For Quick Alerts
  ALLOW NOTIFICATIONS  
  For Daily Alerts

  'ದಿಲ್ ಕಾ ರಾಜಾ' ಮತ್ತೆ ಬಂದ: ರಮ್ಯಾ ಮೇಡಂ ಕಥೆ ಏನು.?

  |
  Ramya make a comeback with Kannada Movie Dil Ka Raja.? | FILMIBEAT KANNADA

  ಕನ್ನಡ ಚಿತ್ರರಂಗಕ್ಕೆ ನಟಿ, ಮಾಜಿ ಸಂಸದೆ ರಮ್ಯಾ ಗುಡ್ ಬೈ ಹೇಳಿ ವರ್ಷಗಳೇ ಉರುಳಿವೆ. 'ಆರ್ಯನ್' ಚಿತ್ರದ ಬಳಿಕ ರಮ್ಯಾ ಗಾಂಧಿನಗರದ ಕಡೆ ಮುಖ ಮಾಡಿಲ್ಲ. ರಾಜಕೀಯ ಮತ್ತು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಸೆಲ್ ನಲ್ಲಿ ಬಿಜಿ ಇದ್ದ ರಮ್ಯಾ ಈಗ ಎಲ್ಲಿದ್ದಾರೆ, ಏನು ಮಾಡ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ.

  ಹೀಗಿರುವಾಗಲೇ, 'ದಿಲ್ ಕಾ ರಾಜ' ಚಿತ್ರ ಸದ್ದು ಮಾಡುತ್ತಿದೆ. ವರ್ಷಗಳ ಹಿಂದೆ ನಟಿ ರಮ್ಯಾ 'ದಿಲ್ ಕಾ ರಾಜ' ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಹೀರೋ ಆಗಿ ಪ್ರಜ್ವಲ್ ದೇವರಾಜ್ ಕಾಣಿಸಿಕೊಂಡಿದ್ದರು. ಇಬ್ಬರೂ ಒಟ್ಟಾಗಿ ಒಂದು ಶೆಡ್ಯೂಲ್ ನಲ್ಲಿ ಅಭಿನಯಿಸಿದ್ದರು.

  'ದಿಲ್ ಕಾ ರಾಜಾ'ನಿಗೆ ಮರುಜನ್ಮ ಕೊಡ್ತಾರಾ ರಮ್ಯಾ?'ದಿಲ್ ಕಾ ರಾಜಾ'ನಿಗೆ ಮರುಜನ್ಮ ಕೊಡ್ತಾರಾ ರಮ್ಯಾ?

  ಎಲ್ಲವೂ ಪ್ಲಾನ್ ಪ್ರಕಾರ ನಡೆಯುತ್ತಿದೆ ಎನ್ನುವಾಗಲೇ ದಿಢೀರ್ ಅಂತ 'ದಿಲ್ ಕಾ ರಾಜ' ಚಿತ್ರ ನಿಂತು ಹೋಯ್ತು. ಅಂದು 'ಆರ್ಯನ್' ಚಿತ್ರಕ್ಕೆ ಮಾತ್ರ ಡೇಟ್ಸ್ ಕೊಟ್ಟಿದ್ದ ರಮ್ಯಾ 'ದಿಲ್ ಕಾ ರಾಜ'ನ ಕಡೆ ತಿರುಗಿಯೂ ನೋಡಲಿಲ್ಲ.

  ಕ್ಲಾರಿಫಿಕೇಷನ್! 'ದಿಲ್ ಕಾ ರಾಜಾ' ಚಿತ್ರದಲ್ಲಿಲ್ಲ ಹರಿಪ್ರಿಯಾ.!ಕ್ಲಾರಿಫಿಕೇಷನ್! 'ದಿಲ್ ಕಾ ರಾಜಾ' ಚಿತ್ರದಲ್ಲಿಲ್ಲ ಹರಿಪ್ರಿಯಾ.!

  ಅವತ್ತು ನಿಂತು ಹೋಗಿದ್ದ 'ದಿಲ್ ಕಾ ರಾಜ' ಚಿತ್ರ ಇಂದು ಮತ್ತೆ ಸದ್ದು ಮಾಡುತ್ತಿದೆ. 'ದಿಲ್ ಕಾ ರಾಜ' ಚಿತ್ರದ ಲಿರಿಕಲ್ ವಿಡಿಯೋ ಸದ್ಯದಲ್ಲೇ ಬಿಡುಗಡೆ ಆಗುತ್ತಂತೆ. ಹಾಗಾದ್ರೆ, ರಮ್ಯಾ ಮೇಡಂ ಚಿತ್ರವನ್ನ ಕಂಪ್ಲೀಟ್ ಮಾಡಿ ಕೊಟ್ಟಿದ್ದಾರಾ.? ಇಲ್ಲಾಂದ್ರೆ, ಅವರ ಜಾಗಕ್ಕೆ ಬೇರೊಬ್ಬರು ಎಂಟ್ರಿಕೊಟ್ಟು 'ದಿಲ್ ಕಾ ರಾಜ' ಕಂಪ್ಲೀಟ್ ಮಾಡಿದ್ದಾರಾ.? ಈ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ, ರಮ್ಯಾ ಫ್ಯಾನ್ ಪೇಜ್ ಗಳು ಮಾತ್ರ 'ದಿಲ್ ಕಾ ರಾಜ'ನ ಗುಂಗಿನಲ್ಲಿವೆ.

  ಅಂದ್ಹಾಗೆ, 'ದಿಲ್ ಕಾ ರಾಜ' ಚಿತ್ರಕ್ಕೆ ಸೋಮನಾಥ್ ಪಿ ಪಾಟೀಲ್ ನಿರ್ದೇಶಕರು. ಸದ್ಯಕ್ಕೆ 'ದಿಲ್ ಕಾ ರಾಜ' ಲಿರಿಕಲ್ ವಿಡಿಯೋ ರಿಲೀಸ್ ಆಗಲಿದೆ ಎನ್ನಲಾಗಿದೆ. ಯಾವಾಗ ಅಂತ ಇನ್ನೂ ಬಹಿರಂಗವಾಗಿಲ್ಲ.

  English summary
  Will Kannada Actress Ramya make a comeback with Kannada Movie Dil Ka Raja.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X