»   » 'ಗಬ್ಬರ್ ಸಿಂಗ್' ಆಗ್ತಾರಾ ಮಾಸ್ ಮಾಹಾರಾಜ?

'ಗಬ್ಬರ್ ಸಿಂಗ್' ಆಗ್ತಾರಾ ಮಾಸ್ ಮಾಹಾರಾಜ?

Posted By:
Subscribe to Filmibeat Kannada

ಟಾಲಿವುಡ್ ನಲ್ಲಿ 'ಗಬ್ಬರ್ ಸಿಂಗ್' ಎಂದೇ ಖ್ಯಾತರಾದವರು ಪವರ್ ಸ್ಟಾರ್ ಪವನ್ ಕಲ್ಯಾಣ್. ಅಷ್ಟರಮಟ್ಟಿಗೆ ಪವನ್ ಕಲ್ಯಾಣ್ ಟಿಟೌನ್ ನಲ್ಲಿ ಜನಪ್ರಿಯ. ಎರಡು ವರ್ಷಗಳ ಹಿಂದೆ ತೆರೆಕಂಡಿದ್ದ 'ಗಬ್ಬರ್ ಸಿಂಗ್' ಚಿತ್ರದ ಎರಡನೇ ಅವತರಣಿಕೆಯನ್ನ ಪವನ್ ಕಲ್ಯಾಣ್ ಇದೀಗ ಅನೌನ್ಸ್ ಮಾಡಿದ್ದಾರೆ.

ಇದೇ 'ಗಬ್ಬರ್ ಸಿಂಗ್' ಆಗುವುದಕ್ಕೆ ಮಾಸ್ ಮಹಾರಾಜ ರವಿತೇಜ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನುವುದು ಟಾಲಿವುಡ್ ಅಂಗಳದಿಂದ ಬಂದಿರುವ ಖಾಸ್ ಖಬರ್. ಹಾಗಾದ್ರೆ, ಪವರ್ ಸ್ಟಾರ್ ಜಾಗಕ್ಕೆ ಮಾಸ್ ಮಹಾರಾಜ ಬಂದಿದ್ದಾರೆ ಅಂತಲ್ಲ. ಪವನ್ ಕಲ್ಯಾಣ್ ಬೇಡ ಅಂತ ಬಿಟ್ಟಿರೋ ಸ್ಕ್ರಿಪ್ಟ್ ರವಿತೇಜಾ ಪಾಲಾಗಿದೆ. [ಅಲ್ಲು ಅರ್ಜುನ್ ಜೊತೆ ರಿಯಲ್ ಸ್ಟಾರ್ ಉಪೇಂದ್ರ]

Tollywood actor Raviteja

ಹೌದು, 2002ರಲ್ಲಿ ತೆರೆಕಂಡ 'ಗಬ್ಬರ್ ಸಿಂಗ್' ಹಿಟ್ ಆದ್ಮೇಲೆ, ಗಬ್ಬರ್ ಸಿಂಗ್-2 ಚಿತ್ರವನ್ನ ನಿರ್ದೇಶಕ ಸಂಪತ್ ನಂದಿಯೊಂದಿಗೆ ಮಾಡುವುದಾಗಿ ಪವನ್ ಬಹಿರಂಗ ಪಡಿಸಿದ್ರು. ಅದರಂತೆ ಸಂಪತ್ ನಂದಿ ಧಾಮ್ ಧೂಮ್ ಆಗಿ ಗಬ್ಬರ್ ಸಿಂಗ್-2 ರೆಡಿಮಾಡಿದ್ರು. ಆದ್ರೆ, ಅದ್ಯಾಕೋ ಏನೋ, ಸಂಪತ್ ನಂದಿ ರೆಡಿ ಮಾಡಿದ್ದ ಕಥೆ ಪವನ್ ಕಲ್ಯಾಣ್ ಗೆ ಇಷ್ಟವಾಗ್ಲಿಲ್ಲವಂತೆ.

ಇದೀಗ ಸಂಪತ್ ನಂದಿ ಜಾಗಕ್ಕೆ ಕೆ.ರವೀಂದ್ರ (ಬಾಬ್ಬಿ)ಯನ್ನ ಕರೆತಂದಿರುವ ಪವನ್, ಗಬ್ಬರ್ ಸಿಂಗ್-2ಗೆ ಚಾಲನೆ ನೀಡಿದ್ದಾಗಿದೆ. ಡಿಸೆಂಬರ್ ನಲ್ಲಿ ಚಿತ್ರ ಸೆಟ್ಟೇರುತ್ತೆ ಕೂಡ. ಆದ್ರೆ ಸಂಪತ್ ರೆಡಿಮಾಡಿದ್ದ ಕಥೆಯ ಗತಿಯೇನು..?

ಅದಕ್ಕೂ ಒಂದು ಐಡಿಯಾ ಮಾಡಿರೋ ಸಂಪತ್, ಪವನ್ ಗಾಗಿ ರೆಡಿಮಾಡಿದ್ದ ಗಬ್ಬರ್ ಸಿಂಗ್-2 ಕಥೆಯನ್ನ ರವಿತೇಜಾಗೆ ಹೇಳಿದ್ದಾರೆ. ಹಿಂದು ಮುಂದು ನೋಡದೆ ರವಿತೇಜಾ ಚಿತ್ರದಲ್ಲಿ ನಟಿಸುವುದಕ್ಕೆ ಜೈ ಅಂದಿದ್ದಾರಂತೆ.

ಪವನ್ ಬಿಟ್ಟ ಕಥೆಯನ್ನ ರವಿತೇಜಾ ಒಪ್ಪಿಕೊಳ್ಳುವುದರ ಹಿಂದೆಯೂ ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇದೆ. ರವಿತೇಜಾ ವೃತ್ತಿಬದುಕಿನ ಹಿಟ್ ಸಿನಿಮಾಗಳಾದ 'ಈಡಿಯೆಟ್', ''ಅಮ್ಮಾ ನಾನ್ನ ಒಕ ತಮಿಳ್ ಅಮ್ಮಾಯಿ'', ಪವನ್ ರಿಜೆಕ್ಟ್ ಮಾಡಿದ ಚಿತ್ರಗಳೇ! ''ಪವನ್ ಕೃಪೆ''ಯಿಂದ ಇದೇ ಪಟ್ಟಿಗೆ ಹೊಸ ಚಿತ್ರ ಸೇರ್ಪಡೆಯಾಗುತ್ತಿರುವುದರಿಂದ ರವಿತೇಜಾ ಖುಷಿಯಿಂದ ಒಪ್ಪಿಕೊಂಡಿದ್ದಾರಂತೆ. ಅಲ್ಲಿಗೆ ಟಾಲಿವುಡ್ ಗೆ ಗಬ್ಬರ್ ಸಿಂಗ್-2 ಜೊತೆಗೆ ಬಬ್ಬರ್ ಸಿಂಗ್ ಬರೋದು ಗ್ಯಾರೆಂಟಿ ಅಂತಲೇ ಲೆಕ್ಕ. (ಏಜೆನ್ಸೀಸ್)

English summary
Tollywood Actor Ravi Teja is gearing up for Sampath Nandhi's directorial next. As per the reliable sources, Sampath Nandhi had prepared the script for Pawan Kalyan's Gabbar Singh-2. Since, Pawan rejected the story Sampath Nandhi has roped in Ravi Teja for the same. So, will Ravi Teja be another Gabbar Singh of Tollywood?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada