»   » ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೀಗಾ ಅನ್ನೋದು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೀಗಾ ಅನ್ನೋದು?

Posted By: ಜೀವನರಸಿಕ
Subscribe to Filmibeat Kannada

ಪತ್ರಕರ್ತರಿಗೆ ಯಾವಾಗಲೂ ಟಾಂಗ್ ಕೊಡೋ ದರ್ಶನ್ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ತಮ್ಮದೇ ವರಸೆಯಲ್ಲಿ ಡೈಲಾಗ್ ಒಂದನ್ನ ಚಚ್ಚಿದ್ದಾರೆ. ಆ ಡೈಲಾಗನ್ನು ಅರ್ಥ ಮಾಡಿಕೊಂಡು ಓದಿ "ನೀವೇನ್ ಕಿತ್ಕೊಂಡ್ರು, ಅಲ್ಲಾಡಿಸಿದ್ರೂ ನನ್ಹತ್ರ ಇರೋದು ಇಷ್ಟೇ ಸುದ್ದಿ" ಅಂತ.

ಇಷ್ಟಕ್ಕೂ ಪತ್ರಕರ್ತರು ಕೇಳಿದ್ದು ಸಿನಿಮಾ ಬಗ್ಗೆ ಇನ್ನೇನಾದ್ರೂ ಇದ್ರೆ ಹೇಳಿ ಅಂತ ದರ್ಶನ್ ಅದಕ್ಕೆ ಈ ಮೇಲೆ ಹೇಳಿದ ಡೈಲಾಗನ್ನ ಹೊಡೆದಿದ್ದಾರೆ. ಎಷ್ಟು ಅದ್ಭುತವಾಗಿ ಮಾತ್ನಾಡ್ತಾರೆ ಅಲ್ವಾ ಚಾಲೆಂಜಿಂಗ್ ಸ್ಟಾರ್ ದರ್ಶನ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅಭಿಮಾನಿಗಳು ಇತ್ತೀಚೆಗೆ 'ಕರುನಾಡ ಕಲಾರತ್ನ' ಅನ್ನೋ ಬಿರುದನ್ನೂ ದಯಪಾಲಿಸಿದ್ದಾರೆ. ['ಕರುನಾಡ ಕಲಾರತ್ನ'ನಾದ ಚಾಲೆಂಜಿಂಗ್ ಸ್ಟಾರ್ ದರ್ಶನ್]

Why Sandalwood actor Darshan is in black mood?

ಒಳ್ಳೇದು ಮಾಡಿದ್ರೆ ಹೊಗಳೋದು, ಕೆಟ್ಟದ್ದು ಮಾತ್ರ ತೆಗಳೋದೇ ಪತ್ರಕರ್ತರ ಕೆಲಸ. ದರ್ಶನ್ ಪ್ರಕಾರ ಕೆಟ್ಟದ್ದು ಮಾಡಿದ್ರೂ ಹೊಗಳಬೇಕು ಅಂದ್ರೆ ಅದು ವೃತ್ತಿ ನಿಷ್ಠರಿಗೆ ಆಗದ ಕೆಲಸ. ಒಬ್ಬರ ಮೇಲಿರೋ ಕೋಪವನ್ನ ಇಡೀ ಪತ್ರಕರ್ತ ಸಮೂಹದ ಮೇಲೆ ತೋರಿಸೋದು ತಪ್ಪಲ್ವಾ. ಆದ್ರೆ ದರ್ಶನ್ ಇಲ್ಲೂ ಸಿನಿಮಾ ಸ್ಟೈಲ್ ನಲ್ಲಿ ವಿಲನ್ ಒಬ್ಬನಿಗೆ ಬೈಯ್ಯೋದನ್ನ ಇಡೀ ಖಾಂದಾನ್ ಗೆ ಬೈದಂತೆ ಬೈದಿದ್ದಾರೆ. ಬೇಕಾ ಇದೆಲ್ಲಾ? [ಪತ್ರಕರ್ತರನ್ನ ಕಂಡರೆ ದರ್ಶನ್ ಉರಿದು ಬೀಳುವುದೇಕೆ?]

ಜಗ್ಗು ದಾದಾ ಚಿತ್ರದ ನಿರ್ದೇಶಕ ರಾಘವೇಂದ್ರ ಹೆಗಡೆ ಅವರಿಗೆ ಪತ್ರಕರ್ತರೊಬ್ಬರು ದರ್ಶನ್ ರನ್ನು ಪರಿಚಯಿಸಲು ರು.7 ಲಕ್ಷ ತೆಗೆದುಕೊಂಡಿದ್ದರಂತೆ. ಈ ಸಂಗತಿ ದರ್ಶನ್ ಗೆ ಗೊತ್ತಾಗಿ ಇಡೀ ಪತ್ರಕರ್ತರ ಮೇಲೆ ಈಗ ಅವರ ಸಿಟ್ಟು ತಿರುಗಿದೆ ಎನ್ನುತ್ತವೆ ಮೂಲಗಳು.

English summary
Why Sandalwood actor Darshan is in black mood? Recently the actor upset over the journalists. His answer raise an eye brow in Sandalwood. Whu Darshan is behaving like this?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada