12 ವರ್ಷಗಳ ಬಳಿಕ ದರ್ಶನ್ ಗೆ ರಮ್ಯಾ ಜೋಡಿ ?

Recommended Video

ರಮ್ಯಾ- ದರ್ಶನ್ ಒಂದಾಗಿ ಸಿನಿಮಾ ಮಾಡಲಿದ್ದಾರಾ..? | Filmibeat Kannada

ನಟಿ ರಮ್ಯಾ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಾರೆ ಎನ್ನುವ ಸುದ್ದಿ ಪದೇ ಪದೇ ಕೇಳಿ ಬರುತ್ತಿದೆ. ಈಗ ಮತ್ತೆ ರಮ್ಯಾ ಸಿನಿಮಾ ಮಾಡುತ್ತಾರೆ ಎನ್ನುವ ಟಾಕ್ ಸ್ಯಾಂಡಲ್ ವುಡ್ ಅಂಗಳದಲ್ಲಿ ಶುರುವಾಗಿದೆ.

ವಿಶೇಷ ಅಂದರೆ, ನಟ ದರ್ಶನ್ ಜೊತೆಗೆ ರಮ್ಯಾ ಈಗ ನಟಿಸುತ್ತಾರೆ ಎನ್ನುವ ಸುದ್ದಿ ಕೇಳಿ ಬಂದಿದೆ. ಈ ಹಿಂದೆ 'ದತ್ತ' ಸಿನಿಮಾದಲ್ಲಿ ಈ ಜೋಡಿ ನಟಿಸಿದ್ದು, 12 ವರ್ಷಗಳ ಬಳಿಕ ಮತ್ತೆ ಒಂದೇ ಸಿನಿಮಾದಲ್ಲಿ ದರ್ಶನ್ ಹಾಗೂ ರಮ್ಯಾ ಒಂದಾಗುತ್ತಾರೆ ಎನ್ನಲಾಗುತ್ತಿದೆ.

ಅಂದಹಾಗೆ, ದರ್ಶನ್ ಅವರ ಯಾವ ಸಿನಿಮಾದಲ್ಲಿ ನಟಿ ರಮ್ಯಾ ನಟಿಸುತ್ತಾರೆ?, ಹಾಗಾದರೆ, ಈ ಬಾರಿ ರಮ್ಯಾ ಕಮ್ ಬ್ಯಾಕ್ ಮಾಡುವ ಸುದ್ದಿ ನಿಜವೇ ಎಲ್ಲ ಪ್ರಶ್ನೆಗೆ ಉತ್ತರ ಮುಂದಿದೆ ಓದಿ..

ಮದಕರಿಯ ರಾಣಿ

ಮದಕರಿಯ ರಾಣಿ

ನಟ ದರ್ಶನ್ ಅವರ 'ಗಂಡುಗಲಿ ಮದಕರಿ ನಾಯಕ' ಸಿನಿಮಾ ಅನೇಕ ವಿಚಾರಗಳಿಗೆ ಈಗ ಹೆಚ್ಚು ಸುದ್ದಿ ಮಾಡುತ್ತಿದೆ. ಜೊತೆಗೆ ಈ ಚಿತ್ರದ ನಾಯಕಿಯ ಬಗ್ಗೆ ಈಗ ಕುತೂಹಲ ಹುಟ್ಟಿದೆ. ಈ ಸಿನಿಮಾದಲ್ಲಿ ಮದಕರಿಯ ರಾಣಿಯಾಗಿ ರಮ್ಯಾ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

12 ವರ್ಷಗಳ ನಂತರ

12 ವರ್ಷಗಳ ನಂತರ

ನಟ ದರ್ಶನ್ ಹಾಗೂ ರಮ್ಯಾ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದು, 'ದತ್ತ' ಸಿನಿಮಾದಲ್ಲಿ. ಆ ಸಿನಿಮಾ 2006ರಲ್ಲಿ ತೆರೆಗೆ ಬಂದಿತ್ತು. ಇದೀಗ 12 ವರ್ಷಗಳ ನಂತರ ಮತ್ತೆ ದರ್ಶನ್ ಮತ್ತು ರಮ್ಯಾ ಒಟ್ಟಿಗೆ ಸಿನಿಮಾ ಮಾಡುತ್ತಾರ ಎನ್ನುವ ನಿರೀಕ್ಷೆ ಹುಟ್ಟಿಕೊಂಡಿದೆ.

ಉತ್ತಮ ಆಯ್ಕೆ

ಉತ್ತಮ ಆಯ್ಕೆ

ನಟಿ ರಮ್ಯಾ ಕಮ್ ಬ್ಯಾಕ್ ಸಿನಿಮಾ ಆಗಲು ಇದೊಂದು ಒಳ್ಳೆಯ ಅವಕಾಶ. ಇದೊಂದು ಐತಿಹಾಸಿಕ ಸಿನಿಮಾವಾಗಿದ್ದು, ರಮ್ಯಾ ಪಾತ್ರಕ್ಕೂ ಕೂಡ ಪ್ರಾಮುಖ್ಯತೆ ಇರಬಹುದು. ಒಂದು ಒಳ್ಳೆಯ ಪಾತ್ರದ ಮೂಲಕ ರಮ್ಯಾ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಬಹುದು. ಅಲ್ಲದೆ, 'ನಾಗರಹಾವು' ನಂತರ ರಮ್ಯಾ ನಟಿಸುತ್ತಿರುವ ಸಿನಿಮಾ ಇದಾಗಲಿದೆ.

ಯಾವುದು ಅಂತಿಮ ಆಗಿಲ್ಲ

ಯಾವುದು ಅಂತಿಮ ಆಗಿಲ್ಲ

ರಮ್ಯಾ ಸಿನಿಮಾದಲ್ಲಿ ನಟಿಸುತ್ತಾರ ಇಲ್ವಾ ಎನ್ನುವ ಬಗ್ಗೆ ಇನ್ನೂ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಹಾಗೆನಾದರೂ, ರಮ್ಯಾ ಈ ಚಿತ್ರದಲ್ಲಿ ನಟಿಸಿದರೆ ನಿಜಕ್ಕೂ ಅವರ ಅಭಿಮಾನಿಗಳಿಗೆ ಸಖತ್ ಸಂತೋಷ ಆಗುತ್ತದೆ.

ರಾಕ್‌ ಲೈನ್ ನಿರ್ಮಾಣದ ಅದ್ದೂರಿ ಸಿನಿಮಾ

ರಾಕ್‌ ಲೈನ್ ನಿರ್ಮಾಣದ ಅದ್ದೂರಿ ಸಿನಿಮಾ

ಈ ಸಿನಿಮಾವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ರಾಜೇಂದ್ರ ಸಿಂಗ್ ಬಾಬು ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ದೊಡ್ಡ ಬಜೆಟ್ ನ ಸಿನಿಮಾವಾಗಿದ್ದು, ಚಿತ್ರ ದರ್ಶನ್ ಕೆರಿಯರ್ ನ ಪ್ರಮುಖ ಚಿತ್ರಗಳ ಪೈಕಿ ಒಂದಾಗಲಿದೆಯಂತೆ.

ಒಂದೇ ರೀತಿಯ ಚಿತ್ರದ ಹಿಂದೆ ದರ್ಶನ್, ಸುದೀಪ್

ಒಂದೇ ರೀತಿಯ ಚಿತ್ರದ ಹಿಂದೆ ದರ್ಶನ್, ಸುದೀಪ್

ಒಂದು ಕಡೆ ದರ್ಶನ್ ಮದಕರಿ ನಾಯಕರ ಬಗ್ಗೆ ಸಿನಿಮಾ ಮಾಡುತ್ತಿದ್ದರೆ, ಅತ್ತ ಸುದೀಪ್ ಕೂಡ ದುರ್ಗದ ಹುಲಿ ಬಗ್ಗೆ ಸಿನಿಮಾ ಮಾಡುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ಸುದೀಪ್ ಮಾತುಕತೆ ನಡೆಸಿದ್ದು, ಇಬ್ಬರ ಕಥೆಯಲ್ಲಿ ವ್ಯತ್ಯಾಸ ಇರಲಿದೆಯಂತೆ.

More from Filmibeat

English summary
Will kannada actress Ramya play the lead role in Darshan's 'Gandugali Madakari Nayaka' movie?. The movie is producing by Rockline Venkatesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X