For Quick Alerts
  ALLOW NOTIFICATIONS  
  For Daily Alerts

  ಕನ್ನಡದ 'ಬೀರ್ ಬಲ್' ರಿಮೇಕ್ ಮಾಡ್ತಾರಾ ಆಯುಷ್ಮಾನ್ ಖುರಾನ?

  |

  ಹೊಸತನದಲ್ಲಿ ಬರುತ್ತಿರುವ ಕನ್ನಡ ಸಿನಿಮಾಗಳು ಬೇರೆ ಇಂಡಸ್ಟ್ರಿಗೆ ರಿಮೇಕ್ ಆಗುತ್ತಿವೆ. ಈಗ ಆ ಸಾಲಿಗೆ ಮತ್ತೊಂದು ಕನ್ನಡ ಸಿನಿಮಾ ಸೇರುವ ಸಾಧ್ಯತೆ ಹೆಚ್ಚಿದೆ. ಅದೇ 'ಬೀರ್ ಬಲ್'.

  ಶ್ರೀನಿ ನಟನೆ ಹಾಗೂ ನಿರ್ದೇಶನ ಮಾಡಿದ್ದ 'ಬೀರ್ ಬಲ್' ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿತ್ತು. ಈ ಸಿನಿಮಾದ ಟ್ರೇಲರ್ ಈಗ ಬಾಲಿವುಡ್ ನಟ ಆಯುಷ್ಮಾನ್ ಖುರಾನ ಕಣ್ಣಿಗೆ ಬಿದ್ದಿದೆ. ಸಿನಿಮಾದ ಟ್ರೇಲರ್ ನೋಡಿ ಆಯುಷ್ಮಾನ್ ಥ್ರಿಲ್ ಆಗಿದ್ದಾರಂತೆ.

  Birbal Review : ಅದೇ ತರ..ಆದರೆ ಇದು ಅದಲ್ಲ..Birbal Review : ಅದೇ ತರ..ಆದರೆ ಇದು ಅದಲ್ಲ..

  'ಬೀರ್ ಬಲ್' ಸಿನಿಮಾದ ರಿಮೇಕ್ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ಕ್ಕೆ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಸಿನಿಮಾ ಮೇಕಿಂಗ್ ಸ್ಟೈಲ್ ನೋಡಿ ಆಯುಷ್ಮಾನ್ ಖುರಾನ ಇಷ್ಟಪಟ್ಟಿದ್ದು, ರಿಮೇಕ್ ಮಾಡುವ ಸಾಧ್ಯತೆ ಹೆಚ್ಚಿದೆ.

  ಸದ್ಯ, ಹಿಂದಿ ಚಿತ್ರರಂಗದಲ್ಲಿ ಆಯುಷ್ಮಾನ್ ಖುರಾನ ಸಿನಿಮಾಗಳಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಗುತ್ತಿದೆ. ಹೀಗಾಗಿ ಕನ್ನಡದ ರಿಮೇಕ್ ನಲ್ಲಿ ಅವರು ಕಾಣಿಸಿಕೊಂಡರೆ ನಿಜಕ್ಕೂ ಖುಷಿಯ ವಿಷಯವಾಗಿದೆ. ಮತ್ತೊಂದು ಕಡೆ ಎರಡ್ಮೂರು ಸಿನಿಮಾಗಳಲ್ಲಿ ಆಯುಷ್ಮಾನ್ ಬ್ಯುಸಿ ಇದ್ದಾರೆ. ಹೀಗಾಗಿ ಸಿನಿಮಾ ಮಾಡಲು ನಿರ್ಧಾರ ಮಾಡಿದರೂ, ಶುರು ಆಗಲು ಸ್ವಲ್ಪ ಸಮಯ ಬೇಕಾಗುತ್ತದೆ.

  ಪಾತ್ರಕ್ಕಾಗಿ ಪೂರ ಬದಲಾದರು ನಟ ಆಯುಷ್ಮಾನ್ ಕುರಾನ್ಪಾತ್ರಕ್ಕಾಗಿ ಪೂರ ಬದಲಾದರು ನಟ ಆಯುಷ್ಮಾನ್ ಕುರಾನ್

  'ಬೀರ್ ಬಲ್' ಶ್ರೀನಿ ನಟನೆ ಹಾಗೂ ನಿರ್ದೇಶನದಲ್ಲಿ ಬಂದ ಸಿನಿಮಾ. 2019 ರಲ್ಲಿ ಬಂದ ಬೆಸ್ಟ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಸಾಲಿನಲ್ಲಿ ಈ ಚಿತ್ರ ಪ್ರಮುಖವಾಗಿದೆ.

  English summary
  Will Bollywood star Ayushmann Khurrana do 'Birbal' kannada movie remake?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X