ಅಲ್ಲಿನ 'ಅರ್ಜುನ್ ರೆಡ್ಡಿ' ಇಲ್ಲಿಗೆ 'ಧನು ರೆಡ್ಡಿ' ಆಗಿ ಬರ್ತಾನ?
Recommended Video

ಟಾಲಿವುಡ್ ನಲ್ಲಿ ಬಂದ ಸೂಪರ್ ಹಿಟ್ ಸಿನಿಮಾ 'ಅರ್ಜುನ್ ರೆಡ್ಡಿ' ಅದೇನೂ ಮೋಡಿ ಮಾಡಿದೆಯೋ ಏನೋ ಈಗ ಎಲ್ಲರ ಕಣ್ಣು ಅದರ ಮೇಲೆ ಬಿದ್ದಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಿ ಬಂದಾಗ ಜನ ಇಷ್ಟ ಪಟ್ಟರೆ, ಸಿನಿಮಾ ಮಂದಿ ಇದನ್ನು ರಿಮೇಕ್ ಮಾಡಿದರೆ ಹೇಗೆ ಎನ್ನುವ ಲೆಕ್ಕಾಚಾರ ಹಾಕಿದ್ದರು.
ವಿಶೇಷ ಅಂದರೆ, ಈ ಹಿಂದೆ ಅನೇಕ ಬಾರಿ ಕನ್ನಡದಲ್ಲಿ 'ಅರ್ಜುನ್ ರೆಡ್ಡಿ' ಸಿನಿಮಾ ರಿಮೇಕ್ ಆಗುತ್ತದೆ ಎನ್ನುವ ಸುದ್ದಿ ಹರಿದಾಡಿದರೂ, ಅಧಿಕೃತವಾಗಿ ಯಾವುದೇ ನಿರ್ಮಾಪಕರು ಈ ಬಗ್ಗೆ ಹೇಳಿಲ್ಲ. ಆದರೆ ಈ ಚಿತ್ರದ ರಿಮೇಕ್ ರೈಟ್ಸ್ ಈಗ ರಾಕ್ ಲೈನ್ ವೆಂಕಟೇಶ್ ಬಳಿ ಇದೆ. ಇವುಗಳ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಈಗ 'ಅರ್ಜುನ್ ರೆಡ್ಡಿ' ಕನ್ನಡದಲ್ಲಿ 'ಧನು ರೆಡ್ಡಿ' ಆಗುತ್ತಾನೆ ಎನ್ನುವ ಗುಸು ಗುಸು ಕೇಳಿ ಬಂದಿದೆ. ಅದಕ್ಕೆ ಪುಷ್ಟಿ ನೀಡುವಂತೆ ಈಗ ಒಂದು ಫ್ಯಾನ್ಸ್ ಮೇಡ್ ಪೋಸ್ಟರ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಮುಂದೆ ಓದಿ...

ಯಶ್ ನಟಿಸೋ ಸಾಧ್ಯತೆ ಕಡಿಮೆ
ಈ ಮೊದಲು 'ಅರ್ಜುನ್ ರೆಡ್ಡಿ' ರಿಮೇಕ್ ಸಿನಿಮಾದಲ್ಲಿ ನಟ ಯಶ್ ನಟಿಸುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ ಈಗ ಯಶ್ 'ಅರ್ಜುನ್ ರೆಡ್ಡಿ' ವೇಷ ತೊಡುವ ಸಾದ್ಯತೆ ಬಹಳ ಕಡಿಮೆ ಇದೆ. ಯಶ್ ಇನ್ನು ಈ ಸಿನಿಮಾವನ್ನು ನೋಡಿಲ್ಲ ಜೊತೆಗೆ ಈ ಸಿನಿಮಾ ಮಾಡುವ ಬಗ್ಗೆ ಯಶ್ ಕೂಡ ಹೆಚ್ಚು ಉತ್ಸಾಹ ಕೊಡುತ್ತಿಲ್ಲ. ಸದ್ಯ 'ಕೆ.ಜಿ.ಎಫ್' ಚಾಪ್ಟರ್ 1 ನಂತರ 'ಕೆ.ಜಿ.ಎಫ್' ಚಾಪ್ಟರ್ 2 ಸಿನಿಮಾ ಬರಲಿದೆ. ಆ ನಂತರ 'ರಾಣಾ' ಚಿತ್ರದಲ್ಲಿ ಯಶ್ ಬಿಜಿ ಆಗುತ್ತಾರೆ.

ಸ್ಪೆಷಲ್ ಸ್ಟಾರ್ ಆಗ್ತಾರ 'ಧನು ರೆಡ್ಡಿ' ?
'ಅರ್ಜುನ್ ರೆಡ್ಡಿ' ರಿಮೇಕ್ ನಲ್ಲಿ ಯಶ್ ನಂತರ ಕೇಳಿ ಬಂದ ಹೆಸರು ನಟ ಧನಂಜಯ್ ಅವರದ್ದು. ಸದ್ಯದ ಸುದ್ದಿ ಪ್ರಕಾರ 'ಅರ್ಜುನ್ ರೆಡ್ಡಿ' ರಿಮೇಕ್ ಪ್ರಾಜೆಕ್ಟ್ ಈಗ ಡಾಲಿ ಮುಂದೆ ಇದೆಯಂತೆ. ಇನ್ನು ಈಗ ಸಾಮಾಜಿಕ ಜಾಲತಾಣಗಳಲ್ಲಿ 'ಧನು ರೆಡ್ಡಿ' ಎಂಬ ಫ್ಯಾನ್ಸ್ ಮೇಡ್ ಪೋಸ್ಟರ್ ಕೂಡ ಹರಿದಾಡಿದೆ. ಧನಂಜಯ್ ಅವರನ್ನು 'ಅರ್ಜುನ್ ರೆಡ್ಡಿ' ಯಾಗಿ ನೋಡಲು ಬಯಸಿದ ಅಭಿಮಾನಿಗಳು ತಾವೇ ಒಂದು ಪೋಸ್ಟರ್ ಕೂಡ ಮಾಡಿದ್ದಾರೆ.

ರಾಕ್ ಲೈನ್ ಬಳಿ ಇದೆ ರೈಟ್ಸ್
ಹಾಗೆ ನೋಡಿದರೆ ಈಗಾಗಲೇ 'ಅರ್ಜುನ್ ರೆಡ್ಡಿ' ರಿಮೇಕ್ ರೈಟ್ಸ್ ಕನ್ನಡದಲ್ಲಿಯೇ ಇದೆ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮೂಲ ನಿರ್ಮಾಪಕರಿಂದ ರಿಮೇಕ್ ಹಕ್ಕು ಖರೀದಿಸಿದ್ದಾರೆ. ಕನ್ನಡದಲ್ಲಿ ರಾಕ್ ಲೈನ್ ಈ ಚಿತ್ರವನ್ನು ಮಾಡುವ ಪ್ಲಾನ್ ಹೊಂದಿದ್ದಾರೆ. ಕಥೆಗೆ ಸೂಕ್ತ ಎನಿಸುವ ನಾಯಕನಿಗೆ ರಾಕ್ ಲೈನ್ ಮಣೆ ಹಾಕುತ್ತಾರೆ.

ಚೆನ್ನಾಗಿ ಸೂಟ್ ಆಗುತ್ತೆ
ಧನಂಜಯ್ ಅವರಿಗೆ 'ಅರ್ಜುನ್ ರೆಡ್ಡಿ' ಸಿನಿಮಾ ತುಂಬ ಚೆನ್ನಾಗಿ ಸೂಟ್ ಆಗುತ್ತದೆ ಅನಿಸುತ್ತದೆ. ಆ ರಾ ಲುಕ್ ನಿಂದ ಹಿಡಿದು, ಆ ಪಾತ್ರ ಧನಂಜಯ್ ಮಾಡಿದರೆ ಪಕ್ಕಾ ಆಗಿರುತ್ತದೆ ಎನ್ನುವುದು ಅನೇಕರ ಅಭಿಪ್ರಾಯ. ಇನ್ನು 'ಟಗರು' ಸಿನಿಮಾದ ನಂತರ ಡಾಲಿ ಇಮೇಜ್ ಹೊಂದಿರುವ ಧನಂಜಯ್ ಇದೇ ಟೈಂ ನಲ್ಲಿ 'ಅರ್ಜುನ್ ರೆಡ್ಡಿ' ರೀತಿಯ ಸಿನಿಮಾ ಮಾಡುವುದು ಒಳ್ಳೆಯ ಆಲೋಚನೆ. ಇನ್ನೊಂದು ಅಂಶ ಎಂದರೆ ಈ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ಈ ಹಿಂದೆ ಒಂದು ಪೋಲ್ ಏರ್ಪಡಿಸಿತ್ತು. ಅದರಲ್ಲಿ ಅತಿ ಹೆಚ್ಚು ಓದುಗರು ಧನಂಜಯ್ 'ಅರ್ಜುನ್ ರೆಡ್ಡಿ' ಆಗಬೇಕು ಎಂದಿದ್ದರು.

'ಅರ್ಜುನ್ ರೆಡ್ಡಿ' ಸಿನಿಮಾದ ಬಗ್ಗೆ
'ಅರ್ಜುನ್ ರೆಡ್ಡಿ' ಟಾಲಿವುಡ್ ನಲ್ಲಿ ಕಳೆದ ವರ್ಷ ಬಂದ ಸೂಪರ್ ಹಿಟ್ ಸಿನಿಮಾವಾಗಿದೆ. ಈ ಸಿನಿಮಾ ಒಂದು 'ಕಲ್ಟ್ ಸಿನಿಮಾ' ಎಂದೇ ಫೇಮಸ್ ಆಗಿತ್ತು. ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ಶಾಲಿನಿ ಪಾಂಡೆ ನಟಿಸಿದ್ದರು. ಇಬ್ಬರ ಹಾಟ್ ದೃಶ್ಯಗಳು ಎಲ್ಲರ ಕಣ್ಣು ಕುಕ್ಕಿತ್ತು. ಸಿಂಪಲ್ ಕಥೆಯನ್ನು ಅದ್ಬುತವಾಗಿ ನಿರ್ದೇಶಕ ಸಂದೀಪ್ ವಂಗ ಪ್ರೆಸೆಂಟ್ ಮಾಡಿದ್ದರು.


Click it and Unblock the Notifications











