆಸರಿಗೆ ಮಾತ್ರ. ಮಿಕ್ಕಿದ್ದೆಲ್ಲಾ ಬರಿ ಅಬ್ಬರವೇ. ಇದು ಯಾರೋ ಮಾಡಿರುವ ತಪ್ಪು ಅಲ್ಲ. ಯಾಕೆಂದರೆ ಕಥೆಯನ್ನು ಹೆಣೆದಿರುವುದೇ ಹೀಗೆ.

ಶ್ರೀನಿಧಿ ಶೆಟ್ಟಿ ಅಭಿನಯಕ್ಕೆ ಅವಕಾಶ ಕಡಿಮೆ!

ಶ್ರೀನಿಧಿ ಶೆಟ್ಟಿ ಅಭಿನಯಕ್ಕೆ ಅವಕಾಶ ಕಡಿಮೆ!

'ಕೆಜಿಎಫ್ 2' ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ಪಾತ್ರ ಅಷ್ಟೇನು ಹೆಚ್ಚಿಲ್ಲ. ಎರಡು ಕಾರಣಕ್ಕೆ ಮಾತ್ರ ಶ್ರೀನಿಧಿ ಶೆಟ್ಟಿ ಪಾತ್ರ ಮುಖ್ಯವಾಗುತ್ತದೆ. ಅದು ಕೂಡ ರಾಕಿ ಪಾತ್ರದಲ್ಲಿ ಬದಲಾವಣೆ ತರಲು ಈ ಪಾತ್ರ ಬಳಕೆಯಾಗಿದೆ. ಒಂದು ರಾಕಿಯನ್ನು ಕೋಟೆಯಿಂದ ಹೊರ ತರುವುದು, ಮತ್ತೊಂದು ಅಧೀರನನ್ನು ಹೊಡೆದುರುಳಿಸಲು ರಾಕಿಗೆ ಬೆಂಕಿಯಂತಹ ಕೋಪ ತರಿಸಲು. ಇದು ಬಿಟ್ಟರೆ ರಾಕಿ, ರೀನಾ ನಡುವೆ ಅಂತಹ ಅದ್ಬುತ ಲವ್ ಸ್ಟೋರಿ, ಎಮೋಷನ್ ಏನೂ ಇಲ್ಲ. ಅಂದರೆ ಶ್ರೀನಿಧಿ ಶೆಟ್ಟಿ ಪಾತ್ರ ಕಡಿಮೆ ಇರುವ ಕಾರಣಕ್ಕೆ ಆಕೆಯ ಅಭಿನಯಾ ಕೌಶಲ್ಯ ತೆರೆಗೆ ಹೆಚ್ಚಾಗಿ ಮೂಡಿ ಬಂದಿಲ್ಲ.

ಶ್ರೀನಿಧಿ ಶೆಟ್ಟಿ ಮುಂದಿನ ಹೆಜ್ಜೆ ಏನು?

ಶ್ರೀನಿಧಿ ಶೆಟ್ಟಿ ಮುಂದಿನ ಹೆಜ್ಜೆ ಏನು?

ಇನ್ನು 'ಕೆಜಿಎಫ್' ಎರಡೂ ಚಿತ್ರಗಳನ್ನು ಮುಗಿಸಲು ಸುಮಾರು 8 ವರ್ಷ ತಗುಲಿದೆ. ಇದಕ್ಕೀಗ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಆದರೆ ಈ ಒಂದು ಚಿತ್ರಕ್ಕಾಗಿ ಕಾಯುತ್ತಿದ್ದ ಶ್ರೀನಿಧಿ ಶೆಟ್ಟಿ ತಮ್ಮ ಮುಂದಿನ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕಾಗುತ್ತದೆ. 'ಕೆಜಿಎಫ್' ಚಿತ್ರದ ಕ್ರೇಜ್ ನೋಡಿದರೆ, ಶ್ರೀನಿಧಿ ಶೆಟ್ಟಿ ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿ ಇರಬೇಕಿತ್ತು. ಆದರೆ, ಅವರೇ ಹೇಳಿಕೊಂಡಂತೆ ಇದೂವರೆಗೂ ಒಂದೇ ಒಂದು ಸಿನಿಮಾದ ಆಫರ್ ಸಿಕ್ಕಿಲ್ಲ. ಆದರೆ, ಟಾಲಿವುಡ್‌ನಲ್ಲಿ ಶ್ರೀನಿಧಿ ಶೆಟ್ಟಿಗೆ ತೆಲುಗು ಸಿನಿಮಾಗಳ ಆಫರ್ ಬಂದಿವೆ ಎನ್ನಲಾಗಿದೆ. ಆದರೆ ಅದೂ ಕೂಡ ಅಧಿಕೃತವಾಗಿಲ್ಲ.

Recommended Video

'KGF 2' ಸಿನಿಮಾ ನೋಡುತ್ತಿದ್ದ ಯುವಕನಿಗೆ ಗುಂಡೇಟು. | Yash | Raveena Tandon
ನಾಯಕಿ ಪಾತ್ರಗಳು ಮೂಲೆಗುಂಪು ಆಗಿದೆಯಾ?

ನಾಯಕಿ ಪಾತ್ರಗಳು ಮೂಲೆಗುಂಪು ಆಗಿದೆಯಾ?

ಸಿನಿಮಾದಲ್ಲಿ ಎಷ್ಟೇ ಕಲಾವಿದರು ಇದ್ದರೂ. ಮೊದಲ ಪ್ರಾಮುಖ್ಯತೆ ನಾಯಕ ನಟನಿಗೆ ಇರುತ್ತೆ. ಭಾರತೀಯ ಚಿತ್ರರಂಗದ ಇತಿಹಾಸವನ್ನು ನೋಡಿದರೆ ನಾಯಕ ಪ್ರಧಾನ ಚಿತ್ರಗಳೇ ಹೆಚ್ಚು ದಬ್ಬಾಳಿಕೆ ಮಾಡುತ್ತಾ ಬಂದಿವೆ. ಈಗಲೂ ಒಂದು ಚಿತ್ರದಲ್ಲಿ ನಾಯಕ, ನಾಯಕಿ ಪಾತ್ರಗಳಿದ್ದರೆ ಅಲ್ಲಿ ಹೆಚ್ಚಾಗಿ ಮಿಂಚುವುದು ನಾಯಕನ ಪಾತ್ರ ಮಾತ್ರ. ನಾಯಕಿ ಇದ್ದರೂ ಹೀರೊ ಪಾತ್ರಕ್ಕೆ ಪೂರಕವಾಗಿ ಅಥವಾ ಆ ಪಾತ್ರಕ್ಕೆ ಮತ್ತಷ್ಟು ಬಿಲ್ಡಪ್ ಹೆಚ್ಚಿಸುವ ನಿಟ್ಟಿನಲ್ಲೇ ಇರುತ್ತೆ. ಹಾಗಾಗಿ ನಾಯಕ ಗಳಿಸಿದಷ್ಟು ಹೆಸರನ್ನು, ನಾಯಕ ಮಾಡಲು ಸಾಧ್ಯವೇ ಆಗುವುದಿಲ್ಲ.

More from Filmibeat

English summary
Why KGF Become Unlucky For Actress Srinidhi Shetty Know The Reason Behind,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X