»   » ಧ್ರುವ ಸರ್ಜಾಗಾಗಿ ಕಥೆ ಬರೆಯುತ್ತಾರಂತೆ ಬಾಲಿವುಡ್ ಸ್ಟಾರ್ ರೈಟರ್ ಶಗುಫ್ತಾ ರಫೀಕ್!

ಧ್ರುವ ಸರ್ಜಾಗಾಗಿ ಕಥೆ ಬರೆಯುತ್ತಾರಂತೆ ಬಾಲಿವುಡ್ ಸ್ಟಾರ್ ರೈಟರ್ ಶಗುಫ್ತಾ ರಫೀಕ್!

Posted By:
Subscribe to Filmibeat Kannada

ಮೊನ್ನೆ ಮೊನ್ನೆ ತಾನೇ ಧ್ರುವ ಸರ್ಜಾ ಅವರಿಗೆ ಅರ್ಜುನ್ ಸರ್ಜಾ ಒಂದು ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಇದರ ಹಿಂದೆಯೇ ಧ್ರುವ ಅವರ ಮತ್ತೊಂದು ಸಿನಿಮಾದ ಸುದ್ದಿ ಇದೀಗ ಕೇಳಿ ಬಂದಿದೆ.

ಸದ್ಯ ಧ್ರುವ ಸರ್ಜಾ ಅವರ ಹೊಸ ಸಿನಿಮಾಗಾಗಿ ಬಾಲಿವುಡ್ ಸಿನಿಮಾ ಬರಹಗಾರತಿ ಶಗುಫ್ತಾ ರಫೀಕ್ ಕಥೆ ಬರೆಯಲಿದ್ದಾರಂತೆ. ಈ ಹಿಂದೆ ದರ್ಶನ್ ಅವರ 'ಜಗ್ಗುದಾದ' ಚಿತ್ರವನ್ನು ನಿರ್ದೇಶನ ಮಾಡಿದ್ದ ರಾಘವೇಂದ್ರ ಹೆಗ್ಡೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ತಮ್ಮ ಈ ಚಿತ್ರದ ಮೂಲಕ ಬಾಲಿವುಡ್ ರೈಟರ್ ಶಗುಫ್ತಾ ಅವರನ್ನು ಮೊದಲ ಬಾರಿಗೆ ಕನ್ನಡಕ್ಕೆ ಕರೆತರುವ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಮುಂದೆ ಓದಿ...

ಧ್ರುವ ಸರ್ಜಾಗೆ ಒಂದು ಕಥೆ

ಹಿಂದಿ ಸಿನಿಮಾರಂಗದಲ್ಲಿ ಈಗಾಗಲೇ ಸಾಕಷ್ಟು ಸೂಪರ್ ಹಿಟ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿರುವ ಶಗುಫ್ತಾ ರಫೀಕ್ ಧ್ರುವ ಸರ್ಜಾ ಅವರಿಗೆ ಈಗ ಒಂದು ಕಥೆ ಬರಲಿದ್ದಾರಂತೆ.

ಸ್ಟಾರ್ ರೈಟರ್

'ಆಶಿಕಿ 2', 'ಹಮಾರಿ ಅಧೂರಿ ಕಹಾನಿ', 'ಮರ್ಡರ್ 2', ಜಿಸ್ಮ್ 2, ಸೇರಿದಂತೆ ಅನೇಕ ಚಿತ್ರಗಳಿಗೆ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಈಗಾಗಲೇ ತೆಲುಗಿನ ಒಂದು ಚಿತ್ರಕ್ಕೆ ಕಥೆ ಬರೆದಿರುವ ಇವರು ಇದೇ ಮೊದಲ ಬಾರಿಗೆ ಕನ್ನಡಕ್ಕೆ ಬರಲಿದ್ದಾರಂತೆ.

'ಜಗ್ಗುದಾದ' ನಿರ್ದೇಶಕ

'ಜಗ್ಗುದಾದಾ' ಖ್ಯಾತಿಯ ನಿರ್ದೇಶಕ ರಾಘವೇಂದ್ರ ಹೆಗ್ಡೆ ಈಗ ಧ್ರುವ ಸರ್ಜಾಗೆ ಒಂದು ಚಿತ್ರವನ್ನು ಮಾಡುವ ಪ್ಲಾನ್ ನಲ್ಲಿದ್ದು, ಈ ಚಿತ್ರದಲ್ಲಿ ಶಗುಫ್ತಾ ರಫೀಕ್ ಅವರ ಕಥೆ ಇರಲಿದೆಯಂತೆ.

ಅಳಿಯ ಧ್ರುವ ಸರ್ಜಾಗೆ ಸಿನಿಮಾ ಮಾಡುತ್ತಾರಂತೆ ಮಾವ ಅರ್ಜುನ್ ಸರ್ಜಾ!

ಅಧಿಕೃತ ಮಾಹಿತಿ ಇಲ್ಲ

ಧ್ರುವ ಸರ್ಜಾ ಅವರ ಈ ಚಿತ್ರದ ಬಗ್ಗೆ ನಿರ್ದೇಶಕ ರಾಘವೇಂದ್ರ ಹೆಗ್ಡೆ ಇನ್ನು ಬಹಿರಂಗವಾಗಿ ಹೇಳಿಲ್ಲ. ಸೋ, ಈ ಚಿತ್ರದ ಬಗ್ಗೆ ಸದ್ಯ ಕೇಳಿ ಬಂದ ಸುದ್ದಿ ಎಷ್ಟರ ಮಟ್ಟಿಗೆ ನಿಜ ಎಂಬುದು ಇನ್ನು ತಿಳಿದಿಲ್ಲ.

ಅಣ್ಣ - ಅತ್ತಿಗೆ ಜೋಡಿ ನೋಡಿ ನಟ ಧ್ರುವ ಸರ್ಜಾ ಹೀಗೆ ಹೇಳುತ್ತಾರೆ!

ಧ್ರುವ ಸರ್ಜಾ ಸಿನಿಮಾಗಳು

ಸದ್ಯ ಧ್ರುವ ಸರ್ಜಾ ನಂದಕಿಶೋರ್ ನಿರ್ದೇಶನದ 'ಪೋಗರು' ಚಿತ್ರ ಮಾಡಲಿದ್ದಾರೆ. ಆದಾದ ಬಳಿಕ ಉದಯ್ ಮೆಗ್ತಾ ಸಿನಿಮಾ, ಜೊತೆಗೆ ಅರ್ಜುನ್ ಸರ್ಜಾ ಅವರ ಚಿತ್ರದಲ್ಲಿ ಕೂಡ ನಟಿಸಲಿದ್ದಾರೆ ಎನ್ನುವ ಮಾತಿದೆ.

English summary
According to the source Bollywood writer Shagufta Rafique will write a story to Dhruva Sarja.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada