ನಿರ್ದೇಶಕ ಕೋಡ್ಲುಗೆ ಸಾಹಿತಿ ನಾ.ಡಿಸೋಜ ಎಚ್ಚರಿಕೆ
ಶಿವಮೊಗ್ಗ, ಆ.8: ತಮ್ಮ ಅನುಮತಿ ಇಲ್ಲದೆ 'ಬೆಟ್ಟದಪುರ ದಿಟ್ಟರು' ಕೃತಿಯನ್ನು ಚಿತ್ರ ಮಾಡಲು ಹೊರಟಿರುವ ನಿರ್ದೇಶಕ ಕೋಡ್ಲು ರಾಮಕೃಷ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಾಹಿತಿ ನಾ.ಡಿಸೋಜಾ ತಿಳಿಸಿದ್ದಾರೆ.
ಈ ಹಿಂದೆ ಕೋಡ್ಲು ರಾಮಕೃಷ್ಣ ತಮ್ಮ ಕೃತಿ ಬೆಟ್ಟದಪುರದ ದಿಟ್ಟರು ಚಿತ್ರ ಮಾಡುವುದಾಗಿ ಹೇಳಿದ್ದರು. ಆದರೆ ಅವರು ಈ ಸಂಬಂಧ ಯಾವುದೇ ಹಕ್ಕುಗಳನ್ನು ಪಡೆದಿರಲಿಲ್ಲ. ತಮ್ಮ ಅನುಮತಿ ಪಡೆದು ಚಿತ್ರ ಮಾಡುವುದಾಗಿ ಹೇಳಿದ್ದ ಅವರು ಯಾವುದೇ ಕರಾರು ಮಾಡಿಕೊಳ್ಳದೆ ಚಿತ್ರ ಮಾಡಲು ಮುಂದಾಗುತ್ತಿರುವುದು ಮಾಧ್ಯಮಗಳ ಮೂಲಕ ತಮ್ಮ ಗಮನಕ್ಕೆ ಬಂದಿದೆ ಎಂದು ಡಿಸೋಜಾ ತಿಳಿಸಿದರು.
ಬೆಟ್ಟದಪುರದ ದಿಟ್ಟರು ಕಾದಂಬರಿಯನ್ನು ಕೋಡ್ಲು ಮಕ್ಕಳ ಚಿತ್ರ ಮಾಡುವುದಾಗಿ ಡಿಸೋಜಾ ಅವರಿಗೆ ತಿಳಿಸಿದ್ದರು. ಆದರೆ ಯಾವುದೇ ಲಿಖಿತ ಕರಾರು ಮಾಡಿಕೊಳ್ಳದೆ ಸಿನಿಮಾ ಮಾಡಲು ಹೊರಟಿರುವುದು ಡಿಸೋಜಾ ಅವರಿಗೆ ಬೇಸರ ತರಿಸಿ ಕೋಡ್ಲು ಅವರಿಗೆ ಈ ಕುರಿತು ಪತ್ರ ಬರೆದು ಎಚ್ಚರಿಸಿದ್ದಾರೆ.
(ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











