»   » ಮೈತ್ರಿಯಾ ಡೀಲ್ ರು.10 ಕೋಟಿ ಕಡೆಗೆ ಸಿಕ್ಕಿದ್ದೇನು?

ಮೈತ್ರಿಯಾ ಡೀಲ್ ರು.10 ಕೋಟಿ ಕಡೆಗೆ ಸಿಕ್ಕಿದ್ದೇನು?

By: ಜೀವನರಸಿಕ
Subscribe to Filmibeat Kannada

ಕೇಂದ್ರ ರೈಲ್ವೆ ಸಚಿವ, ಮಾಜಿ ಮುಖ್ಯಮಂತ್ರಿ ಸದಾನಂದಗೌಡರ ಪುತ್ರ ಕಾರ್ತಿಕ್ ಕಮ್ ಮತ್ತು ನಟಿ ರೂಪದರ್ಶಿ ಮೈತ್ರಿಯಾ ವಿಷಯ ರಾಜ್ಯಾದ್ಯಂತ ಬಿಸಿ ಬಿಸಿ ಸುದ್ದಿಯಾಗಿ ಚರ್ಚೆಯಾಗಿದೆ. ಈಗಲೂ ಚರ್ಚೆಗಳು ನಡೀತಿವೆ, ಮೊದಲಿಗೆ ಮೈತ್ರಿಯ ಮೇಲೆ ಕನಿಕರ ತೋರಿಸಿದ್ದ ಜನರು ಈಗ ಮೈತ್ರಿಯಾ ಎಂಥಹಾ ಡೆಡ್ಲೀ ಟ್ಯಾಲೆಂಟೆಡ್ ಅಂತಿದ್ದಾರೆ.

ಆದ್ರೆ ಇದರ ನಡುವೆ ಒಳಗೊಳಗೇ ನಡೆದಿರೋ ಅದೆಷ್ಟೋ 'ಮೈತ್ರಿ'ಯ ವಿಷಯಗಳು ನಮಗೆ ಗೊತ್ತಿಲ್ಲ. ಮೈತ್ರಿಯಾ ಗೌಡ ಚಾಲಾಕಿ ಅನ್ನೋದ್ರಲ್ಲಿ ಅನುಮಾನವಿಲ್ಲ. ಯಾಕಂದ್ರೆ ಪೊಲೀಸರಿಗೆ ದೂರು ನೀಡೋ ಮೊದಲೇ ಮೈತ್ರಿಯಾ ಗೌಡ-ಸದಾನಂದಗೌಡರ ನಡುವೆ ಸಂಧಾನ ಯತ್ನಗಳು ನಡೆದಿವೆಯಂತೆ. ಆದರೆ ಅದರ ಡೀಟೈಲ್ಸ್ ಹೊರಬಂದಿಲ್ಲ ಅಷ್ಟೇ.

ತನ್ನ ಮಗನಿಗಾಗಿ ತನ್ನ ಖುರ್ಚಿ ಮತ್ತು ಮರ್ಯಾದೆಗಾಗಿ ರಾಜ್ಯದ ಮಾಜಿ ಮುಖ್ಯಮಂತ್ರಿ ಕೇಂದ್ರ ರೈಲ್ವೆ ಸಚಿವ ಸದಾನಂದಗೌಡರು 'ಸಂಧಾನ'ನಂದ ಗೌಡರಾಗಿದ್ರಂತೆ ಈ ಕುರಿತ ಸೀಕ್ರೇಟ್ ಡೀಟೈಲ್ಸ್ ಇಲ್ಲಿದೆ.

'ಸಂಧಾನ'ನಂದ ಗೌಡರಾದ ರೈಲ್ವೆ ಸಚಿವರು

ಕಾರ್ತಿಕ್ ವಿರುದ್ಧ ಮೈತ್ರಿಯಾ ಗೌಡ ತಿರುಗಿ ಬೀಳೋಕೂ ಮೊದಲೇ ತನ್ನ ಮಗನ ವಿಷಯವನ್ನ ಅಲ್ಲಿಗೇ ಬಿಡುವಂತೆ ಮಾಧ್ಯಮಗಳ ಮುಂದೆ ಹೋಗದಂತೆ ಸದಾನಂದಗೌಡರು ಸಂಧಾನಕ್ಕೆ ಪ್ರಯತ್ನಿಸಿದ್ರಂತೆ. ಆದ್ರೆ ಅದು ಯಶಸ್ವಿಯಾಗಲಿಲ್ಲ.

ಸದಾನಂದ ಗೌಡರು ಹೇಳಿದ್ದ 2 ಕೋಟಿ

ಮದುವೆಯ ವಿಷಯದ ಬಗ್ಗೆ ವಿವಾದ ತೆಗೆಯೋಕೂ ಮೊದಲು ಮೈತ್ರಿಯಾ ಗೌಡ ಸದಾನಂದಗೌಡರನ್ನ ಸಂಪರ್ಕಿಸಿ ಮಾತನಾಡಿದ್ದಾರೆ. ನಿಮ್ಮ ಮಗನಿಗೆ ನನ್ನ ಜೊತೆ ಸಂಬಂಧವಿದೆ. ಮದುವೆಯಾದ್ರೆ ನನ್ನನ್ನೇ ಆಗಬೇಕು ಅಂತ ಕೇಳಿಕೊಂಡಿದ್ದಾರೆ. ಆದರೆ ಇದಕ್ಕೆ ಸದಾನಂದ ಗೌಡರು ಸಾಧ್ಯವೇ ಇಲ್ಲ ಅಂದಿದ್ದಾರೆ. ಹಾಗಾದ್ರೆ ನಾನು ವಿಷಯವನ್ನ ಮಾಧ್ಯಮಗಳ ಮುಂದೆ ತರ್ತೀನಿ ಅಂದ ಮೈತ್ರಿಯಾಗೆ ಸ್ಮೈಲ್ ಗೌಡ್ರು ಈ ವಿಷ್ಯ ಇಲ್ಲಿಗೆ ಬಿಟ್ರೆ ರು.2 ಕೋಟಿ ಕೊಡ್ತೀನಿ ಅಂದಿದ್ದಾರೆ.

ಮೈತ್ರಿಯಾ ಕೇಳಿದ್ದು 10 ಕೋಟಿ

ಸದಾನಂದಗೌಡರು ಕೊಡೋಕೆ ಹೊರಟಿದ್ದು ರು.2 ಕೋಟಿಯಾದ್ರೆ ಮೈತ್ರಿಯಾ ಗೌಡ ಕೇಂದ್ರ ರೈಲ್ವೇ ಸಚಿವರಿಗೆ 10 ಕೋಟಿಯ ರುಪಾಯಿ ಡಿಮಾಂಡ್ ಮಾಡಿ ಶಾಕ್ ಕೊಟ್ಟಿದ್ದಾರೆ. ಅಲ್ಲಿಂದ ಸಂಬಂಧ ಮುರಿಯೋಕೆ ಚೌಕಾಸಿ ಶುರುವಾಗಿದೆ.

ಗೌಡ್ರು ಒಪ್ಪಿದ್ದು 5 ಕೋಟಿ ಡೀಲ್ ಗೆ

ಕೊನೆಗೆ ಸದಾನಂದಗೌಡ್ರು ಮಗನ ವಿಷಯ ಬಿಡೋದಾದ್ರೆ ರು.5 ಕೋಟಿ ಕೊಡ್ತೀನಿ ಅಂತ ಮೈತ್ರಿಯಾ ಜೊತೆ ಮೈತ್ರಿ ಶುರುಮಾಡಿದ್ದಾರೆ. ಆದರೆ ರು.10 ಕೋಟಿಯಿಂದ ಹಿಂದೆ ಸರಿಯದ ಮೈತ್ರಿ ಹರಿಶಿನದ ಕೊಂಬಿನ ಕಥೆ ಹೇಳಿದ್ದಾರೆ.

ಮತ್ತೆ ಮೈತ್ರಿಗೆ ರೆಡಿಯಾದ ಮೈತ್ರಿಯಾ

ಎಲ್ಲವೂ ಆಗಿ ಸೀದಾ ಬಾಲಿವುಡ್ ಬಿಗ್ ಬಾಸ್ ಗೆ ಎಂಟ್ರಿಕೊಡುವಷ್ಟು ಪಬ್ಲಿಸಿಟಿ ಗಿಟ್ಟಿಸಿಕೊಂಡ ಮೈತ್ರಿಯ ಗೌಡ ಭರ್ಜರಿ ಪಬ್ಲಿಸಿಟಿ ಪಡ್ಕೊಂಡ ನಂತರ ಸದಾನಂದಗೌಡರಿಗೆ ಕರೆ ಮಾಡಿ ಈಗ ಐದು ಕೋಟಿ ಕೊಟ್ರೆ ಕಂಪ್ಲೆಂಟ್ ವಾಪಾಸ್ ತೊಗೋತೀನಿ ಅಂದಿದ್ದಾರೆ. ಆದ್ರೆ ಗೌಡ್ರು ಗರ್ರಂ ಆಗಿದ್ದಾರೆ.

ಏನಾದ್ರೂ ಮಾಡ್ಕೋ ಅಂದ್ರು ಸ್ಮೈಲ್ ಗೌಡ್ರು

ಐದು ಕೋಟಿನೂ ಕೊಡಲ್ಲ ಒಂದ್ ರುಪಾಯೀನೂ ಕೊಡಲ್ಲ ಏನಾದ್ರೂ ಮಾಡ್ಕೋ ಹೋಗ್ `ಹೊದ ಮಾನ ಮತ್ತೆ ಬರೋದಿಲ್ಲ' ಅಂದಿದ್ದಾರೆ. ಅಲ್ಲಿಗೆ ಗೌಡರ ಮೈತ್ರಿಯ ಸಂಧಾನ ಕಥೆ ಮುಗಿದಿದೆ.

ಪಬ್ಲಿಸಿಟಿ ಇಲ್ದಿದ್ರೆ ದುಡ್ಡು

ದುಡ್ಡು ಬೇಕು ಅಂದ್ರೆ ಈ ಪಬ್ಲಿಸಿಟಿ ಬಿಡ್ಬೇಕು. ಪಬ್ಲಿಸಿಟಿ ಬೇಕು ಅಂದ್ರೆ ದುಡ್ಡ ಬಿಡ್ಬೇಕು. ಎರಡೂ ಬೇಕು ಅಂದ್ರೆ ಯಾರ್ ಕೊಡ್ತಾರೆ ಹೇಳಿ. ಮೈತ್ರಿಯಾ ಕಥೆ ಕೇಳಿ ಗಾಂಧಿನಗರ ಗಲಿ ಗಲಿ ಅಂತ ನಗ್ತಿದೆ. ಇಷ್ಟಕ್ಕೂ ಹೀಗೆಲ್ಲಾ ನಡೆದಿದೆ ಅನ್ನೋ ಗಾಳಿ ಸುದ್ದಿ ಹರಿದಾಡ್ತಿದೆ. ಪ್ರಕರಣ ನೋಡಿದರೆ ನಿಜ ಅನ್ಸುತ್ತೆ. ನಂಬೋದು ಬಿಡೋದು ನಿಮಗ್ ಬಿಟ್ಟಿದ್ದು.

English summary
Why Railway minister Sandananda Gowda close the doors with Sandalwood actress Mythriya Gowda, who has recently made headlines for accusing former Chief Minister Sadananda Gowda's son, Karthik, of having raped her, is said to have been admitted for weakness and fatigue.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada