»   » ನಟಿ ರಮ್ಯಾ ಬಗ್ಗೆ ಗಾಳಿಯಲ್ಲಿ ತೇಲಿಬಂದು ಕಿವಿಗೆ ಬಿದ್ದ ಸುದ್ದಿ ಇದು.!

ನಟಿ ರಮ್ಯಾ ಬಗ್ಗೆ ಗಾಳಿಯಲ್ಲಿ ತೇಲಿಬಂದು ಕಿವಿಗೆ ಬಿದ್ದ ಸುದ್ದಿ ಇದು.!

By: ಒನ್ಇಂಡಿಯಾ ಪ್ರತಿನಿಧಿ
Subscribe to Filmibeat Kannada

ಕಳೆದ ವರ್ಷ ಪಾಕಿಸ್ತಾನ... ಮಂಗಳೂರು... ನರಕ... ಅಂತೆಲ್ಲ ಹೇಳಿ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಸ್ಯಾಂಡಲ್ ವುಡ್ ಕ್ವೀನ್... ಕಾಂಗ್ರೆಸ್ ರಾಜಕಾರಣಿ ರಮ್ಯಾ ಕಳೆದ ಮೂರ್ನಾಲ್ಕು ತಿಂಗಳಿನಿಂದ ಸುದ್ದಿ ಮಾಡಿದ್ದೇ ಕಡಿಮೆ.!

ಕಳೆದ ಮೂರು ತಿಂಗಳಿನಲ್ಲಿ ಅನಾರೋಗ್ಯದಿಂದ ಎರಡೆರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದ ರಮ್ಯಾ ಬಗ್ಗೆ ಈಗ ಹೊಸ ಗಾಸಿಪ್ ಕೇಳಿಬರುತ್ತಿದೆ. ಆ ಗಾಸಿಪ್ ನಿಜವೇ ಆದರೆ, ಎಲ್ಲರೂ ಬಾಯಿ ಮೇಲೆ ಬೆರಳಿಡುವುದರಲ್ಲಿ ಸಂದೇಹವೇ ಬೇಡ.!

ರಮ್ಯಾ ಬಗ್ಗೆ ಹೊಸ ಗಾಸಿಪ್

ನಟಿ/ರಾಜಕಾರಣಿ ರಮ್ಯಾ ಬಗ್ಗೆ ಹೊಸ ಗಾಸಿಪ್ ಎಂದ ಕೂಡಲೆ 'ವೈಯುಕ್ತಿಕ ವಿಷಯ' ಅಂದುಕೊಳ್ಳಬೇಡಿ. ರಾಜಕೀಯ ವಲಯದಲ್ಲಿ ರಮ್ಯಾ ಕುರಿತು ಹೊಸ ಗುಲ್ಲು ಹಬ್ಬಿದೆ. [ನಟಿ ರಮ್ಯಾ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಡಿಸ್ಚಾರ್ಜ್]

ಏನು ಅಂತಹ ಸುದ್ದಿ.?

ಕಾಂಗ್ರೆಸ್ ನ ಮಾಜಿ ಸಂಸದೆ ರಮ್ಯಾ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ ಎಂಬುದೇ ಹೊಸ 'ಗಾಸಿಪ್'.! ['ಎಲ್ಲಿದ್ದಾರೆ ರಮ್ಯಾ' ಎನ್ನುತ್ತಿದ್ದವರಿಗೆಲ್ಲ ಇಲ್ಲೊಂದು ಬ್ರೇಕಿಂಗ್ ನ್ಯೂಸ್]

ಎಸ್.ಎಂ.ಕೃಷ್ಣ ಹಾದಿಯಲ್ಲಿ ರಮ್ಯಾ.?

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬಿಜೆಪಿಗೆ ಸೇರ್ಪಡೆ ಆಗುತ್ತಿರುವ ಸುದ್ದಿಯ ಬೆನ್ನಲ್ಲೇ, ರಮ್ಯಾ ಕೂಡ ಅದೇ ಹಾದಿ ಹಿಡಿದಿದ್ದಾರೆ ಎಂಬ ಊಹಾಪೋಹ ಮಂಡ್ಯದಲ್ಲಿ ದಟ್ಟವಾಗಿದೆ. [ನಟಿ ರಮ್ಯಾ ನಾಪತ್ತೆ.! ಇಡೀ ದೇಶ ಕೇಳುತ್ತಿದೆ ಕಾಂಗ್ರೆಸ್ ಯುವರಾಣಿ ಈಗೆಲ್ಲಿ.?]

ಅಂಬರೀಶ್ ಬಗ್ಗೆ ಕೂಡ ಇದೇ ನ್ಯೂಸು.!

ನಟಿ ರಮ್ಯಾ ಮಾತ್ರ ಅಲ್ಲ... ಮಂಡ್ಯದ ಗಂಡು... ಕಾಂಗ್ರೆಸ್ ಶಾಸಕ ಅಂಬರೀಶ್ ಕೂಡ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರೆ. ಹಾಗೆ, ಕಮಲ ಪಕ್ಷ ಸೇರಲು ಅಂಬರೀಶ್ ಒಂದು ಕಂಡೀಷನ್ ಹಾಕಿದ್ದಾರೆ ಎಂತಲೂ ನ್ಯೂಸ್ ಹರಿದಾಡುತ್ತಿದೆ.

ಅಂಬರೀಶ್ ಹಾಕಿರುವ ಕಂಡೀಷನ್ ಏನು.?

''ಪತ್ನಿ ಸುಮಲತಾ ರವರಿಗೆ ಬೆಂಗಳೂರಿನಿಂದ ಸ್ಪರ್ಧಿಸಲು ಟಿಕೆಟ್ ನೀಡಿದರೆ ನಾನು ಬಿಜೆಪಿ ಸೇರುತ್ತೇನೆ'' ಎಂಬ ಕಂಡೀಷನ್ ನೊಂದಿಗೆ ಅಂಬರೀಶ್ ಬಿಜೆಪಿ ಸೇರಲು ಮುಂದಾಗಿದ್ದಾರಂತೆ ಎಂಬ ಅಂತೆ-ಕಂತೆ ಎಲ್ಲರ ಬಾಯಲ್ಲೂ ಕೇಳಿಬರುತ್ತಿದೆ. [ನಟಿ ಸುಮಲತಾ ಅಂಬರೀಶ್ ಕುರಿತ ಈ ಸುದ್ದಿಯ ಹಿಂದೆ 'ರಾಜಕೀಯ' ಐತೆ.!]

ಸುಮಲತಾ ಕೂಡ ಬಿಜೆಪಿಗೆ.?

ರಾಜಕೀಯಕ್ಕೆ ಧುಮುಕಲು ರೆಡಿ ಇರುವ ಸುಮಲತಾ ಬಿಜೆಪಿ ಸೇರುವ ಬಗ್ಗೆ ಎಲ್ಲೂ ತುಟಿಕ್ ಪಿಟಿಕ್ ಎಂದಿಲ್ಲ.

ರಮ್ಯಾ ಕೂಡ ಮಾತನಾಡಿಲ್ಲ.!

ಇನ್ನೂ ಇದೇ ವಿಚಾರದ ಕುರಿತಾಗಿ ನಟಿ ರಮ್ಯಾ ಕೂಡ ಇನ್ನೂ ಯಾವುದೇ ಸ್ಪಷ್ಟೀಕರಣ ಕೊಟ್ಟಿಲ್ಲ.

ಆಗಲೇ ವಿರೋಧ ವ್ಯಕ್ತವಾಗಿದೆ

ನಟಿ ರಮ್ಯಾ ಬಿಜೆಪಿಗೆ ಸೇರ್ಪಡೆ ಆಗಲಿದ್ದಾರೆ ಎಂಬ ಊಹೆ ದಟ್ಟವಾಗುತ್ತಿರುವಾಗಲೇ ಮಂಡ್ಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.

ಆತ್ಮಹತ್ಯೆ ಬೆದರಿಕೆ

ರಮ್ಯಾ ರವರನ್ನ ಬಿಜೆಪಿಗೆ ಸೇರಿಸಿಕೊಂಡರೆ, ಮಂಡ್ಯದ ಬಿಜೆಪಿ ಕಚೇರಿ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಂಡ್ಯ ಬಿಜೆಪಿ ಕಾರ್ಯಕರ್ತರು ಬೆದರಿಕೆ ಒಡ್ಡಿದ್ದಾರೆ.

ಸೈಲೆಂಟ್ ಆಗಿರುವ ರಮ್ಯಾ

ತಮ್ಮ ಬಗ್ಗೆ ಇಷ್ಟೆಲ್ಲ ಸುದ್ದಿ ಆಗುತ್ತಿದ್ದರೂ, ರಮ್ಯಾ ಮಾತ್ರ ಸೈಲೆಂಟ್ ಆಗಿದ್ದಾರೆ. ಟ್ವಿಟ್ಟರ್ ನಲ್ಲೂ ಆಕ್ಟೀವ್ ಆಗಿಲ್ಲ. ರಮ್ಯಾ ಮನಸ್ಸಲ್ಲಿ ಏನು ಓಡ್ತಿದ್ಯೋ.. ಯಾರಿಗೂ ಗೊತ್ತಿಲ್ಲ.

English summary
There are speculations that Kannada Actress, Congress Politician Ramya might follow Former Chief Minister S.M.Krishna's footsteps and join BJP.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada