»   » ಪುನೀತ್, ಗಣೇಶ್ ನಂತರ ಡಿ ಬಾಸ್ ಜೊತೆ ರಶ್ಮಿಕಾ ನಟನೆ ?

ಪುನೀತ್, ಗಣೇಶ್ ನಂತರ ಡಿ ಬಾಸ್ ಜೊತೆ ರಶ್ಮಿಕಾ ನಟನೆ ?

Posted By:
Subscribe to Filmibeat Kannada

ನಟಿ ರಶ್ಮಿಕಾ ಮಂದಣ್ಣಗೆ ಸಿನಿಮಾಗಳ ಅವಕಾಶಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲಿಯೂ ಅವರು ಕೆಲ ಸಿನಿಮಾ ಮಾಡುತ್ತಿದ್ದಾರೆ. ಮೊದಲ ಸಿನಿಮಾ 'ಕಿರಿಕ್ ಪಾರ್ಟಿ' ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ರಶ್ಮಿಕಾ ನಟಿಸಿದರು. ಅದರ ಹಿಂದೆಯೇ ಗಣೇಶ್ ಜೊತೆ ಸೇರಿ 'ಚಮಕ್' ಕೊಟ್ಟಿರು. ಆದರೆ ಇದೀಗ ದರ್ಶನ್ ಜೊತೆ ರಶ್ಮಿಕಾ ನಟನೆ ಮಾಡುವ ಸುದ್ದಿ ಹರಿದಾಡಿದೆ.

ರಶ್ಮಿಕಾ ತಮ್ಮ ಪ್ರತಿಭೆ ಹಾಗೂ ಅದೃಷ್ಟ ಎರಡನ್ನು ಜೊತೆ ಇಟ್ಟುಕೊಂಡು ಇಂಡಸ್ಟ್ರಿಗೆ ಬಂದರು. ಒಂದೇ ಸಿನಿಮಾ ಮಾಡಿ ಆ ಬಳಿಕ ದೊಡ್ಡ ನಟರ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿದ್ದರು. ಈಗ ಅದೇ ರೀತಿ ನಟ ದರ್ಶನ್ ಜೊತೆ ಸಿನಿಮಾ ಮಾಡುವ ಅವಕಾಶ ರಶ್ಮಿಕಾಗೆ ಬಂದಿದೆಯಂತೆ. ಅಂದಹಾಗೆ, ದರ್ಶನ್ ಅವರ ಯಾವ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಾರೆ ಎನ್ನುವ ವಿವರ ಮುಂದಿದೆ ಓದಿ...

ದರ್ಶನ್ 51ನೇ ಸಿನಿಮಾ

ನಟ ದರ್ಶನ್ ಅವರ 51ಕ್ಕೆ ಚಿತ್ರಕ್ಕೆ ಇನ್ನು ನಾಯಕಿಯ ಆಯ್ಕೆ ಆಗಿಲ್ಲ. ಆದರೆ ಈಗ ಈ ಸಿನಿಮಾದಲ್ಲಿ ದರ್ಶನ್ ಜೊತೆ ರಶ್ಮಿಕಾ ಮಂದಣ್ಣ ನಟಿಸುತ್ತಾರೆ ಎನ್ನುವ ಸುದ್ದಿ ಹರಿದಾಡಿದೆ.

ಇಬ್ಬರು ನಾಯಕಿಯರು

ದರ್ಶನ್ ಅವರ ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇದ್ದು, ರಚಿತಾ ರಾಮ್ ಮತ್ತು ರಶ್ಮಿಕಾ ಮಂದಣ್ಣ ಸಿನಿಮಾದ ನಾಯಕಿ ಆಗಲಿದ್ದಾರೆ ಎಂಬ ಗುಸು ಗುಸು ಕೇಳಿ ಬಂದಿದೆ.

ಮಾತುಕತೆ ಹಂತದಲ್ಲಿದೆ

ಸದ್ಯ ಚಿತ್ರತಂಡ ರಶ್ಮಿಕಾ ಮಂದಣ್ಣ ಜೊತೆ ಮಾತುಕತೆ ನಡೆಸುತ್ತಿದ್ದು, ಇನ್ನೂ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುವುದು ಅಧಿಕೃತವಾಗಿಲ್ಲ. ರಶ್ಮಿಕಾ ಮಾತ್ರವಲ್ಲದೆ ಇನ್ನು ಕೆಲ ನಟಿಯರನ್ನು ಕೂಡ ಈ ಪಾತ್ರಕ್ಕಾಗಿ ಚಿತ್ರತಂಡ ಸಂಪರ್ಕ ಮಾಡಿದೆಯಂತೆ.

ಸಂಕ್ರಾಂತಿ ಕಿರುತೆರೆಯಲ್ಲಿ ಕ್ರಾಂತಿ ಮಾಡಲಿದ್ದಾರೆ ದರ್ಶನ್ ಚಕ್ರವರ್ತಿ

ಪಿ.ಕುಮಾರ್ ನಿರ್ದೇಶನ

'ವಿಷ್ಣುವರ್ಧನ' ಸಿನಿಮಾ ಖ್ಯಾತಿಯ ನಿರ್ದೇಶಕ ಪಿ.ಕುಮಾರ್ ದರ್ಶನ್ 51ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಶೈಲಜಾ ನಾಗ್ ಮತ್ತು ಬಿ ಸುರೇಶ್ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

ರಾಮೋಜಿ ಫಿಲ್ಮ್ ಸಿಟಿಗೆ ಹೋಗುವುದು 'ಶಾಪ'ವೆಂದ ದರ್ಶನ್

ರಶ್ಮಿಕಾ ಮಂದಣ್ಣ ಸಿನಿಮಾಗಳು

ಸದ್ಯ ರಶ್ಮಿಕಾ ತಮ್ಮ ಬೇರೆ ಬೇರೆ ಸಿನಿಮಾದಲ್ಲಿ ಬಿಜಿ ಇದ್ದಾರೆ. 'ಚಮಕ್' ನಂತರ ಅವರ ತೆಲುಗು ಸಿನಿಮಾ 'ಚಲೋ' ಬಿಡುಗಡೆಗೆ ಸಿದ್ಧವಾಗಿದೆ. ಅದರ ಜೊತೆಗೆ 'ಚಮಕ್' ಚಿತ್ರದ ತೆಲುಗು ರಿಮೇಕ್ ಚಿತ್ರದಲ್ಲಿ ಅವರೇ ನಟಿಸುವ ಸಾಧ್ಯತೆ ಇದೆ.

English summary
According to source kannada actress Rashmika Mandanna will play a lead role in Challenging Star Darshan' 51th movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X