Yash 19: ಯಶ್‌ಗೆ ನರ್ತನ್ ನಿರ್ದೇಶನವಿಲ್ಲ, 'ಕೆಜಿಎಫ್ 3'ಗಾಗಿ ಯಶ್ ಪಟ್ಟು!

ಸದ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಇರುವುದು ಒಂದೇ ಚರ್ಚೆ, ಒಂದೇ ಪ್ರಶ್ನೆ, ‌ಅದು ಯಶ್ ಮುಂದಿನ ಚಿತ್ರದ ಬಗ್ಗೆ. ನಟ ಯಶ್ ಮುಂದಿನ ಸಿನಿಮಾ ಯಾವಾಗ ಮತ್ತು ಯಾವುದು ಎನ್ನುವುದೇ ಯಕ್ಷ ಪ್ರಶ್ನೆ ಆಗಿದೆ‌. ಈ ಯಕ್ಷ ಪ್ರಶ್ನೆ ಉತ್ತರ ಹುಡುಕಿದರೆ, ಒಂದಲ್ಲ ಹಲವು ಉತ್ತರಗಳು ಸಿಗುತ್ತವೆ.

ಆದರೆ ನಟ ಯಶ್ ಮಾತ್ರ ಇದ್ಯಾವುದಕ್ಕೂ ಕೂಡ ತಲೆ ಕೆಡಿಸಿಕೊಂಡಿಲ್ಲ. ತೆರೆ ಮರೆಯಲ್ಲಿ ಮುಂದಿನ ಸಿನಿಮಾಗಾಗಿ ಎಲ್ಲಾ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಮುಂದಿನ ಚಿತ್ರದ ಬಗ್ಗೆ ಯಾವುದೇ ರೀತಿಯ ಸುಳಿವು ಬಿಟ್ಟು ಕೊಟ್ಟಿಲ್ಲ.

ಅಲ್ಲದೇ ಯಶ್ 19ನೇ ಸಿನಿಮಾದ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಿವೆ. ಯಶ್ 19ನೇ ಚಿತ್ರದ ನಿರ್ದೇಶನ ಯಾರು ಮಾಡ್ತಾರೆ. ಸಿನಿಮಾ ಯಾವಾಗ ಶುರುವಾಗಲಿದೆ ಎನ್ನುವ ಬಗ್ಗೆ ಹಲವು ಸುದ್ದಿಗಳು ಹಬ್ಬಿವೆ. ಈಗ 'Y19' ಬಗ್ಗೆ ಮತ್ತೊಂದು ಟ್ವಿಸ್ಟ್ ಎದುರಾಗಿದೆ. ಅದೇನು ಅಂತ ಮುಂದೆ ಓದಿ...

ಯಶ್ ಚಿತ್ರಕ್ಕೆ ನರ್ತನ್ ಹೆಸರು ಕೇಳಿಬಂದಿದೆ!

ಯಶ್ ಚಿತ್ರಕ್ಕೆ ನರ್ತನ್ ಹೆಸರು ಕೇಳಿಬಂದಿದೆ!

ಸದ್ಯಕ್ಕೆ ಯಶ್ 19ನೇ ಸಿನಿಮಾಗೆ ಕೇಳಿ ಬರುತ್ತಿರುವುದು ನಿರ್ದೇಶಕ ನರ್ತನ್ ಹೆಸರು. ನರ್ತನ್, ಯಶ್ ಗೆ ಮುಂದಿನ ಸಿನಿಮಾವನ್ನು ನಿರ್ದೇಶನ ಮಾಡುತ್ತಾರೆ ಎನ್ನಲಾಗುತ್ತಿದೆ. ಈ ಸುದ್ದಿ ಸಾಕಷ್ಟು ದಿಗಳಿಂದ ಹರಿದಾಡುತ್ತಲೇ ಇದೆ. ಹಾಗಾಗಿ ಯಶ್ 19ನೇ ಸಿನಿಮಾಗೆ, ನರ್ತನ್ ಫಿಕ್ಸ್ ಎನ್ನಲಾಗುತ್ತಿದೆ. ಆದರೆ ಇದು ಅಧಿಕೃತವಾಗಿಲ್ಲ. ಈ ಬಗ್ಗೆ ನರ್ತನ್ ಕೂಡ ಯಾವ ಸುಳಿವು ಕೊಟ್ಟಿಲ್ಲ. ಈ ಸುದ್ದಿ ಈಗ ಬೇರೆ ರೂಪ ಪಡೆದಿದೆ. ಯಶ್‌ಗೆ ನರ್ತನ್ ಮುಂದಿನ ಸಿನಿಮಾ ನಿರ್ದೇಶನ ಮಾಡುವುದಿಲ್ಲ ಎನ್ನಲಾಗುತ್ತಿದೆ.

'ಯಶ್ 19'ಗೆ ನರ್ತನ್ ಇಲ್ಲ!

'ಯಶ್ 19'ಗೆ ನರ್ತನ್ ಇಲ್ಲ!

ನಟ ಯಶ್ ಮುಂದಿನ ಹೆಜ್ಜೆಯ ಬಗ್ಗೆ ಕುತೂಹಲ ಹೆಚ್ಚಿದ ಬೆನ್ನಲ್ಲೇ, ಹೊಸ ಟ್ವಿಸ್ಟ್ ಎದುರಾಗಿದೆ. ನಟ ಯಶ್‌ಗೆ ನರ್ತನ್ ನಿರ್ದೇಶನ ಮಾಡುತ್ತಿಲ್ಲವಂತೆ. ಯಶ್ 19ನೇ ಚಿತ್ರದಿಂದ ನರ್ತನ್ ಹೊರ ಬಂದಿದ್ದಾರೆ. ಈ ಚಿತ್ರಕ್ಕೆ ನರ್ತನ್ ನಿರ್ದೇಶನ ಇರುದಿಲ್ಲ ಎನ್ನುವುದು ಬಹುತೇಕ ಖಚಿವಾಗಿದೆ. ಹಾಗಾಗಿ ಯಶ್‌ಗೆ ಮುಂದೆ‌ ಆ್ಯಕ್ಷನ್ ಕಟ್ ಹೇಳೋದು ಯಾರು ಎನ್ನುವ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಮತ್ತೆ KGF?

ಮತ್ತೆ KGF?

ಇನ್ನೂ ನಟ ಯಶ್ ಸದ್ಯಕ್ಕೆ ಕೆಜಿಎಫ್ ‌ಗುಂಗಿನಿಂದ ಹೊರ ಬಂದ ಹಾಗೆ ಕಾಣುತ್ತಿಲ್ಲ. ಮತ್ತೆ ಕೆಜಿಎಫ್ ಸಿನಿಮಾವನ್ನೇ ಮಾಡುವ ಆಲೋಚನೆಯಲ್ಲಿ ಇದ್ದಾರಂತೆ.‌ ಹೌದು ನರ್ತನ್ ಸಿನಿಮಾ ಬದಿಗಿಟ್ಟು, ಕೆಜಿಎಫ್ ‌3 ಸಿನಿಮಾ ಮಾಡಿ ಮುಗಿಸಬೇಕು ಎನ್ನುವ ಲೆಕ್ಕಾಚಾರ ಹಾಕುತಿದ್ದಾರಂತೆ ಯಶ್. ಹಾಗಾಗಿಯೇ ಮುಂದಿನ ಸಿನಿಮಾ ಪ್ರಕಟ ಮಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ವಿಚಾರ ಮತ್ತಷ್ಟು ಸಂಚಲನ ಮೂಡಿಸಿದೆ.

ಯಶ್‌ಗಾಗಿ ಬರ್ತಾರಾ ಪ್ರಶಾಂತ್ ನೀಲ್!

ಯಶ್‌ಗಾಗಿ ಬರ್ತಾರಾ ಪ್ರಶಾಂತ್ ನೀಲ್!

ಇನ್ನು ಕೆಜಿಎಫ್ 3 ಸಿನಿಮಾ ಮಾಡಬೇಕು ಅಂದರೆ ಅದಕ್ಕೆ ಪ್ರಶಾಂತ್ ನೀಲ್ ಬರಬೇಕು. ಸದ್ಯ ಪ್ರಶಾಂತ್ ನೀಲ್ ಮುಂದಿನ ತೆಲುಗು ಸಿನಿಮಾ ಫಿಕ್ಸ್ ಆಗಿದೆ. ಸಲಾರ್ ಬಳಿಕ ಜೂನಿಯರ್ ಎನ್ ಟಿ ಆರ್ ಜೊತೆ ಪ್ರಶಾಂತ್ ನೀಲ್ ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾವನ್ನು ಮುಗಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಹಾಗಾಗಿ ಕೆಜಿಎಫ್ ‌3 ಶುರು ಮಾಡುತ್ತಾರೆ ಎನ್ನುವುದು ಅನುಮಾನವೇ. ಅಥವಾ ಎರಡೂ ಸಿನಿಮಾಗಳನ್ನು ಒಟ್ಟೊಟ್ಟಿಗೆ ಮಾಡಿದರು ಮಾಡಬಹುದು. ಅದೇನೆ ಇದ್ದರು ಯಶ್ ಮುಂದಿನ ಸಿನಿಮಾಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಆದಷ್ಟು ಬೇಗ ಯಶ್ ಸಿಹಿ ಸುದ್ದಿ ಕೊಡಲಿ.

More from Filmibeat

English summary
Y19, Yash Next Movie Will Not be directed By Narthan, Yash Wants to Do KGF 3 Only, know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X