»   » ರಾಧಿಕಾ ಕುಮಾರಸ್ವಾಮಿ ಬಗ್ಗೆ ಸ್ಫೋಟಗೊಂಡಿರುವ ಸುದ್ದಿ ನಿಜವೇ?

ರಾಧಿಕಾ ಕುಮಾರಸ್ವಾಮಿ ಬಗ್ಗೆ ಸ್ಫೋಟಗೊಂಡಿರುವ ಸುದ್ದಿ ನಿಜವೇ?

By: ಹರಾ
Subscribe to Filmibeat Kannada

ಗಾಂಧಿನಗರದ ಗಲ್ಲಿಗಲ್ಲಿಗಳನ್ನ ಒಂದು ರೌಂಡ್ ಹಾಕೊಂಡ್ ಬಂದ್ರೆ ಸಾಕು. ಕಂತೆಗಳ ಲೆಕ್ಕದಲ್ಲಿ ಸುದ್ದಿಗಳು ಸಿಗ್ತವೆ. ಆದ್ರೆ, ಆ ಸುದ್ದಿಗಳ ಸತ್ಯಾಸತ್ಯತೆಗಳನ್ನ ಬಯಲಿಗೆಳೆಯುವುದು ಕೊಂಚ ಕಷ್ಟ.

ಇದೀಗ ಬ್ರೇಕ್ ಆಗಿರುವ ಬ್ರೇಕಿಂಗ್ ನ್ಯೂಸ್ ಕೂಡ ಅಂತದ್ದೆ. ಈ ಸುದ್ದಿ ಕೇಳಿ ನಾವು ಕೂಡ ತಬ್ಬಿಬ್ಬಾಗಿದ್ದೀವಿ. ಅಂತಹ ಬಿಸಿ ಬಿಸಿ ಸುದ್ದಿ ಏನು ಅನ್ನೋದಕ್ಕಿಂತ ಯಾರ ಬಗ್ಗೆ ಅನ್ನೋದು ಕೂಡ ಅಷ್ಟೆ ಶಾಕಿಂಗ್.! [ರೀಲ್ ನಲ್ಲಿ ರಾಧಿಕಾ ಕುಮಾರಸ್ವಾಮಿ 'ರಿಯಲ್' ಲೈಫ್ ಸ್ಟೋರಿ.?]

ಈಗಷ್ಟೆ ಸ್ಫೋಟಗೊಂಡಿರುವ ಸುದ್ದಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪತ್ನಿ, ನಟಿ ಶ್ರೀಮತಿ ರಾಧಿಕಾ ಕುಮಾರಸ್ವಾಮಿಯವರ ಕುರಿತು. ಮುಂದೆ ಓದಿ.....

ರಾಜಕೀಯಕ್ಕೆ ಧುಮುಕಲಿದ್ದಾರಂತೆ ರಾಧಿಕಾ ಕುಮಾರಸ್ವಾಮಿ.!

ನಟಿ ಹಾಗೂ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ರಾಜಕೀಯಕ್ಕೆ ಕಾಲಿಡಲಿದ್ದಾರಂತೆ. ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ದೊಡ್ಡ ಅಭಿಮಾನಿ ಬಳಗ ಹೊಂದಿರುವ ರಾಧಿಕಾ ಕುಮಾರಸ್ವಾಮಿ ಪಾಲಿಟಿಷಿಯನ್ ಆಗಲಿದ್ದಾರಂತೆ. ಅದು ಜೆಡಿಎಸ್ ಪಕ್ಷದಿಂದ ಅಂತ ನೀವು ಅಂದುಕೊಂಡರೆ, ನಿಮ್ಮ ಊಹೆ ತಪ್ಪು. ಅಷ್ಟಕ್ಕೂ ಸುದ್ದಿ ಇಷ್ಟೇ ಆಗಿದ್ದರೆ, ನಾವು ಕೂಡ ತಬ್ಬಿಬ್ಬಾಗುತ್ತಿರಲಿಲ್ಲ.! ಸ್ಟೋರಿಯಲ್ಲಿ ಮೇಜರ್ ಟ್ವಿಸ್ಟ್ ಇರುವುದೇ ಇಲ್ಲಿ. ಅದೇನು ಅಂತ ತಿಳಿದುಕೊಳ್ಳುವುದಕ್ಕೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

ಬಿಜೆಪಿ ಪಕ್ಷ ಸೇರ್ತಾರಂತೆ ರಾಧಿಕಾ.!

ಶ್ರೀಮತಿ ರಾಧಿಕಾ ಕುಮಾರಸ್ವಾಮಿ ಬಿಜೆಪಿ ಪಕ್ಷ ಸೇರುತ್ತಾರಂತೆ.! ಹೀಗೂ ಉಂಟೆ..? ಅಂತ ನೀವೀಗ ಬಾಯಿ ಮೇಲೆ ಬೆರಳಿಡಬೇಡಿ.

ರಾಧಿಕಾ ಕುಮಾರಸ್ವಾಮಿ ದಾಂಪತ್ಯದಲ್ಲೇನಾಗಿದೆ?

ಅಷ್ಟಕ್ಕೂ ನಟಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ಇತ್ತೀಚೆಗೆ ಅಂತೆ-ಕಂತೆಗಳ ಹಾವಳಿ ಹೆಚ್ಚಾಗಿದೆ. ರಾಧಿಕಾ ಕುಮಾರಸ್ವಾಮಿ ರವರ ದಾಂಪತ್ಯ ಜೀವನದಲ್ಲಿ ಆಗಿದೆ ಎನ್ನಲಾಗಿರುವ ಬಿರುಕಿನ ಬಗ್ಗೆ ದಿನಕ್ಕೊಂದು ಗಾಸಿಪ್ ಸುದ್ದಿ ಸ್ಫೋಟವಾಗುತ್ತಿದೆ. [ನನ್ನ ಮಗಳೇ ನಂಗೆ ಬಿಗ್ ಗಿಫ್ಟ್ - ರಾಧಿಕಾ ಕುಮಾರಸ್ವಾಮಿ]

ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರಂತೆ.!

ಎಲ್ಲಾ ಗಾಸಿಪ್ ಗಳ ಮುಂದುವರಿದ ಭಾಗವಾಗಿ, ನಟಿ ರಾಧಿಕಾ ಕುಮಾರಸ್ವಾಮಿ ಬಿಜೆಪಿ ಸೇರ್ತಾರೆ ಅಂತ ಬ್ರೇಕಿಂಗ್ ನ್ಯೂಸ್ ಬಂದಿದೆ. ಕನ್ನಡ ಚಿತ್ರರಂಗ ಬಿಟ್ಟು, ಕಮಲ ಪಾಳಯ ಸೇರಲಿದ್ದಾರಂತೆ ರಾಧಿಕಾ ಮೇಡಂ.

ಮಂಗಳೂರಿನಲ್ಲಿದ್ದಾರಾ ರಾಧಿಕಾ?

ದಾಂಪತ್ಯ ಜೀವನದಲ್ಲಾದ ಒಡಕಿನಿಂದ ಬೆಂಗಳೂರು ಬಿಟ್ಟು ಮಂಗಳೂರಿಗೆ ಶಿಫ್ಟ್ ಆಗಿದ್ದಾರಂತೆ ರಾಧಿಕಾ ಕುಮಾರಸ್ವಾಮಿ. ಹೀಗಾಗಿ ಅವರನ್ನ ತಮ್ಮ ಪಕ್ಷಕ್ಕೆ ಕರೆತರುವ ಬಗ್ಗೆ ಬಿಜೆಪಿಯವರು ಸಂಪರ್ಕಿಸಿದ್ದಾರಂತೆ.

ಯಾವುದು ಸತ್ಯ.?

ಈ ಅಂತೆಗಳಲ್ಲಿ ಯಾವುದು ಸತ್ಯ, ಯಾವುದು ಮಿಥ್ಯ ನಮಗಂತೂ ಗೊತ್ತಿಲ್ಲ. ಕ್ಲಿಯರ್ ಮಾಡಿಕೊಳ್ಳೋಣ ಅಂತ ಶ್ರೀಮತಿ ರಾಧಿಕಾ ಕುಮಾರಸ್ವಾಮಿ ರವರಿಗೆ ಫೋನ್ ಮಾಡಿದ್ರೆ, ಸಂಪರ್ಕಕ್ಕೆ ಸಿಗುತ್ತಿಲ್ಲ.!

English summary
According to the Grapevine, Kannada Actress Radhika Kumaraswamy will enter politics. BJP Leaders have contacted Radhika Kumaraswamy. But how far it is true is a question as of now.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada