Y19: ಆಯ್ಕೆಯ ಗೊಂದಲದಿಂದ ಯಶ್ ಮೌನಕ್ಕೆ ಶರಣು!

ಸದ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವುದು ಯಕ್ಷ ಪ್ರಶ್ನೆ ಆಗಿದೆ. ಯಶ್ ಮುಂದಿನ ಸಿನಿಮಾ ಯಾವಾಗ ಮತ್ತು ಯಾವುದು ಎನ್ನುವ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಲೇ ಇವೆ. ಈ ಯಕ್ಷ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಗುವ ಸಾಧ್ಯತೆ ಇಲ್ಲವೇ ಇಲ್ಲ.

ಅಲ್ಲದೇ ಯಶ್ 19ನೇ ಸಿನಿಮಾದ ಬಗ್ಗೆ ನಾನಾ ಸುದ್ದಿಗಳು ಹರಿದಾಡುತ್ತಿವೆ. ಯಶ್ 19ನೇ ಚಿತ್ರದ ನಿರ್ದೇಶನ ಯಾರು ಮಾಡ್ತಾರೆ. ಸಿನಿಮಾ ಯಾವಾಗ ಶುರುವಾಗಲಿದೆ ಎನ್ನುವ ಬಗ್ಗೆ ಹಲವು ಸುದ್ದಿಗಳು ಹಬ್ಬಿವೆ.

ಆದರೆ ನಟ ಯಶ್ ಮಾತ್ರ ಇದ್ಯಾವುದಕ್ಕೂ ಕೂಡ ತಲೆ ಕೆಡಿಸಿಕೊಂಡಿಲ್ಲ. ತೆರೆ ಮರೆಯಲ್ಲಿ ಮುಂದಿನ ಸಿನಿಮಾಗಾಗಿ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿತ್ತು. ತಮ್ಮ ಮುಂದಿನ ಚಿತ್ರದ ಬಗ್ಗೆ ಯಾವುದೇ ರೀತಿಯ ಸುಳಿವು ಅವರು ಬಿಟ್ಟು ಕೊಟ್ಟಿಲ್ಲ.

ಯಶ್ 19ಗೆ ನರ್ತನ್ ಇಲ್ಲ!

ಯಶ್ 19ಗೆ ನರ್ತನ್ ಇಲ್ಲ!

ನಟ ಯಶ್ ಮುಂದಿನ ಹೆಜ್ಜೆಯ ಬಗ್ಗೆ ಕುತೂಹಲ ಹೆಚ್ಚಿದ ಬೆನ್ನಲ್ಲೇ, ನರ್ತನ್ ಯಶ್ ಮುಂದಿನ ಸಿನಿಮಾ ನಿರ್ದೇಶನ ಮಾಡುತ್ತಿಲ್ಲ, ಯಶ್ 19ನೇ ಚಿತ್ರದಿಂದ ನರ್ತನ್ ಹೊರ ಬಂದಿದ್ದಾರೆ. ಈ ಚಿತ್ರಕ್ಕೆ ನರ್ತನ್ ನಿರ್ದೇಶನ ಇರುದಿಲ್ಲ ಎನ್ನುವ ಸುದ್ದಿ ಹೊರ ಬಂತು. ಹಾಗಾಗಿ ಯಶ್‌ಗೆ ಮುಂದೆ‌ ಆ್ಯಕ್ಷನ್ ಕಟ್ ಹೇಳೋದು ಯಾರು ಎನ್ನುವ ಕುತೂಹಲ ಕೂಡ ಮತ್ತಷ್ಟು ಹೆಚ್ಚಾಗಿದೆ.

ಮೌನಕ್ಕೆ ಶರಣಾದ ರಾಕಿ ಭಾಯ್!

ಮೌನಕ್ಕೆ ಶರಣಾದ ರಾಕಿ ಭಾಯ್!

ರಾಕಿಂಗ್ ಸ್ಟಾರ್ ಯಶ್ ಮೌನಕ್ಕೆ ಶರಣಾಗಿ ಬಿಟ್ಟಿದ್ದಾರೆ. ಯಶ್ ಮುಂದಿನ ಸಿನಿಮಾದ ಬಗ್ಗೆ ಇಷ್ಟೆಲ್ಲಾ ಚರ್ಚೆಗಳು ನಡೆಯುತ್ತಿದ್ದರೂ, ಸಿನಿಮಾ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡುತಿಲ್ಲ, ಮಾತನಾಡುವ ಗೋಜಿಗೂ ಹೋಗುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲೂ ಕೂಡ ಯಾವ ವಿಚಾರವನ್ನು ಹಂಚಿಕೊಳ್ಳುತ್ತಿಲ್ಲ. ಇತ್ತೀಚೆಗೆ ಕೆಜಿಎಫ್ 2, 100 ದಿನಗಳನ್ನು ಪೂರೈಸಿತು. ಈ ಬಗ್ಗೆ ಸಿನಿಮಾ ತಂಡದ ಹಲವರು ಖುಷಿ ಹಂಚಿಕೊಂಡು, ಆದರೆ ಯಶ್ ಈ ಬಗ್ಗೆಯೂ ಎನೂ ಮಾತನಾಡಲಿಲ್ಲ.

ಗೊಂದಲ್ಲಿ ನಟ ಯಶ್!

ಗೊಂದಲ್ಲಿ ನಟ ಯಶ್!

ಯಶ್ ಈ ನಡೆಯನ್ನು ನೋಡಿ, ಅವರು ಸಿಕ್ಕಾಪಟ್ಟೆ ಗೊಂದಲದಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಕೆಜಿಎಫ್ 2 ಚಿತ್ರದ ದೊಡ್ಡ ಯಶಸ್ಸು ಯಶ್ ಗೊಂದಲಕ್ಕೀಡಾಗುವಂತೆ ಮಾಡಿದೆ. ಮುಂದಿನ ಸಿನಿಮಾ ಕೆಜಿಎಫ್ 2 ರೇಂಜಿಗೆ ಅಲ್ಲದೇ ಹೋದರೂ, ಹಿಟ್ ಎನಿಸಿಕೊಳ್ಳುವ ಅನಿವಾರ್ಯತೆ ಇದೆ. ಹಾಗಾಗಿ ಯಾವ ಸಿನಿಮಾ ಆಯ್ಕೆ ಮಾಡಿಕೊಳ್ಳಬೇಕು ಎನ್ನವ ದೊಡ್ಡ ಗೊಂದಲ ಸೃಷ್ಟಿಸಿದೆಯಂತೆ. ಹಾಗಾಗಿ ಈ ಬಗ್ಗೆ ಯಶ್ ಮೌನ ವಹಿಸಿದ್ದಾರೆ.

ಹಾಲಿಡೇ ಮೂಡ್‌ನಲ್ಲಿ ಯಶ್, ರಾಧಿಕಾ!

ಇಟಲಿ, ಸ್ಲೋವೆನಿಯಾ ದೇಶಗಳಲ್ಲಿ ಸುತ್ತಾಡುತ್ತಿರುವ ಜೋಡಿ ರಜೆಯ ಮಜಾ ಸವಿಯುತ್ತಿದೆ. ಸ್ಲೋವೆನಿಯಾದ‌ ಲೇಕ್ ಬ್ಲಡ್ ಚರ್ಚ್ ಮೆಟ್ಟಿಲುಗಳ ‌ಮೇಲೆ ನಿಂತು ರಾಧಿಕಾ ಪಂಡಿತ್ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಒಂದು ಪುಟ್ಟ ದ್ವೀಪದಲ್ಲಿರೋ ಲೇಕ್ ಬ್ಲಡ್ ಚರ್ಚ್ ಪ್ರವಾಸಿಗರ ಹಾಟ್ ಫೇವರಿಟ್ ಸ್ಪಾಟ್. ಈ ಜೋಡಿ ಹಾಲಿಡೆ ರಜೆಯನ್ನು ಮಜಾ ಮಾಡುತ್ತಿದ್ದರೆ. ಅಭಿಮಾನಿಗಳು ಯಶ್ ಮುಂದಿನ ಸಿನಿಮಾದ ಬಗ್ಗೆ ಅಪ್ಡೇಟ್ ಕೇಳುತ್ತಿದ್ದಾರೆ. ಆದರೆ ಈ ಗೊಂದಲಕ್ಕೆಲ್ಲ ಬ್ರೇಕ್ ಹಾಕಿದ ಯಶ್ ಪ್ರವಾಸ ಕೈಗೊಂಡಿದ್ದಾರೆ. ಆದರೆ ಯಶ್ ಮುಂದಿನ ಸಿನಿಮಾದ ಬಗ್ಗೆ ಅಪ್ಡೇಟ್ ಯಾವಾಗ ಕೊಡ್ತಾರೆ ಅಂತ ಕಾದು ನೋಡ್ಬೇಕಿದೆ.

More from Filmibeat

English summary
Y19, Yash Not Breaking Silence On His Next Movie, Yash Is In Confusion To Choose Y19 know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X