ವರುಣ್ ತೇಜ್, ಲಾವಣ್ಯ ತ್ರಿಪಾಟಿ ಮದುವೆ ಸುದ್ದಿ: ನಟಿಯ ಮೌನದಲ್ಲಿದೆಯಾ ಉತ್ತರ?
ಚಿರಂಜೀವಿ ಸಹೋದರ ನಾಗಬಾಬು ಪುತ್ರ ವರುಣ್ ತೇಜ್ ಅವರ ಮದುವೆ ಬಗ್ಗೆ ಸುದ್ದಿ ಒಂದು ಹರಿದಾಡುತ್ತಿದೆ. ವರುಣ್ ವಿವಾಹವಾಗಲು ತಯಾರಾಗಿದ್ದು, ತೆಲುಗು ಚಿತ್ರರಂಗದ ಸ್ಟಾರ್ ನಟಿಯೊಬ್ಬರನ್ನೇ ವಿವಾಹವಾಗಲಿದ್ದಾರೆ ಎನ್ನುವ ಸುದ್ದಿ ಹರದಾಡುತ್ತಿದೆ.
ಈ ಸುದ್ದಿ ಹೊರ ಬಂದಾಗಿನಿಂದೂ ಈ ಬಗ್ಗೆ ವರುಣ್ ಅಥವಾ ಮೇಘ ಕುಟುಂಬದವರು ಇಲ್ಲಿ ತನಕ ಏನನ್ನೂ ಮಾತನಾಡಿಲ್ಲ. ಮದುವೆ ಸುದ್ದಿ ಗಾಳಿ ಸುದ್ದಿ ರೂಪದಲ್ಲಿಯೇ ಓಡಾಡುತ್ತಿದೆ. ಈ ಸುದ್ದಿ ಇಷ್ಟು ದೊಡ್ಡದಾಗಿ ಸದ್ದು ಮಾಡಿದ ಬಳಿಕ ಯಾರಾದರೂ ಈ ಬಗ್ಗೆ ಪ್ರತಿಕ್ರಿಯೆ ನೀಡಬಹುದು ಎಂದು ಊಹಿಸಲಾಗಿತ್ತು.
ಈ ಬಗ್ಗೆ ಮೆಗಾ ಕುಟುಂಬ ಮಾತನಾಡುವುದು ಹಾಗೆ ಇರಲಿ. ವರುಣ್ ಜೊತೆಗೆ ತನ್ನ ಹೆಸರು ತಳುಕು ಹಾಕಿ ಕೊಂಡಿರುವ ಬಗ್ಗೆ ನಟಿ ಲಾವಣ್ಯ ತ್ರಿಪಾಟಿ ಕೂಡ ತುಟಿಬಿಚ್ಚಿಲ್ಲ. ಇದುವೇ ಈಗ ಅಚ್ಚರಿಗೆ ಕಾರಣ ಆಗಿದೆ.

ಮೌನ ಮುರಿಯದ ನಟಿ ಲಾವಣ್ಯ ತ್ರಿಪಾಟಿ!
ನಟ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಟಿ ಮದುವೆ ವಿಚಾರದಲ್ಲಿ ಎಲ್ಲರ ಗಮನ ಲಾವಣ್ಯ ಕಡೆಗೆ ನೆಟ್ಟಿದೆ. ಯಾಕೆಂದರೆ ಲಾವಣ್ಯ ತಾನೊಬ್ಬ ನಟಿಯಾಗಿ ಇದು ಸುಳ್ಳು ಸುದ್ದಿ ಆಗಿದ್ದರೆ. ಅದನ್ನು ಆಕೆ ಈಗಾಗೇ ಸ್ಪಷ್ಟ ಪಡೆಸಬೇಕಿತ್ತಲ್ಲವೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಯಾಕೆಂದರೆ ಈ ಸುದ್ದಿ ಹೆಚ್ಚು ಸದ್ದು ಮಾಡುತ್ತಿರುವಾಗಲೇ, ಲಾವಣ್ಯ ಅವರು ಸಾಮಾಜಿಕ ಜಾಣದಲ್ಲಿ ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಹಾಗಾಗಿ ಈ ವಿಚಾರದ ಬಗ್ಗೆ ಲಾವಣ್ಯ ಮಾತನಾಡದೇ ಇರಲು ಕಾರಣ ಏನು ಎನ್ನುವ ಗುಸುಗುಸು ಹಬ್ಬಿದೆ.

ವರುಣ್ ತೇಜ್- ಲಾವಣ್ಯ ತ್ರಿಪಾಟಿ ಮದುವೆ ಸುದ್ದಿ ನಿಜವೇ?
ಕೇವಲ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಅಲ್ಲ. ತೆಲುಗು ಮಾಧ್ಯಮಗಳಿಗೂ ಲಾವಣ್ಯ ಉತ್ತರ ನೀಡದೇ ಮೌನ ವಹಿಸಿದ್ದಾರಂತೆ. ಹಾಗಾಗಿ ಈ ಸುದ್ದಿ ನಿಜವೇ ಇರಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಲಾವಣ್ಯ ಅವರು ಈಗಲೇ ಈ ವಿಚಾರದ ಬಗ್ಗೆ ಮಾತನಾಡುವುದು ಬೇಡ ಎಂದು ಸುಮ್ಮನೆ ಇದ್ದಾರೆ ಎನ್ನುವ ಮಾತುಗಳು ಕೇಳಿ ಬರ್ತಿವೆ. ಅಥವಾ ಗಾಳಿ ಸುದ್ದಿ ಬಗ್ಗೆ ತಲೆಕೆಡಿಸಿಕೊಳ್ಳದೇ ಸುಮ್ಮನೇ ಇರಲು ಲಾವಣ್ಯ ನಿರ್ಧರಿಸಿರಬೇಕು ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ.

ಮದುವೆ ಆಗುವ ಹುಡುಗಿಗಾಗಿ ಉಂಗುರ ಖರೀದಿಸಿದ್ದ ವರುಣ್!
ನಟ ವರುಣ್ ತೇಜ್ ತಾನು ಮದುವೆ ಆಗುವ ಹುಡುಗಿಗಾಗಿ ಉಂಗುರವನ್ನು ಖರೀದಿ ಮಾಡಿದ್ದಾರೆ. ಜೊತೆಗೆ ಸದ್ಯದಲ್ಲಿಯೇ ಆಕೆಗೆ ಉಂಗುರ ತೊಡಿಸಲಿದ್ದಾರೆ ಎನ್ನುವ ವಿಚಾರ ಸುದ್ದಿಯ ರೂಪದಲ್ಲಿ ಹರಿದಾಡುತ್ತಿದೆ. ಆ ಹುಡುಗಿ ಲಾವಣ್ಯ ತ್ರಿಪಾಟಿ ಎನ್ನಲಾಗುತ್ತಿದೆ. ಆದರೆ ಆಕೆ ಮಾತ್ರ ಈ ಸುದ್ದಿ ಬಗ್ಗೆ ಮೌನವಹಿಸಿದ್ದಾಳೆ. ಹಾಗಾಗಿ ಈ ಸುದ್ದಿಗೆ ಮತ್ತಷ್ಟು ರೆಕ್ಕೆ ಪುಕ್ಕ ಬೆಳೆದುಕೊಂಡಿವೆ.

ವರುಣ್ ತೇಜ್ ಮುಂದಿನ ಸಿನಿಮಾ 'ಗನಿ'!
ವರುಣ್ ನಟನೆಯ ಹೊಸ ಸಿನಿಮಾ 'ಗನಿ'. ವರುಣ್ ಹುಟ್ಟುಹಬ್ಬಕ್ಕೆ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಬಾಕ್ಸರ್ ಪಾತ್ರದಲ್ಲಿ ವರುಣ್ ತೇಜ್ ನಟಿಸಿದ್ದು, ವರುಣ್ ತೇಜ್‌ರ ಬಾಕ್ಸಿಂಗ್ ಗುರುವಿನ ಪಾತ್ರದಲ್ಲಿ ಕನ್ನಡದ ಸ್ಟಾರ್ ನಟ ಉಪೇಂದ್ರ ನಟಿಸಿದ್ದಾರೆ. ಈ ಸಿನಿಮಾವನ್ನು ಕಿರಣ್ ಕೊರ್ರಪಾಟಿ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಸಾಯಿ ಮಂಜ್ರೇಕರ್ ನಾಯಕಿಯಾಗಿದ್ದಾರೆ.


Click it and Unblock the Notifications











