ತೆಲುಗಿನ ಮತ್ತೊಂದು ದೊಡ್ಡ ಸಿನಿಮಾದಲ್ಲಿ ಸುದೀಪ್ ನಟನೆ?
Recommended Video

ನಟ ಸುದೀಪ್ ಈಗ ಕನ್ನಡದ ಸಿನಿಮಾಗಳ ಜೊತೆಗೆ ಪರಭಾಷೆಯ ಸಿನಿಮಾಗಳಲ್ಲಿಯೂ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. 'ಈಗ' ಮತ್ತು 'ಬಾಹುಬಲಿ' ನಂತರ ಸುದೀಪ್ ಚಿರಂಜೀವಿ ನಟನೆಯ 151 ಸಿನಿಮಾ 'ಸೈರಾ ನರಸಿಂಹ ರೆಡ್ಡಿ' ನಟಿಸುತ್ತಿದ್ದಾರೆ. ಇದರ ಜೊತೆಗೆ ಮತ್ತೊಂದು ಹೊಸ ತೆಲುಗು ಚಿತ್ರದಲ್ಲಿ ಕಿಚ್ಚ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಇದೀಗ ಬಂದಿದೆ.
'ರಂಗಸ್ಥಳಂ' ಯಶಸ್ಸಿನ ನಂತರ ರಾಮ್ ಚರಣ್ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ಬೋಯಪಟಿ ಶ್ರೀನು ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಹೆಸರಿಡದ ಈ ಸಿನಿಮಾದಲ್ಲಿ ದೊಡ್ಡ ತಾರ ಬಳಗ ಇದ್ದು, ಸುದೀಪ್ ಕೂಡ ಈ ತಂಡ ಸೇರಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. 'ಸೈರಾ ನರಸಿಂಹ ರೆಡ್ಡಿ' ಚಿತ್ರವನ್ನು ರಾಮ್ ಚರಣ್ ನಿರ್ಮಾಣ ಮಾಡಿದ್ದು, ಇದರ ನಂತರ ಮತ್ತೆ ತಮ್ಮ ಹೊಸ ಚಿತ್ರಕ್ಕೆ ಸುದೀಪ್ ಗೆ ಆಫರ್ ನೀಡಿದ್ದಾರಂತೆ.

ಟಾಲಿವುಡ್ ನಲ್ಲಿ ದಿನೇ ದಿನೇ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಸುದೀಪ್ ಈ ಸಿನಿಮಾ ಮಾಡುತ್ತಾರಾ ಇಲ್ವಾ ಎನ್ನುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ. ಇತ್ತ ಕನ್ನಡದಲ್ಲಿ ಸುದೀಪ್ ಸದ್ಯ ಸಾಕಷ್ಟು ಬಿಜಿ ಇದ್ದಾರೆ. 'ಅಂಬಿ ನಿಂಗೆ ವಯಸ್ಸಾಯ್ತೋ' ನಂತರ 'ದಿ ವಿಲನ್' ಚಿತ್ರದ ಹಾಡಿನ ಶೂಟಿಂಗ್ ನಲ್ಲಿ ಅವರು ಭಾಗಿಯಾಗಲಿದ್ದಾರೆ. 'ಕೋಟಿಗೋಬ್ಬ 3' ಚಿತ್ರದ ಮುಹೂರ್ತ ನಾಳೆ (ಮೇ 2) ರಂದು ನಡೆಯಲಿದೆ.


Click it and Unblock the Notifications











